
ನವದೆಹಲಿ(ಜ.25) : ಕೋವಿಡ್‌ನ 3ನೇ ಅಲೆ(Covid 3rd wave) ತಾರಕಕ್ಕೇರುತ್ತಿರುವ ನಡುವೆಯೇ ಕೇಂದ್ರ ಸರ್ಕಾರ ಒಂದು ಸಿಹಿ ಸುದ್ದಿ ನೀಡಿದೆ. ಹಲವು ಮಹಾನಗರಗಳಲ್ಲಿ(City) ಈಗಾಗಲೇ 3ನೇ ಅಲೆ ಇಳಿಮುಖದ ಹಾದಿಯಲ್ಲಿದ್ದು, ಫೆ.15ರ ವೇಳೆಗೆ ದೇಶಾದ್ಯಂತ ಹೊಸ ಪ್ರಕರಣಗಳಲ್ಲಿ(New Covid case) ಇಳಿಕೆ ಆರಂಭವಾಗಲಿದೆ ಎಂದು ಸುಳಿವು ನೀಡಿದೆ. ಈ ಹಿಂದೆ ಹಲವು ವಿಜ್ಞಾನಿಗಳು ನಾನಾ ಮಾದರಿಗಳನ್ನು ಆಧರಿಸಿ ಬಹುತೇಕ ಇದೇ ರೀತಿಯ ಭವಿಷ್ಯ ನುಡಿದಿದ್ದರಾದರೂ, ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ಮೂಲಗಳೇ ಇಂಥದ್ದೊಂದು ಸುದ್ದಿಯನ್ನು ಖಚಿತಪಡಿಸಿವೆ.
ಜೊತೆಗೆ ಕೋವಿಡ್ 3ನೇ ಅಲೆಯನ್ನು ನಿಯಂತ್ರಿಸುವಲ್ಲಿ ದೇಶದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಿದ ಲಸಿಕಾ ಅಭಿಯಾನ(Vaccine Drive) ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಲಸಿಕೆಯಿಂದಾಗಿಯೇ ಸೋಂಕು ತನ್ನ ತೀವ್ರತೆಯನ್ನು ಪಡೆಯುವುದು ಸಾಧ್ಯವಾಗಿಲ್ಲ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
Covid 19 Guidelines: ಜ. 27ಕ್ಕೆ ಸಿಎಂ ನೇತೃತ್ವದಲ್ಲಿ ಸಂಪುಟ ಸಭೆ: ಕೋವಿಡ್ ರೂಲ್ಸ್‌ನಿಂದ ಮತ್ತಷ್ಟು ರಿಲೀಫ್
ಮಹಾನಗರಗಳಲ್ಲಿ ಇಳಿಕೆ:
ದೇಶದ ಮಹಾನಗರಗಳಾದ ಮುಂಬೈ, ದೆಹಲಿ, ಕೋಲ್ಕತಾ, ಚೆನ್ನೈನಲ್ಲಿ ಸೋಂಕಿನ ಪ್ರಮಾಣ ಈಗಾಗಲೇ ತಾರಕಕ್ಕೇರಿ, ಕಳೆದ 7 ದಿನಗಳಿಂದ ಇಳಿಕೆಯ ಹಾದಿಯಲ್ಲಿದೆ. ದೆಹಲಿಯಲ್ಲಿ ಭಾನುವಾರ 9197 ಕೇಸು ದಾಖಲಾಗಿದೆ. ಅದು ಹಿಂದಿನ ದಿನಕ್ಕಿಂತ ಶೇ.19ರಷ್ಟುಕಡಿಮೆ. ಜೊತೆಗೆ ಪಾಸಿಟಿವಿಟಿ ದರ ಕೂಡ ಜನವರಿಯಲ್ಲಿ ಗರಿಷ್ಠ ಎನ್ನಿಸಿದ್ದ ಶೇ.30ರಿಂದ ಈಗ ಶೇ.13.3ಕ್ಕೆ ಇಳಿದಿದೆ. ಮುಂಬೈನಲ್ಲಿ ಕೆಲ ದಿನಗಳ ಹಿಂದೆ ನಿತ್ಯ 10000 ಕೇಸು ದಾಖಲಾಗುತ್ತಿದ್ದು, ಅದು ಇದೀಗ 2550ಕ್ಕೆ ಇಳಿದಿದೆ. ಕೋಲ್ಕತಾ, ಚೆನ್ನೈನಲ್ಲೂ ಇದೇ ಪರಿಸ್ಥಿತಿ ಇದೆ.
ಬೆಂಗಳೂರು: ರಾಜ್ಯದಲ್ಲಿ(Karnataka) ಸೋಮವಾರ 46426 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇದೇ ವೇಳೆ, ಕೋವಿಡ್‌ಗೆ 32 ಮಂದಿ ಬಲಿಯಾಗಿದ್ದಾರೆ. ಕರ್ನಾಟಕದಲ್ಲಿ 3ನೇ ಅಲೆ ಕಾಣಿಸಿಕೊಂಡ ಬಳಿಕ ಒಂದೇ ದಿನದಲ್ಲಿ ಇಷ್ಟೊಂದು ಸಾವುಗಳು ಸಂಭವಿಸುತ್ತಿರುವುದು ಇದೇ ಮೊದಲು. ಇದೇ ವೇಳೆ 33% ಪಾಸಿಟಿವಿಟಿ ದರ ದಾಖಲಾಗಿದ್ದು, ಇದು ಕೂಡ ಮೂರನೆ ಅಲೆಯ ಗರಿಷ್ಠ ಎನಿಸಿಕೊಂಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಸೋಂಕು ಇಳಿಯುತ್ತಿದ್ದು, ಇತರೆ ಜಿಲ್ಲೆಗಳಲ್ಲಿ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ 41 ಸಾವಿರ ಮಂದಿ ಸೋಮವಾರ ಗುಣಮುಖರಾಗಿದ್ದು, ಇದು ಕೂಡ 3ನೇ ಅಲೆಯಲ್ಲೇ ಗರಿಷ್ಠವಾಗಿದೆ.
ಒಮಿಕ್ರಾನ್ ಹೊಸ ತಳಿ BA.2 ಎಷ್ಟು ಅಪಾಯಕಾರಿ? ಭಾರತದಲ್ಲಿ 530 ಮಂದಿಯಲ್ಲಿ ಪತ್ತೆ
ಇದೇ ಪ್ರವೃತ್ತಿ ಶೀಘ್ರವೇ ಇತರೆ ನಗರಗಳಲ್ಲೂ ಮುಂದುವರಿಯಲಿದ್ದು, ಈಗಲೂ ಭಾರೀ ಸಂಖ್ಯೆಯ ಪ್ರಕರಣಗಳನ್ನು ಕಾಣುತ್ತಿರುವ ರಾಜ್ಯಗಳಲ್ಲಿ ಸೋಂಕು ಇಳಿಯಲು ಆರಂಭವಾಗಲಿದೆ. ಒಟ್ಟಾರೆ ಫೆ.15ರ ವೇಳೆಗೆ ದೇಶದೆಲ್ಲೆಡೆ ಹೊಸ ಪ್ರಕರಣಗಳಲ್ಲಿ ಇಳಿಕೆ ಆರಂಭವಾಗಲಿದೆ ಎಂದು ಅವು ತಿಳಿಸಿವೆ.
ಲಸಿಕೆ ಪ್ರಭಾವ:
3ನೇ ಅಲೆಯ ಹಾನಿಯನ್ನು ತಡೆಗಟ್ಟುವಲ್ಲಿ ಕೋವಿಡ್ ಲಸಿಕೆ ಅತ್ಯಂತ ಪರಿಣಾಮ ಬೀರಿದೆ. ದೇಶದಲ್ಲಿ ಈಗಾಗಲೇ ಶೇ.74ರಷ್ಟುಅರ್ಹರು ಎರಡೂ ಡೋಸ್ ಪಡೆದುಕೊಂಡಿರುವುದು, ಅವರ ಮೇಲೆ ಸೋಂಕಿನ ದಾಳಿಯನ್ನು ತಡೆದಿದೆ ಇಲ್ಲವೇ ಬಹಳಷ್ಟುಪ್ರಮಾಣದಲ್ಲಿ ಕುಂಠಿತಗೊಳಿಸಿದೆ. ಹೀಗಾಗಿ 3ನೇ ಅಲೆ ಅಷ್ಟುಪರಿಣಾಮ ಬೀರಿಲ್ಲ ಎಂದು ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ.
ಐಐಟಿ-ಮದ್ರಾಸ್ ತಜ್ಞರು ನಡೆಸಿರುವ ಅಧ್ಯಯನದ ಪ್ರಕಾರ, ಇಡೀ ದೇಶದಲ್ಲಿ ಮುಂದಿನ 15 ದಿನಗಳಲ್ಲಿ (ಫೆ.6ರವರೆಗೆ) ಸೋಂಕು ಪರಾಕಾಷ್ಠೆಗೆ ತಲುಪಬಹುದಾಗಿದೆ. ದೇಶದಲ್ಲಿ ಜ.14ರಿಂದ 21ರ ನಡುವಿನ ವಾರದಲ್ಲಿ ಆರ್-ವ್ಯಾಲ್ಯೂ (ಒಬ್ಬ ಸೋಂಕಿತನಿಂದ ಎಷ್ಟುಜನರಿಗೆ ಕೋವಿಡ್ ಹರಡುತ್ತದೆ ಎಂದು ಅಳೆವ ಪ್ರಮಾಣ) 1.57ಕ್ಕೆ ಇಳಿದಿದೆ. ಇದರ ಇಂದಿನ 2 ವಾರಗಳಲ್ಲಿ ಕ್ರಮವಾಗಿ 2.2 ಹಾಗೂ 4 ಇತ್ತು. ಇದನ್ನು ಸೋಂಕಿನ ಇಳಿಕೆಯ ಆರಂಭಿಕ ಸೂಚಕ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ