Good Friday ಕ್ರಿಸ್ತನ ಧೈರ್ಯ, ತ್ಯಾಗ ಸ್ಮರಿಸಿದ ಪ್ರಧಾನಿ, ಆದರ್ಶ ಜನರಿಗೆ ದಾರಿ ದೀಪ!

Published : Apr 15, 2022, 04:11 PM IST
Good Friday ಕ್ರಿಸ್ತನ ಧೈರ್ಯ, ತ್ಯಾಗ ಸ್ಮರಿಸಿದ ಪ್ರಧಾನಿ, ಆದರ್ಶ ಜನರಿಗೆ ದಾರಿ ದೀಪ!

ಸಾರಾಂಶ

ಏಸುಕ್ರಿಸ್ತರ ಸೇವೆ ಮತ್ತು ಸಹೋದರತ್ವದ ಆದರ್ಶ ದಾರಿ ದೀಪ ಇಂದು ತ್ಯಾಗ, ಧೈರ್ಯದ ದಿನ, ಟ್ವೀಟ್ ಮೂಲಕ ಶುಭಕೋರಿದ ಮೋದಿ ಇಂದು ಕ್ರೈಸ್ತರ ಪವಿತ್ರ ದಿನ ಗುಡ್ ಫ್ರೈಡ್

ನವದೆಹಲಿ(ಏ.15): ಕ್ರೈಸ್ತರ ಶುಭ ಶುಕ್ರವಾರ ಪವಿತ್ರ ದಿನವನ್ನು ವಿಶ್ವದೆಲ್ಲೆಡೆ ಆಚರಿಸಲಾಗಿದೆ. ಯೇಸು ಕಿಸ್ತ ಶಿಲುಬೆಗೇರಿದ ದಿನವಾದ ಇಂದು ವಿಶ್ವಾದ್ಯಂತ ಶುಭ ಶುಕ್ರವಾರವಾಗಿ ಆಚರಿಸಲಾಗುತ್ತದೆ. ಈ ದಿನದಂದು ಪ್ರಧಾನಿ ನರೇಂದ್ರ ಮೋದಿ ಯೇಸು ಕಿಸ್ತನ ತ್ಯಾಗ, ಸೇವೆ ಹಾಗೂ ಸಹೋದರತ್ವದ ಆದರ್ಶಗಳು ಜನರಿಗೆ ಮಾರ್ಗದರ್ಶಕ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಶುಭ ಶುಕ್ರವಾರದಂದು ಯೇಸು ಕ್ರಿಸ್ತನ ಧೈರ್ಯ ಮತ್ತು ತ್ಯಾಗವನ್ನು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ, ಏಸುಕ್ರಿಸ್ತರ ಸೇವೆ ಮತ್ತು ಸಹೋದರತ್ವದ ಆದರ್ಶಗಳು ಜನರಿಗೆ ಮಾರ್ಗದರ್ಶಕ ಎಂದಿದ್ದಾರೆ.   ಇಂದು ನಾವೆಲ್ಲಾ ಯೇಸು ಕ್ರಿಸ್ತನ ಧೈರ್ಯ ಹಾಗೂ ತ್ಯಾಗವನ್ನು ಸ್ಮರಿಸುತ್ತೇವೆ ಎಂದು ಮೋದಿ ಟ್ವೀಟ್ ಮೂಲಕ ಕ್ರೈಸ್ತ ಸಮುದಾಯಕ್ಕೆ ಶುಭಕೋರಿದ್ದಾರೆ.

Good Friday 2022: ಈ ದಿನದ ಮಹತ್ವ, ಹಿನ್ನೆಲೆ ಹಾಗೂ ಆಚರಣೆ ಏನು?

ಯೇಸು ಕ್ರಿಸ್ತನ ಶಿಲುಬೆಗೇರಿಸಿದ ದಿನವನ್ನು ಶುಭ ಶುಕ್ರವಾರ(ಗುಡ್ ಫ್ರೈಡೇ) ಎಂದು ಆಚರಿಸಲಾಗುತ್ತದೆ. ಭಾರತದಲ್ಲಿ ಉಪವಾಸದ ಮೂಲಕ ಕ್ರೈಸ್ತ ಸಮುದಾಯ ಯೇಸು ಸ್ಮರಣೆ ಮಾಡಲಿದ್ದಾರೆ. ಯೇಸು ಕ್ರಿಸ್ತನಿಗೆ ಶಿಲುಬೆಯ ಮರಣ ಶಿಕ್ಷೆ ವಿಧಿಸಿದಲ್ಲಿಂದ ಆರಂಭವಾಗಿ, ಶರೀರ ಸಮಾದಿ ಮಾಡುವ ವರೆಗಿನ 14 ಪ್ರಮುಖ ಘಟನಾವಳಿಗಳನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಆಯಾ ಘಟಾನವಳಿಗಳಂದು ಯೇಸು ಸ್ಮರಣೆ ಮೂಲಕ ಶಾಂತಿಯ ಸಂದೇಶ ಸಾರಲಾಗುತ್ತದೆ.

 

 

ಭಾರತೀಯದ ಚರ್ಚ್‌ಗಳಲ್ಲಿ ಯೇಸು ಶಿಲುಬೆಯ ಹಾದಿ ಮನನ ಮಾಡುವ ಸಂದರ್ಭದಲ್ಲಿ ವಿವಿಧ ಕಷ್ಟಸಂಕಷ್ಟಗಳಲ್ಲಿರುವ ಜನರಿಗಾಗಿ ಮತ್ತು ಒಟ್ಟು ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. 

Good Friday 2022: ಕ್ರೈಸ್ತರ ಹಬ್ಬಕ್ಕೆ ಹೀಗೆ ವಿಶ್ ಮಾಡಿ..

ಯೇಸು ಕ್ರಿಸ್ತ ಸಾಯುವ ಮುನ್ನ ದಿನ ತಮ್ಮ ಶಿಷ್ಯರೊಂದಿಗೆ ಕಡೆಯ ಭೋಜನದ ಸಂದರ್ಭದಲ್ಲಿ ತಮ್ಮ ಶಿಷ್ಯರ ಪಾದಗಳನ್ನು ತೊಳೆದು ಕಡೆಯ ಭೋಜನವನ್ನು ಸವಿದಿದ್ದ ಸ್ಮರಣೆಯ ಅಂಗವಾಗಿ  ಪವಿತ್ರ ಗುರುವಾರ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಕ್ರೈಸ್ತಭಾಂದವರ ಪಾದಗಳನ್ನು ತೊಳೆಯುವ ಮೂಲಕ ಆಚರಿಸಲಾಗುತ್ತದೆ.  

ಪಾಪ ನಿವೇದನೆಗೆ ಪ್ರಾರ್ಥನೆ

ಗುಡ್‌ ಫ್ರೈಡೇಗೆ ಸಂಬಂಧಿಸಿದ ಕಾರ್ಯಕ್ರಮಗಳು ವಿಭೂತಿ ಬುಧವಾರದಿಂದ ಆರಂಭವಾಗುತ್ತವೆ. ಆ ದಿನ ಪಾಪಗಳ ಕುರಿತ ಪಶ್ಚಾತ್ತಾಪದ ಕುರುಹಾಗಿ ಹಣೆಯಲ್ಲಿ ಬೂದಿ ಬಳಿಯುವ ಮೂಲಕ ನಲವತ್ತು ದಿನಗಳ ಕಾಲದ ತಪಸ್ಸು ಕಾಲ (ಪಾಸ್ಖ ಕಾಲ) ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಬಹುತೇಕ ಕ್ರೈಸ್ತರು ಮಾಂಸಾಹಾರವನ್ನು ತ್ಯಜಿಸಿ ಸಸ್ಯಾಹಾರವನ್ನಷ್ಟೇ ಸೇವಿಸುತ್ತಾರೆ. ಪ್ರಾರ್ಥನೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಗುಡ್‌ ಫ್ರೈಡೇಗಿಂತ ಮೊದಲಿನ ಭಾನುವಾರವನ್ನು ಗರಿಗಳ ಭಾನುವಾರ ಎಂದು ಆಚರಿಸಲಾಗುತ್ತದೆ. ಜೆರುಸಲೇಂ ನಗರಕ್ಕೆ ಕತ್ತೆಯ ಮೇಲೇರಿ ಬಂದ ಯೇಸುವನ್ನು ಜನರು ದಾರಿಯಲ್ಲಿ ಆಲಿವ್‌ ಗಿಡದ ಎಲೆಗಳನ್ನು ಹಾಗೂ ತಮ್ಮ ಮೇಲಂಗಿಗಳನ್ನು ಹಾಸಿ ಗೌರವದಿಂದ ರಾಜೋಚಿತವಾಗಿ ಸ್ವೀಕರಿಸಿದ್ದರು. ಇದರ ನೆನಪೇ ಗರಿಗಳ ಭಾನುವಾರ. ಆ ದಿನ ಚಚ್‌ರ್‍ಗಳಲ್ಲಿ ಆಶೀರ್ವದಿಸಿದ ಎಳೆ ತೆಂಗಿನ ಗರಿಯನ್ನು ಭಕ್ತರಿಗೆ ನೀಡುತ್ತಾರೆ. ಪಾಮ… ಸಂಡೇಯಿಂದ ಈಸ್ಟರ್‌ ಸಂಡೇವರೆಗಿನ ಒಂದು ವಾರವನ್ನು ಪವಿತ್ರವಾರ ಎಂದು ಆಚರಿಸುತ್ತಾರೆ.

ಕ್ರೈಸ್ತರೆಲ್ಲರೂ ಪಾಪನಿವೇದನೆ ಮಾಡಿಕೊಂಡು ಪಾಪಮುಕ್ತ ಮನಸ್ಸಿನಿಂದ ಹಬ್ಬದ ಆಚರಣೆಗೆ ಸಿದ್ಧರಾಗುತ್ತಾರೆ. ಪಾಸ್ಖ ಗುರುವಾರದಂದು ಯೇಸುಕ್ರಿಸ್ತರು ಸೇವೆ ಹಾಗೂ ವಿನಯದ ಸಂಕೇತವಾಗಿ ಶಿಷ್ಯರ ಪಾದಗಳನ್ನು ತೊಳೆದುದರ ನೆನಪಿಗೆ ಚರ್ಚಿನಲ್ಲಿ ಪಾದ ತೊಳೆಯುವ ಕಾರ್ಯಕ್ರಮದಲ್ಲಿ ಗುರುಗಳು ಆಯ್ದ ಹನ್ನೆರಡು ಜನರ ಪಾದಗಳನ್ನು ತೊಳೆದು ಒರೆಸಿ ಮುತ್ತಿಡುತ್ತಾರೆ. ಆ ದಿನ ಯೇಸುವಿನ ಅಂತಿಮ ಭೋಜನ (ಲಾಸ್ಟ್‌ ಸಪ್ಪರ್‌)ದ ಸ್ಮರಣೆಯನ್ನು ಆಚರಿಸಲಾಗುತ್ತದೆ. ಆ ದಿನ ಅಧಿಕೃತವಾಗಿ ಕ್ರೈಸ್ತ ಧರ್ಮದ ಪೂಜಾ ವಿಧಾನ ಉದ್ಘಾಟನೆಗೊಂಡಿತು ಎನ್ನಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಮದುವೆಯಾದ್ರೆ ಸಿಗುತ್ತೆ 2.5 ಲಕ್ಷ ರೂಪಾಯಿ; ಶೇ.99 ಜನರಿಗೆ ಈ ವಿಷಯವೇ ಗೊತ್ತಿಲ್ಲ