ಕೊರೋನಾ ತಾಂಡವ, ರಾಮ ಮಂದಿರ ಆದಾಯ ಕುಸಿತ!

Published : May 26, 2020, 08:37 AM ISTUpdated : May 26, 2020, 09:49 AM IST
ಕೊರೋನಾ ತಾಂಡವ, ರಾಮ ಮಂದಿರ ಆದಾಯ ಕುಸಿತ!

ಸಾರಾಂಶ

ಕೊರೋನಾದಿಂದ ರಾಮಮಂದಿರಕ್ಕೆ ದೇಣಿಗೆ ಕುಂಠಿತ| ಮಂದಿರ ನಿರ್ಮಾಣಕ್ಕೆಂದು ರಚನೆ ಆಗಿರುವ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್| ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಯಿತು ಎಂದರೆ ದೇಣಿಗೆ ಸಂಗ್ರಹ ಹೆಚ್ಚಬಹುದು

ಅಯೋಧ್ಯೆ(ಮೇ.26): ಕೊರೋನಾ ಪರಿಣಾಮ ಅಯೋಧ್ಯೆ ರಾಮಮಂದಿರ ನಿರ್ಮಾಣದ ದೇಣಿಗೆ ಸಂಗ್ರಹದ ಮೇಲೂ ಪರಿಣಾಮ ಬೀರಿದೆ. ಮಂದಿರ ನಿರ್ಮಾಣಕ್ಕೆಂದು ರಚನೆ ಆಗಿರುವ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹೆಸರಲ್ಲಿ ಮಾಚ್‌ರ್‍ನಲ್ಲಿ 2 ಬ್ಯಾಂಕ್‌ ಖಾತೆ ತೆರೆಯಲಾಗಿದೆ.

ಈ ಪೈಕಿ ಒಂದರಲ್ಲಿ 2 ಕೋಟಿ ಹಾಗೂ ಇನ್ನೊಂದರಲ್ಲಿ 2.7 ಕೋಟಿ ರು. ದೇಣಿಗೆ ಸಂಗ್ರಹವಾಗಿದೆ. ಆದರೆ ಇದಕ್ಕೂ ಹೆಚ್ಚು ದೇಣಿಗೆ ಸಂಗ್ರಹ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು.

ರಾಮ ಮಂದಿರ ನಿರ್ಮಾಣ ಕಾರ್ಯ: ಭೂಮಿ ಅಗೆದಾಗ ಸಿಕ್ತು ಮೂರ್ತಿ ಹಾಗೂ ಮಂದಿರದ ಅವಶೇಷ!

ಈ ಬಗ್ಗೆ ಪ್ರತಿಕ್ರಿಯಿಸಿದ ಟ್ರಸ್ಟ್‌ ಸದಸ್ಯರೊಬ್ಬರು, ‘ಒಂದೊಮ್ಮೆ ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಯಿತು ಎಂದರೆ ದೇಣಿಗೆ ಸಂಗ್ರಹ ಹೆಚ್ಚಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಂದಿರವು ಈಗಾಗಲೇ 12 ಕೋಟಿ ರು. ನಿಶ್ಚಿತ ಠೇವಣಿ (ಎಫ್‌ಡಿ), ಚಿನ್ನದ ಆಭರಣಗಳು ಹಾಗೂ ರಾಮಜನ್ಮಭೂಮಿ ನ್ಯಾಸ್‌ ಕೊಟ್ಟ1 ಕೊಟಿ ರು.ವನ್ನೂ ಹೊಂದಿದೆ. ಆದರೆ ಇವು ಇನ್ನೂ ಟ್ರಸ್ಟ್‌ ಹೆಸರಿಗೆ ವರ್ಗಾವಣೆ ಆಗಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?