'ದಿಲ್ಲಿ ದಂಗೆ, ರೈತರ ಶಾಂತಿಯುತ ಹೋರಾಟ ಹತ್ತಿಕ್ಕಲು ವಸ್ಥಿತ ಸಂಚು'

By Kannadaprabha NewsFirst Published Jan 28, 2021, 11:54 AM IST
Highlights

ದಿಲ್ಲಿ ದಂಗೆ ವ್ಯವಸ್ಥಿತ ಸಂಚು: ಕಿಸಾನ್‌ ಮೋರ್ಚಾ| ನಟ ದೀಪ್‌ ಸಿಧು, ಕಿಸಾನ್‌ ಮಜ್ದೂರ್‌ನಂಥವರಿಂದ ಈ ಕೃತ್ಯ| ರೈತರ ಶಾಂತಿಯುತ ಹೋರಾಟ ಹತ್ತಿಕ್ಕಲು ಈ ಯತ್ನ| ಹಿಂಸಾಚಾರಕ್ಕೂ ನಮಗೂ ಸಂಬಂಧವಿಲ್ಲ

ನವದೆಹಲಿ(ಜ.28): ಕೇಂದ್ರದ ಕೃಷಿ ಕಾಯ್ದೆಗಳ ಹಿಂಪಡೆತ ಮತ್ತು ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಮಂಗಳವಾರ ನಡೆದ ಟ್ರ್ಯಾಕ್ಟರ್‌ ಪರೇಡ್‌ ಹಿಂಸಾಚಾರಕ್ಕೆ ತಿರುಗಿದ್ದರ ಹಿಂದೆ ವ್ಯವಸ್ಥಿತವಾದ ಷಡ್ಯಂತ್ರವಿದೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ದೂರಿದೆ.

ಈ ಬಗ್ಗೆ ಬುಧವಾರ ಹೇಳಿಕೆ ಬಿಡುಗಡೆ ಮಾಡಿರುವ ದಿಲ್ಲಿ ರೈತರ ಪ್ರತಿಭಟನೆ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್‌ ಮೋರ್ಚಾ, ‘ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಅನ್ನದಾತರ ಶಾಂತಿಯುತ ಪ್ರತಿಭಟನೆಯಿಂದ ಬೆಚ್ಚಿಬಿದ್ದಿರುವ ಸರ್ಕಾರವು ಕಿಸಾನ್‌ ಮಜ್ದೂರ್‌ ಸಂಘರ್ಷ ಸಮಿತಿ ಹಾಗೂ ಪಂಜಾಬಿ ನಟ ದೀಪ್‌ ಸಿಧು ಸೇರಿದಂತೆ ಇನ್ನಿತರ ಸಮಾಜಘಾತುಕ ಶಕ್ತಿಗಳ ಜೊತೆ ಸೇರಿ ಇಂಥ ಹೀನ ಕೃತ್ಯಕ್ಕಿಳಿದಿದೆ’ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಆದರೆ ಇದಕ್ಕೆಲ್ಲಾ ನಾವು ಬಗ್ಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಜೊತೆಗೆ ಮಂಗಳವಾರ ಟ್ರ್ಯಾಕ್ಟರ್‌ ರಾರ‍ಯಲಿ ಹಿಂಚಾರಕ್ಕೆ ತಿರುಗಿದ್ದರ ಕುರಿತಾಗಿ ತುರ್ತು ಸಭೆ ನಡೆಸಿ, ಮುಂದಿನ ಹೋರಾಟದ ರೂಪುರೇಷೆಗಳನ್ನು ರೂಪಿಸಿದ್ದಾರೆ.

ಜನವರಿ 26ರಂದು ರೈತರ ಟ್ರ್ಯಾಕ್ಟರ್‌ ಪರೇಡ್‌ ಘೋಷಣೆ ಮಾಡಿದಾಗಲೇ ದೀಪ್‌ ಸಿಧು ಸೇರಿದಂತೆ ಇನ್ನಿತರ ಸಮಾಜಘಾತುಕ ಶಕ್ತಿಗಳು ರೈತರ ಪ್ರತಿಭಟನೆಯನ್ನು ದಿಕ್ಕು ತಪ್ಪಿಸುವ ವ್ಯವಸ್ಥಿತ ಸಂಚು ನಡೆಸಿದ್ದಾರೆ. ಈ ಪಿತೂರಿಯ ಭಾಗವಾಗಿ ರೈತ ಸಂಘಟನೆಯಾದ ಕಿಸಾನ್‌ ಮಜ್ದೂರ್‌ ಸಂಘರ್ಷ ಸಮಿತಿ ಹಾಗೂ ಇತರರು ಹೊರ ವರ್ತುಲ ರಸ್ತೆಯಲ್ಲಿ ಚಲಿಸಿ ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜದ ಬಳಿಯೇ ಸಿಖ್‌ ಧ್ವಜ ಹಾರಿಸಿದ್ದಾರೆ. ಇದಕ್ಕಾಗಿ ಕಿಸಾನ್‌ ಮಜ್ದೂರ್‌ ಸಂಘರ್ಷ ಸಮಿತಿ ರೈತರು ಟ್ರ್ಯಾಕ್ಟರ್‌ ರಾರ‍ಯಲಿ ಆರಂಭದ 2 ಗಂಟೆಗಳ ಮುಂಚಿತವಾಗಿಯೇ ರಾರ‍ಯಲಿ ಆರಂಭಿಸಿದ್ದರು ಎಂದು ಕಿಸಾನ್‌ ಮೋರ್ಚಾ ಹೇಳಿದೆ.

click me!