ಸತತ ಪ್ರಚಾರ, ಪ್ರವಾಸ ಮುಗಿಸಿ ತಾಯಿ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ!

By Suvarna NewsFirst Published Dec 4, 2022, 5:50 PM IST
Highlights

ಗುಜರಾತ್ ಚುನಾವಣೆಯ ಎರಡನೇ ಹಂತದ ಪ್ರಚಾರ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಇಂದು ತಾಯಿ ಹಿರಾಬೆನ್ ಮೋದಿ ಭೇಟಿಯಾಗಿದ್ದಾರೆ. ಗಾಂಧಿನಗರದಲ್ಲಿರುವ ತಾಯಿ ನಿವಾಸಕ್ಕೆ ಆಗಮಿಸಿದ ಮೋದಿ ತಾಯಿ ಭೇಟಿಯಾಗಿದ್ದಾರೆ.

ಗಾಂಧಿನಗರ(ಡಿ.04) ಗುಜರಾತ್ ಚುನಾವಣೆ ಎರಡನೇ ಹಂತದ ಪ್ರಚಾರ ಡಿಸೆಂಬರ್ 3ಕ್ಕೆ ಅಂತ್ಯಗೊಂಡಿದೆ. ಡಿಸೆಂಬರ್ 5 ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಸತತ ಪ್ರಚಾರ, ರೋಡ್ ಶೋ, ಸಮಾವೇಶಗಳಲ್ಲಿ ಪಾಲ್ಗೊಂಡ ಮೋದಿ ಇಂದು ಗಾಂಧಿನಗರದಲ್ಲಿರುವ ತಾಯಿ ಹಿರಾಬೆನ್ ನಿವಾಸಕ್ಕೆ ಆಗಮಿಸಿದರು. ತಾಯಿ ಭೇಟಿಯಾದ ಮೋದಿ ಮಾತುಕತೆ ನಡೆಸಿದ್ದಾರೆ. ಜೂನ್ 18 ರಂದು ಮೋದಿ ತಾಯಿ ಹೀರಾಬೆನ್ ಮೋದಿ 100ನೇ ವಸಂತಕ್ಕೆ ಕಾಲಿಟ್ಟಿದ್ದರು. ಈ ವೇಳೆ ಮೋದಿ ಭೇಟಿಯಾಗಿ ಹುಟ್ಟುಹಬ್ಬದ ಶುಭಾಶ ಕೋರಿದ್ದರು.

ಕಳೆದ ಕೆಲದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನಲ್ಲಿ ಬೀಡುಬಿಟ್ಟಿದ್ದಾರೆ. ಎರಡನೇ ಹಂತದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಐತಿಹಾಸಿಕ 50 ಕಿಲೋಮೀಟರ್ ರೋಡ್ ಶೋ ನಡೆಸಿದ್ದರು. ಅಹಮದಾಬಾದ್‌ನಲ್ಲಿ ನಡೆಸಿದ 50 ಕಿ.ಮೀ. ರೋಡ್‌ಶೋನಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು ಎನ್ನಲಾಗಿದೆ.

ಪ್ರಧಾನಿ ಮೋದಿಯ ಡಿಜಿಟಲ್‌ ಇಂಡಿಯಾ ದೃಷ್ಟಿಕೋನವನ್ನು ಕೊಂಡಾಡಿದ ಗೂಗಲ್‌ ಸಿಇಒ ಸುಂದರ್ ಪಿಚೈ

ಇದು ಭಾರತದಲ್ಲೇ ಅತಿದೊಡ್ಡ ಹಾಗೂ ಅತಿ ಉದ್ದದ ರೋಡ್‌ಶೋ ಎನ್ನಲಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರು ತೆರೆದ ಕಾರಿನಲ್ಲಿ 14 ವಿಧಾನಸಭಾ ಕ್ಷೇತ್ರದಲ್ಲಿ ಸತತ 4 ಗಂಟೆಗಳ ರೋಡ್‌ ಶೋ ನಡೆಸಿದ್ದರು. ರೋಡ್‌ಶೋಗೆ ನಿರೀಕ್ಷೆಯನ್ನು ಮೀರಿ ಜನರ ಸ್ಪಂದನೆ ವ್ಯಕ್ತವಾಗಿದ್ದು, 10 ಲಕ್ಷಕ್ಕೂ ಹೆಚ್ಚು ಜನರು ಇದರಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಈ ರೋಡ್‌ಶೋ ಡಿ.5ರಂದು ಸೋಮವಾರ ನಡೆಯಲಿರುವ 2ನೇ ಹಂತದ ಮತದಾನದ ಮೇಲೆಯೂ ಪರಿಣಾಮ ಬೀರಲಿದೆ ಎನ್ನಲಾಗಿದೆ.

 

| Prime Minister Narendra Modi arrives at the residence of his mother Heeraben Modi, in Gandhinagar, Gujarat pic.twitter.com/eomBD0wTtc

— ANI (@ANI)

 

ರೋಡ್‌ ಶೋ 16 ವಿಧಾನಸಭಾ ಕ್ಷೇತ್ರಗಳ ಮೂಲಕ ಹಾದು ಹೋಗಿದ್ದು, ಚುನಾವಣೆಯ ಮೇಲೆ ಭಾರಿ ಪ್ರಭಾವ ಉಂಟು ಮಾಡಿ ಬಿಜೆಪಿ ಪರ ಅಲೆ ಸೃಷ್ಟಿಸಬಹುದು ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಈ 16 ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರ ಘಟ್ಲೋಡಿಯಾ ಕ್ಷೇತ್ರವೂ ಇದೆ. ಹೂವಿನಿಂದ ಅಲಂಕೃತವಾದ ತೆರೆದ ವಾಹನದ ಮೇಲೆ ಕೇಸರಿ ಟೋಪಿ ಧರಿಸಿ ನಿಂತ ಮೋದಿ ರೋಡ್‌ ಶೋ ನರೋಡಾಗಾಂನಿಂದ ಮಧ್ಯಾಹ್ನ 3.30ಕ್ಕೆ ಆರಂಭವಾಗಿ ಸಂಜೆ 7 ಗಂಟೆ ಸುಮಾರಿಗೆ ಗಾಂಧಿನಗರ ದಕ್ಷಿಣ ಕ್ಷೇತ್ರದಲ್ಲಿ ಮುಕ್ತಾಯಗೊಂಡಿತು. 50 ಕಿ.ಮೀ. ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರತ್ತ ಮೋದಿ ಕೈಬೀಸಿದರೆ, ಜನರು ಭಾರಿ ಉತ್ಸಾಹದಿಂದ ಬಿಜೆಪಿ ಹಾಗೂ ಮೋದಿಗೆ ಜೈಕಾರ ಹಾಕಿ ಅವರ ಕೈ ಮುಟ್ಟಲು ಯತ್ನಿಸುತ್ತಿದ್ದುದು ಕಂಡುಬಂತು.

2014ರ ಬಳಿಕ ಇಸ್ಲಾಮಿಕ್ ರಾಷ್ಟ್ರಗಳ ಜೊತೆ ಭಾರತ ಅತ್ಯುತ್ತಮ ಸಂಬಂಧ, ಪ್ರಧಾನಿ ಮೋದಿ

ಗುಜರಾತಿನ 2ನೇ ಹಂತದ ಚುನಾವಣೆ ಸೋಮವಾರ ನಡೆಯಲಿದ್ದು, ಶನಿವಾರ ಅಬ್ಬರದ ಪ್ರಚಾರ ಅಂತ್ಯವಾಗಿದೆ. ಸೋಮವಾರ ಮತದಾನ ನಡೆಯಲಿದೆ. 2ನೇ ಹಂತದಲ್ಲಿ ಒಟ್ಟು 182 ಸ್ಥಾನಗಳ ಪೈಕಿ 93 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷ ಸೇರಿ 60ಕ್ಕೂ ಹೆಚ್ಚು ರಾಜಕೀಯ ಪಕ್ಷಕ್ಕೆ ಸೇರಿದ 833 ಜನರು ಚುನಾವಣಾ ಕಣದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಮತದಾರರ ಓಲೈಕೆಗಾಗಿ ಪಕ್ಷಗಳು ಕೊನೆಯ ಬಾರಿ ಅಬ್ಬರದ ಪ್ರಚಾರ ನಡೆಸಿದ್ದಾರೆ.  ಮತದಾನ ಪ್ರಕ್ರಿಯೆ ಸೋಮವಾರ ನಡೆಯಲಿದ್ದು, ಡಿ.8ರಂದು ಫಲಿತಾಂಶ ಪ್ರಕಟವಾಗಲಿದೆ.

click me!