ಬ್ರಿಟನ್‌ ವೈರಸ್‌ ವಿರುದ್ಧವೂ ಕೋವ್ಯಾಕ್ಸಿನ್‌ ಲಸಿಕೆ ಪರಿಣಾಮಕಾರಿ: ಅಧ್ಯಯನ

By Suvarna NewsFirst Published Jan 28, 2021, 12:42 PM IST
Highlights

ಬ್ರಿಟನ್‌ ವೈರಸ್‌ ವಿರುದ್ಧವೂ ಕೋವ್ಯಾಕ್ಸಿನ್‌ ಲಸಿಕೆ ಪರಿಣಾಮಕಾರಿ: ಅಧ್ಯಯನ| ಬಯೋ ಆರ್‌ಎಕ್ಸ್‌ಐವಿ ವೆಬ್‌ಸೈಟ್‌ನ ವರದಿ

ಹೈದರಾಬಾದ್‌(ಜ.28): ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್‌ ಲಸಿಕೆ, ಹೈಸ್ಪೀಡ್‌ ಬ್ರಿಟನ್‌ ವೈರಸ್‌ನ ಮಾದರಿಯನ್ನು ತಟಸ್ಥಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಜೀವ ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನಾ ವರದಿಗಳ ಮುದ್ರಣ ಪೂರ್ವ ವಿಮರ್ಶೆಗಳನ್ನು ಪ್ರಕಟಿಸುವ ಬಯೋಆರ್‌ಎಕ್ಸ್‌ಐವಿ ಡಾಟ್‌ ಒಆರ್‌ಜಿ ವೆಬ್‌ಸೈಟ್‌ನಲ್ಲಿ ಈ ಮಾಹಿತಿ ನೀಡಲಾಗಿದೆ. ಈಗಾಗಲೇ ಕೋವ್ಯಾಕ್ಸಿನ್‌ ಪಡೆದಿದ್ದ 26 ಜನರ ರಕ್ತವನ್ನು ಪಡೆದು ಅದನ್ನುಉ ಪಿಆರ್‌ಎನ್‌ಟಿ50 ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಕೋವ್ಯಾಕ್ಸಿನ್‌ ಲಸಿಕೆ ಬ್ರಿಟನ್‌ ವೈರಸ್‌ ಅನ್ನು ತಟಸ್ಥಗೊಳಿರುವುದು ಕಂಡುಬಂದಿದೆ.

ಅಲ್ಲದೇ ಕೋವಿಡ್‌-19 ವೈರಸ್‌ನಷ್ಟೇ ಹೊಸ ಮಾದರಿಯ ವಿರುದ್ಧವೂ ಪರಿಣಾಮಕಾರಿ ಆಗಿರುವುದು ಸಾಬೀತಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

click me!