ಭಾರತ್ ಬಯೋಟೆಕ್ ಸಹ ತನ್ನ ‘ಕೋವ್ಯಾಕ್ಸಿನ್’ ದರದ ಇಳಿಕೆ ಘೋಷಣೆ ಮಾಡಿದೆ. ರಾಜ್ಯ ಸರ್ಕಾರಗಳಿಗೆ ನೀಡುವ ಲಸಿಕೆ ದರವನ್ನು 200 ರು.ನಷ್ಟುಇಳಿಸುವುದಾಗಿ ಹೇಳಿದೆ.
ನವದೆಹಲಿ (ಏ.30): ‘ಕೋವಿಶೀಲ್ಡ್’ ಲಸಿಕೆ ದರ ಇಳಿಕೆ ಬೆನ್ನಲ್ಲೇ ಭಾರತ್ ಬಯೋಟೆಕ್ ಸಹ ತನ್ನ ‘ಕೋವ್ಯಾಕ್ಸಿನ್’ ದರದ ಇಳಿಕೆ ಘೋಷಣೆ ಮಾಡಿದೆ. ರಾಜ್ಯ ಸರ್ಕಾರಗಳಿಗೆ ನೀಡುವ ಲಸಿಕೆ ದರವನ್ನು 200 ರು.ನಷ್ಟುಇಳಿಸುವುದಾಗಿ ಅದು ತಿಳಿಸಿದೆ.
ಇತ್ತೀಚೆಗೆ ರಾಜ್ಯ ಸರ್ಕಾರಗಳಿಗೆ 1 ಡೋಸ್ ಲಸಿಕೆಯನ್ನು 600 ರು. ಹಾಗೂ ಖಾಸಗಿ ಆಸ್ಪತ್ರೆಗಳಿಗೆ 1200 ರು. ದರದಲ್ಲಿ ನೀಡುವುದಾಗಿ ಭಾರತ್ ಬಯೋಟೆಕ್ ಹೇಳಿತ್ತು. ಆದರೆ, ‘ಈ ದರ ದುಬಾರಿ. ಕೇಂದ್ರ ಸರ್ಕಾರಕ್ಕೆ 150 ರು.ನಲ್ಲಿ 1 ಡೋಸ್ ಲಸಿಕೆ ನೀಡುತ್ತಿರುವ ಭಾರತ್ ಬಯೋಟೆಕ್, ರಾಜ್ಯಗಳಿಗೇಗೆ ದುಬಾರಿ ಬೆಲೆ ನೀಡುತ್ತಿದೆ?’ ಎಂದು ರಾಜ್ಯಗಳು ಪ್ರಶ್ನಿಸಿದ್ದವು. ಬಳಿಕ ದರ ಇಳಿಸುವಂತೆ ಕೇಂದ್ರ ಸರ್ಕಾರ ಕೂಡ ಮನವಿ ಮಾಡಿತ್ತು.
undefined
ರೂಪಾಂತರಿಯಾಗಿ ನುಗ್ಗಿದೆ ಮಹಾಮಾರಿ : ಪ್ರಾಣವನ್ನೇ ಕಸಿಯುತ್ತಿದೆ
ಇದಕ್ಕೆ ಓಗೊಟ್ಟಿರುವ ಭಾರತ್ ಬಯೋಟೆಕ್, ‘ರಾಜ್ಯ ಸರ್ಕಾರಗಳಿಗೆ ನೀಡುವ 1 ಡೋಸ್ ಲಸಿಕೆ ದರವನ್ನು 600 ರು.ನಿಂದ 400 ರು.ಗೆ ಇಳಿಸಲಾಗುತ್ತದೆ’ ಎಂದು ಗುರುವಾರ ಸಂಜೆ ಹೇಳಿದೆ.
ಆದರೆ, ಖಾಸಗಿ ಆಸ್ಪತ್ರೆಗಳ 1200 ರು. ಲಸಿಕೆ ದರದ ಇಳಿಕೆ ಬಗ್ಗೆ ಅದು ಯಾವುದೇ ಪ್ರಸ್ತಾಪ ಮಾಡಿಲ್ಲ.
ಕೋವಿಶೀಲ್ಡ್ ಕೂಡ ತನ್ನ ಲಸಿಕೆ ದರವನ್ನು 400 ರು.ನಿಂದ 300 ರು.ಗೆ ಇತ್ತೀಚೆಗೆ ಇಳಿಸಿತ್ತು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona