ಉತ್ತರಪ್ರದೇಶ(ಜ.24): ಸರ್ಕಾರಿ ಶಾಲೆಯ ಪುಟ್ಟ ಬಾಲಕಿಯೊಬ್ಬಳು ಅಪ್ಪಅಮ್ಮನಿಗೆ ಅರ್ಪಣೆ ಮಾಡಿ ಹಾಡಿದ ಭಾವಪೂರ್ಣವಾದ ಹಾಡೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲೆಯೊಬ್ಬಳು ಭೋಜ್‌ಪುರಿ ಭಾಷೆಯಲ್ಲಿ ಸುಶ್ರಾವ್ಯವಾಗಿ ಹಾಡುತ್ತಿದ್ದು, ಇದರ ಭಾವವೂ ಕೇಳುಗರ ಕಣ್ಣನ್ನು ತೇವಗೊಳಿಸುತ್ತಿದೆ. ಈ ಹಾಡಿನಲ್ಲಿ ಬಾಲಕಿಯೂ ತಂದೆ ತಾಯಿ ಮಕ್ಕಳಿಗಾಗಿ ಮಾಡುವ ತ್ಯಾಗದ ಬಗ್ಗೆ ಹಾಡು ಹಾಡುತ್ತಾಳೆ. ಈ ವಿಡಿಯೋವನ್ನು ಭಾರತೀಯ ಆಡಳಿತ ಸೇವೆ(IAS) ಅಧಿಕಾರಿ ಅವನೀಶ್ ಶರಣ್ ( Awanish Sharan) ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಈ ಹಾಡು ನೋಡುಗರ ಕಣ್ಣಲ್ಲಿ ನೀರು ತರಿಸುತ್ತಿದೆ.
ಮಕ್ಕಳಿಗಾಗಿ ತಂದೆ ತಾಯಿಯರು ಮಾಡುವ ತ್ಯಾಗಕ್ಕೆ ಎಂದೂ ಬೆಲೆ ಕಟ್ಟಲಾಗದು. ಅಲ್ಲದೇ ನಾವು ನಮ್ಮ ಪೋಷಕರಿಗೆ ಎಂದಿಗೂ ಅವರು ಮಾಡಿದ ತ್ಯಾಗಕ್ಕೆ ತಕ್ಕಂತೆ ಕೃತಜ್ಞತೆ ಸಲ್ಲಿಸಲು ಸಾಧ್ಯವಾಗುವುದೇ ಇಲ್ಲ. ಈ ವಿಚಾರವನ್ನು ಯಾರೂ ಧಿಕ್ಕರಿಸುವಂತಿಲ್ಲ. ಹೀಗಾಗಿ ಅಪ್ಪ ಅಮ್ಮನ ತ್ಯಾಗದ ಕುರಿತಾಗಿ ಹಾಡಿರುವ ಈ ಹಾಡು ಎಲ್ಲರನ್ನು ಭಾವುಕರನ್ನಾಗಿಸುತ್ತಿದೆ.
‘माँ-बाप’ का क़र्ज़ कभी चुकाया नहीं जा सकता.
भोजपुरी में भावपूर्ण प्रस्तुति.❤️ pic.twitter.com/MtSPpoZJ2Z
ಉತ್ತರಪ್ರದೇಶದ(Uttarapradesh) ಭಟವಾಲಿಯಾ (Bhatwalia) ಗ್ರಾಮದ ಶಾಲೆಯೊಂದರಲ್ಲಿ ಬಾಲಕಿಯೊಬ್ಬಳು ಹಾಡು ಹಾಡುತ್ತಿರುವ ದೃಶ್ಯ ಇದಾಗಿದೆ. ಈ ಹಾಡಿನಲ್ಲಿ ಬಾಲಕಿಯೂ, ಪೋಷಕರು ಮಕ್ಕಳಿಗೆ ಉತ್ತಮ ಜೀವನಕ್ಕಾಗಿ ತಮ್ಮಿಂದ ಏನೆಲ್ಲಾ ಸಾಧ್ಯವೋ ಅದೆಲ್ಲವನ್ನೂ ಮಾಡುತ್ತಾರೆ. ಅವರು ಮಕ್ಕಳಿಗಾಗಿ ಹೇಗೆ ಕಷ್ಟ ಪಡುತ್ತಾರೆ. ಹಾಗೆಯೇ ಅವರು ಮಾಡುವ ಸಾಲವನ್ನು ಎಂದಿಗೂ ತೀರಿಸಲೇ ಆಗುವುದಿಲ್ಲ ಎಂಬುದು ಈ ಹಾಡಿನ ಭಾವಾಂಶವಾಗಿದೆ. ಭಾವುಕ ಸಾಲುಗಳ ಜೊತೆಗೆ ಬಾಲಕಿಯ ಸುಮಧುರ ಕಂಠವೂ ಈ ವಿಡಿಯೋದ ತೂಕವನ್ನು ಹೆಚ್ಚಿಸಿದೆ.
ವಯಸ್ಸು ಕೇವಲ 12... ಪಂಚಿಂಗ್‌ನಿಂದ ಮರವನ್ನೇ ಉರುಳಿಸುತ್ತಿದ್ದಾಳೆ ಬಾಲಕಿ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಆದ ಬಳಿಕ ಒಂದು ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಜೊತೆಗೆ ಈ ಪುಟ್ಟ ಬಾಲಕಿಯ ಕಂಠಸಿರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಭಿನಂದನೆಯ ಪ್ರವಾಹವೇ ಹರಿದು ಬರುತ್ತಿದೆ. ಯಾವುದೇ ಸಂಗೀತಾ ಉಪಕರಣಗಳಿಲ್ಲ. ಆದರೂ ಎಂತಹ ಅದ್ಭುತ ಧ್ವನಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಕಲೆಗೆ ಬಡತನವಿಲ್ಲ ಎಂಬುದನ್ನು ಈ ಬಾಲಕಿ ತೋರಿಸಿದ್ದಾಳೆ.
ಪ್ರೀತಿಯ ನಾಯಿಯೊಂದಿಗೆ ಪುಟ್ಟ ಬಾಲಕಿಯ ಸಾಹಸ... ನೋಡಿ viral video
ಮಕ್ಕಳಿಗೆ ಚಿಕ್ಕಂದಿನಲ್ಲೇ ಕಲಿಸಿಕೊಡಬೇಕಾದ ವಿಚಾರಗಳಿವು:
ತಾಯಿಯೇ ಮೊದಲ ಗುರು ಅನ್ನೋ ಮಾತೇ ಇದೆ. ಮಗುವಿನ ಮೊದಲ ಗುರುಗಳು ಪೋಷಕರು. ಮಗುವಿನ ತಪ್ಪನ್ನು ತಿದ್ದಿ, ಬುದ್ಧಿ ಹೇಳಿ ಒಳ್ಳೆಯ ದಾರಿಯಲ್ಲಿ ನಡೆಸಬೇಕಾದವರು. ಹೀಗಾಗಿಯೇ ಹೆತ್ತವರು ಮಕ್ಕಳಿಗೆ ಏನನ್ನು ಹೇಳಿಕೊಡುತ್ತಾರೆ ಎಂಬುದು ಮುಖ್ಯವಾಗುತ್ತದೆ. ಪೋಷಕರು ಹೇಳಿಕೊಡುವ ಮಾತುಗಳನ್ನೇ ಮಕ್ಕಳು ಕಲಿಯುತ್ತಾರೆ. ಅದನ್ನೇ ಅನುಸರಿಸುತ್ತಾರೆ. ತಂದೆ-ತಾಯಿಯ ಸಕಾರಾತ್ಮಕ ಬೋಧನೆಗಳು ಮಕ್ಕಳ ವ್ಯಕ್ತಿತ್ವವನ್ನು ರೂಪೀಕರಿಸುತ್ತದೆ. ಹೀಗಾಗಿ ಮಕ್ಕಳಿಗೆ ಏನನ್ನು ಹೇಳಿಕೊಡಬೇಕು, ಏನನ್ನು ಹೇಳಿಕೊಡಬಾರದು ಎಂಬುದನ್ನು ತಿಳಿದಿರಬೇಕಾದುದು ಅತೀ ಅಗತ್ಯ.
ಉತ್ತಮ ಮಕ್ಕಳು ಮಾತ್ರ ಮುಂದೆ ದೊಡ್ಡವರಾದಾಗ ಉತ್ತಮ ಪ್ರಜೆಗಳಾಗಲು ಸಾಧ್ಯ. ಹೀಗಾಗಿ ಮಕ್ಕಳು ಚಿಕ್ಕವರಿದ್ದಾಗಲೇ ಅವರಿಗೆ ಅಗತ್ಯವಾದ ಬುದ್ಧಿಯನ್ನು ಹೇಳಿ ಕೊಡಬೇಕು. ಇದರಿಂದ ದೊಡ್ಡವರಾದಾಗಲೂ ಅವರು ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ಪ್ರತಿ ಮಗುವಿಗೆ ಪ್ರೀತಿ, ಸಹಾನುಭೂತಿ ಮತ್ತು ದಯೆಯನ್ನು ಕಲಿಸಬೇಕು. ಇದರಿಂದ ಮಕ್ಕಳೂ ಬೆಳೆಯುತ್ತಿರುವ ವರ್ಷಗಳಲ್ಲಿ ಇತರರನ್ನು ಇದೇ ಮನೋಭಾವದಿಂದ ನೋಡುತ್ತಾರೆ. ನಿಮ್ಮ ಮಗುವಿಗೆ ನೀವು ಕಲಿಸಬೇಕಾದ 5 ವಿಷಯಗಳು ಇಲ್ಲಿವೆ. ಪ್ರೀತಿಯ ಜೀವನ, ದಯೆ ಎಲ್ಲಕ್ಕಿಂತ ಮಿಗಿಲು, ತಾಳ್ಮೆ , ಸ್ವಗೌರವ ಹಾಗೂ ಪರಿಶ್ರಮ ಇವು ಮಕ್ಕಳ ಮನಸ್ಸಿನ ಮೇಲೆ ಧನಾತ್ಮಕವಾಗಿ ಪರಿಣಾಮವನ್ನು ಬೀರುತ್ತದೆ.