ದಿಲ್ಲಿ ದಂಗೆಕೋರರಿಂದ ಕೆಂಪುಕೋಟೆ ಕ್ಯಾಮರಾ, ಸೇರಿ ಹಲವು ವಸ್ತು ಜಖಂ!

By Kannadaprabha News  |  First Published Jan 28, 2021, 11:14 AM IST

ದಿಲ್ಲಿ ದಂಗೆಕೋರರಿಂದ ಕೆಂಪುಕೋಟೆ ಕ್ಯಾಮರಾ, ಸೇರಿ ಹಲವು ವಸ್ತು ಜಖಂ| ಘಟನೆಯ ವರದಿ ಸಲ್ಲಿಕೆಗೆ ಪ್ರವಾಸೋದ್ಯಮ ಸಚಿವ ಸೂಚನೆ


ನವದೆಹಲಿ(ಜ.28): ಮಂಗಳವಾರ ದೆಹಲಿಯಲ್ಲಿ ನಡೆದ ಹಿಂಸಾಚಾರದ ವೇಳೆ ಕೆಂಪುಕೋಟೆಯಲ್ಲೂ ಭಾರೀ ಹಾನಿ ಸಂಭವಿಸಿದೆ. ರೈತರ ಗುಂಪಿನಲ್ಲಿದ್ದ ದುಷ್ಕರ್ಮಿಗಳ ತಂಡವು, ಕೆಂಪುಕೋಟೆಯ ಆಡಳಿತ ಕಚೇರಿಗಳು, ಭದ್ರತಾ ಕ್ಯಾಮರಾಗಳು, ಕಿಟಕಿಯ ಗಾಜುಗಳು, ಟಿಕೆಟ್‌ ಕೌಂಟರ್‌ಗಳು, ಏಬ್ಯಾಗೇಜ್‌ಗಳ ಸ್ಕಾ್ಯನರ್‌ಗಳು, ಸ್ವಯಂಚಾಲಿತ ಗೇಟುಗಳು ಪುಡಿ-ಪುಡಿ ಮಾಡಿದೆ.

ಅಲ್ಲದೆ ಸಿಐಎಸ್‌ಎಫ್‌ ಭದ್ರತಾ ಸಿಬ್ಬಂದಿಯ ವಾಹನ ಕೂಡಾ ದಾಳಿಯಲ್ಲಿಲ ನಜ್ಜುಗುಜ್ಜಾಗಿದೆ.

Tap to resize

Latest Videos

undefined

ಈ ನಡುವೆ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್‌ ಪಟೇಲ್‌ ಬುಧವಾರ ಕೆಂಪುಕೋಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಲ್ಲದೆ ರೈತರ ಪ್ರತಿಭಟನೆ ಕುರಿತಾದ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವಿಚಾರದ ಬಗ್ಗೆ ಈಗೇನು ಮಾತನಾಡಲ್ಲ. ವರದಿ ಬಂದ ಬಳಿಕ ಎಲ್ಲದಕ್ಕೂ ಉತ್ತರಿಸುತ್ತೇನೆ ಎಂದಷ್ಟೇ ಹೇಳಿದರು.

click me!