ಕೆರೆ ಪೊದೆಯಿಂದ ಎದ್ದು ಬಟ್ಟೆ ಸರಿ ಮಾಡಿಕೊಳ್ಳುತ್ತಾ ಓಡಿದ ಜೋಡಿ; ನಿಮ್ಮೂರಿನಲ್ಲಿ OYO ಇಲ್ವಾ ಎಂದ ನೆಟ್ಟಿಗರು!

Published : Apr 16, 2025, 05:00 PM ISTUpdated : Apr 16, 2025, 05:25 PM IST
 ಕೆರೆ ಪೊದೆಯಿಂದ ಎದ್ದು ಬಟ್ಟೆ ಸರಿ ಮಾಡಿಕೊಳ್ಳುತ್ತಾ ಓಡಿದ ಜೋಡಿ; ನಿಮ್ಮೂರಿನಲ್ಲಿ OYO ಇಲ್ವಾ ಎಂದ ನೆಟ್ಟಿಗರು!

ಸಾರಾಂಶ

Couple Viral Video: ಸಾರ್ವಜನಿಕ ಸ್ಥಳದಲ್ಲಿ ಅತಿರೇಕದ ವರ್ತನೆ ತೋರಿದ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 

Viral Video: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರೆ ನೋಡಲಾಗದಂತಹ ವಿಡಿಯೋಗಳೇ ಕಣ್ಮುಂದೆ ಬರುತ್ತವೆ. ಟೈಮ್ ಪಾಸ್‌ಗೆ ಅಂತ ಸಾಮಾಜಿಕ ಜಾಲತಾಣಕ್ಕೆ ವಿಸಿಟ್ ಮಾಡಿದ್ರೆ ನೋಡಲು ಅಸಹ್ಯ ಎನಿಸುವಂತಹ ವಿಡಿಯೋ ಅಥವಾ ರೀಲ್ಸ್ ಬರುತ್ತವೆ. 5ಜಿ ದುನಿಯಾದಲ್ಲಿ ಎಲ್ಲರ ಕೈಯಲ್ಲಿ ಮೊಬೈಲ್ ಇರುತ್ತೆ ಅನ್ನೋದನ್ನು ಯಾವುದೇ ಕ್ಷಣಕ್ಕೂ ಮರೆಯಬಾರದು. ಅದರಲ್ಲಿಯೂ ಬಹುತೇಕರು ಹೆಚ್ಚು ಲೈಕ್ಸ್, ಫಾಲೋವರ್ಸ್ ಸಂಖ್ಯೆ ಅಧಿಕ ಮಾಡಿಕೊಳ್ಳಲು ಕಾಯುತ್ತಿರುತ್ತಾರೆ. ಇದಕ್ಕಾಗಿ ತಮ್ಮ ಸುತ್ತಮುತ್ತ ಯಾವುದೇ ವಿಶೇಷ ಅಥವಾ ವಿಚಿತ್ರವೆನಿಸುವ ಘಟನೆ ನಡೆದರೂ ಅದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡು, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. 

ಇನ್ನು 5G ತಂತ್ರಜ್ಞಾನದಿಂದ ಪಾಶ್ವಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗುತ್ತಾರೆ. ಸಾರ್ವಜನಿಕ ಸ್ಥಳದಲ್ಲಿ ಅತಿರೇಕದ ವರ್ತನೆಗಳು ಕಂಡು ಬರುತ್ತವೆ. ಇಂತಹ ವರ್ತನೆಯ ವಿಡಿಯೋಗಳು ಕಡಿಮೆ ಸಮಯದಲ್ಲಿ ಅತಿ ಹೆಚ್ಚು ವೀಕ್ಷಣೆಗಳು ಪಡೆದುಕೊಳ್ಳುತ್ತವೆ. ಇದೀಗ ಇಂತಹವುದೇ ಒಂದು ವಿಡಿಯೋ ಹರಿದಾಡುತ್ತಿದ್ದು, ಜೋಡಿಯೊಂದು ಸಾರ್ವಜನಿಕ ಪ್ರದೇಶದಲ್ಲಿ ಸಂಬಂಧ ಬೆಳೆಸಿದ್ದಾರೆ. ಈ ದೃಶ್ಯಗಳನ್ನು ಅನಾಮಧೇಯ ವ್ಯಕ್ತಿ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದುಕೊಂಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಆ ವ್ಯಕ್ತಿ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಲದಲ್ಲಿ ಹಂಚಿಕೊಂಡಿದ್ದಾನೆ. 

ವೈರಲ್ ಆಗಿರುವ ಜೋಡಿಯ ವಿಡಿಯೋವನ್ನು PrimeFit Path (primefitpath) ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮೂರು ದಿನಗಳ ಹಿಂದೆ ಅಪ್ಲೋಡ್ ಆಗಿರುವ ವಿಡಿಯೋ, ಹಲವು ಅನಾಮಧೇಯ ಖಾತೆಗಲ್ಲಿ ಅಪ್ಲೋಡ್ ಆಗುತ್ತಿದೆ. ವಿವಿಧ ಶೀರ್ಷಿಕೆಯಡಿಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗುತ್ತಿದೆ 

ವೈರಲ್ ವಿಡಿಯೋದಲ್ಲಿ ಏನಿದೆ? 
ಕೆರೆಯ ದಡದಲ್ಲಿ ಹೂಗಳ ಪೊದೆಯಿಂದ ವ್ಯಕ್ತಿಯೊಬ್ಬ ಎದ್ದು ನಿಲ್ಲುತ್ತಾನೆ. ನಂತರ ಆತ ತನ್ನ ಬಟ್ಟೆಗಳನ್ನು ಸರಿ ಮಾಡಿಕೊಂಡು ಸ್ವಲ್ಪ ಮುಂದಕ್ಕೆ ಬರುತ್ತಾನೆ. ಆ ಬಳಿಕ ಅದೇ ಜಾಗದಿಂದ ಯುವತಿಯೊಬ್ಬಳು ಸಹ ಬಟ್ಟೆ ಸರಿಪಡಿಸಿಕೊಳ್ಳುತ್ತಾ ಎದ್ದು ಬರುತ್ತಾಳೆ. ಭಯದಿಂದ ಅತ್ತಿತ್ತ ನೋಡುತ್ತಲೇ ಇಬ್ಬರು ಬಟ್ಟೆ ಸರಿ ಮಾಡಿಕೊಳ್ಳುತ್ತಾರೆ. ಈ ವೇಳೆ ಯುವತಿ ಆಯತಪ್ಪಿ ಬೀಳುತ್ತಿರುತ್ತಾಳೆ. ಅಷ್ಟರಲ್ಲೇ ಆ ವ್ಯಕ್ತಿ ಆಕೆಯನ್ನು ಹಿಡಿಯುತ್ತಾನೆ. ನಂತರ ಇಬ್ಬರು ಅಲ್ಲಿಂದ ಹೊರಡುತ್ತಾರೆ. ಈ ವಿಡಿಯೋ ಯಾವ ಪ್ರದೇಶದ್ದು ಮತ್ತು ಯಾರು ಸೆರೆ ಹಿಡಿದಿದ್ದು ಎಂದು ತಿಳಿದು ಬಂದಿಲ್ಲ.

ಇನ್ನು ಈ ವೈರಲ್ ವಿಡಿಯೋ ನೋಡಿದ ನೆಟ್ಟಿಗರು, ನಿಸರ್ಗದ ಮಧ್ಯೆ ಪ್ರೇಮಿಗಳು ತಮ್ಮ ಸ್ವಾತಂತ್ರ್ಯವನ್ನು ಎಂಜಾಯ್ ಮಾಡುತ್ತಿದ್ದಾರೆ ಎಂದ್ರೆ ಬಹುತೇಕರು ನಿಮಗೆ ಬೇರೆ ಎಲ್ಲಿಯೂ ಜಾಗ ಸಿಕ್ಕಿಲ್ಲವೇ? ಓಯೋ ರೂಮ್‌ಗೆ ಹೋಗಿ. ನಿಮಗೆ ನಾಚಿಕೆ, ಮಾನ ಮರ್ಯಾದೆ ಇಲ್ಲವಾ? ಯಾರಾದರೂ ನಿಮ್ಮನ್ನು ನೋಡ್ತಾರೆ ಅನ್ನೋ ಕೊಂಚವೂ ಭಯವೂ ನಿಮಗೆ ಇಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ. 

ಸಮಾಜಕ್ಕೆ ಏನು ಸಂದೇಶ?
ಇಂತಹ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸಮಾಜಕ್ಕೆ ಏನು ಸಂದೇಶ ನೀಡುತ್ತಿರಿ ಎಂದು ಕೆಲವರು ಖಾರವಾಗಿ ಪ್ರಶ್ನೆ ಮಾಡಿದ್ದಾರೆ. ಇಂತಹ ವಿಡಿಯೋ ಅಥವಾ ರೀಲ್ಸ್ ನೋಡಿದ ಬಳಿಕ ಚಿಕ್ಕ ಮಕ್ಕಳ ಕೈಗೆ ಮೊಬೈಲ್ ನೀಡಲು ಭಯವಾಗುತ್ತದೆ. ಇಂದಿನ ಯುವ ಸಮುದಾಯಕ್ಕೆ ಸಮಾಜದಲ್ಲಿ ಹೇಗಿರಬೇಕು ಎಂಬುದರ ಕುರಿತಾಗಿ ನೈತಿಕ ಶಿಕ್ಷಣ ನೀಡುವ ಅಗತ್ಯವಿದೆ. 

ಕಾರ್‌ನಲ್ಲಿಯೇ ಖುಲ್ಲಂ ಖುಲ್ಲಾ!
ಕೆಲ ದಿನಗಳ ಹಿಂದೆಯಷ್ಟೇ ದೆಹಲಿ ವ್ಯಾಪ್ತಿಯದ್ದು ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ರಸ್ತೆ ಬದಿ ಪಾರ್ಕ್ ಮಾಡಲಾಗಿದ್ದ ಕಾರ್‌ನಿಂದ ಯುವತಿ ಹೊರಗೆ ಬರುತ್ತಾಳೆ. ಕಾರ್ ಪಕ್ಕದಲ್ಲಿಯೇ ನಿಂತಿದ್ದ ಸ್ನೇಹಿತೆಯೊಂದಿಗೆ ಬಟ್ಟೆ ಸರಿ ಮಾಡಿಕೊಳ್ಳುತ್ತಾ ಮಾತನಾಡಲು ಶುರು ಮಾಡುತ್ತಾಳೆ. ಕಾರ್‌ನಲ್ಲಿ ಓರ್ವ ಯುವಕ ಬಟ್ಟೆ ಹಾಕಿಕೊಳ್ಳೋದು ವಿಡಿಯೋದಲ್ಲಿ  ಕಾಣಿಸುತ್ತದೆ. ವಿಡಿಯೋದಲ್ಲಿರುವ ಮೂವರು ಕಾಲೇಜಿನ ವಿದ್ಯಾರ್ಥಿಗಳಂತೆ ಕಾಣಿಸುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಗ್ರವಾದದ ವಿರುದ್ಧ ಜಂಟಿ ಹೋರಾಟ : ಮೋದಿ ಘೋಷಣೆ
Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!