ಭಾರತ ಗಡಿಗೆ ಚೀನಾ ಹೆಲಿಡ್ರೋನ್‌!

By Kannadaprabha NewsFirst Published May 26, 2020, 7:19 AM IST
Highlights

ಭಾರತ ಗಡಿಗೆ ಚೀನಾ ಹೆಲಿಡ್ರೋನ್‌!| ಉಭಯ ರಾಷ್ಟ್ರಗಳ ಮಧ್ಯೆ ತ್ವೇಷಮಯ ಸ್ಥಿತಿ ಇರುವಾಗಲೇ ಆಕ್ರಮಣಕಾರಿ ನಡೆ|  ಭಾರೀ ಎತ್ತರದಿಂದ ದಾಳಿ ಸಾಮರ್ಥ್ಯ ಇರುವ ಡ್ರೋನ್‌ ನಿಯೋಜನೆಗೆ ಸಿದ್ಧತೆ

ಬೀಜಿಂಗ್(ಮೇ.26)‌: ಲಡಾಖ್‌ ಮತ್ತು ಸಿಕ್ಕಿಂ ಗಡಿಯಲ್ಲಿ ಪದೇ ಪದೇ ಯುದ್ಧೋನ್ಮಾದ ತೋರಿಸುತ್ತಿರುವ ಚೀನಾ, ಇದೀಗ ತಾನು ಇತ್ತೀಚೆಗಷ್ಟೇ ಅಭಿವೃದ್ಧಿಪಡಿಸಿರುವ ಕಣ್ಗಾವಲು ಮತ್ತು ದಾಳಿ ಸಾಮರ್ಥ್ಯದ ಡ್ರೋನ್‌ ಒಂದನ್ನು ಭಾರತದ ಗಡಿಯಲ್ಲಿ ನಿಯೋಜಿಸಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

ಚೀನಾದ ಸರ್ಕಾರಿ ಸ್ವಾಮ್ಯದ ಏವಿಯೇಷನ್‌ ಇಂಡಸ್ಟ್ರಿ ಕಾರ್ಪೊರೇಷನ್‌ ಆಫ್‌ ಚೀನಾ ‘ಎಆರ್‌ 5000ಸಿ’ ಈ ಅತ್ಯಾಧುನಿಕ ಕಾಪ್ಟರ್‌ ಡ್ರೋನ್‌ ಅನ್ನು ಅಭಿವೃದ್ಧಿಪಡಿಸಿದೆ. ಅದು ಕಳೆದ ಬುಧವಾರ ಯಶಸ್ವಿಯಾಗಿ ಹಾರಾಟ ನಡೆಸಿದೆ. ಅತ್ಯಂತ ಎತ್ತರದ ಪ್ರದೇಶದಲ್ಲಿ ಸಂಚರಿಸುವ, ಕಣ್ಗಾವಲು ಇಡುವ, ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಈ ಡ್ರೋನ್‌ ಅನ್ನು ಭಾರತದ ವಿರುದ್ಧ ಬಳಸುವ ಸಾಧ್ಯತೆ ಇದೆ. ಅದರಲ್ಲೂ ಟಿಬೆಟ್‌ ಮೂಲಕ ಭಾರತದೊಂದಿಗೆ ತಾನು ಹೊಂದಿರುವ ಗಡಿಯಲ್ಲಿ ಇವುಗಳನ್ನು ನಿಯೋಜಿಸುವ ಸಾಧ್ಯತೆ ಹೆಚ್ಚು ಎಂದು ಚೀನಾ ಸರ್ಕಾರದ ಮುಖವಾಣಿಯಾದ ‘ಗ್ಲೋಬಲ್‌ ಟೈಮ್ಸ್‌’ ಪತ್ರಿಕೆ ವರದಿ ಮಾಡಿದೆ.

ಗಡಿಯಲ್ಲಿ ಮತ್ತೆ ಚೀನಾ ತಂಟೆ: ಲಡಾಖ್‌ ಬಳಿ ಬಂಕರ್‌ ನಿರ್ಮಾಣ!

ಎಆರ್‌500ಸಿ ಮಾನವರಹಿತ ಹೆಲಿಕಾಪ್ಟರ್‌ ಡ್ರೋನ್‌ ಆಗಿದ್ದು, 15 ಸಾವಿರ ಅಡಿ ಎತ್ತರದಿಂದ ಇದು ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. 170 ಕಿ.ಮೀ. ವೇಗದಲ್ಲಿ ಸಾಗುವ ಶಕ್ತಿ ಇದಕ್ಕಿದೆ. 500 ಕೇಜಿ ತೂಕದ ವಸ್ತುವನ್ನು ಇದು ಹೊತ್ತೊಯ್ಯಬಲ್ಲದಾಗಿದೆ. ಎಲೆಕ್ಟ್ರಾನಿಕ್‌ ಸಕ್ರ್ಯೂಟ್‌ಗಳಿಗೆ ಕೂಡ ಅಡ್ಡಿ ಮಾಡುವ ತಾಕತ್ತು ಇದಕ್ಕಿದೆ ಎಂದು ವರದಿ ತಿಳಿಸಿದೆ.

ಭಾರತೀಯ ಯೋಧರ ವಶಕ್ಕೆ ಪಡೆದು ಬಿಟ್ಟ ಚೀನಾ ಯೋಧರು!

ಡ್ರೋನ್‌ ವೈಶಿಷ್ಟ್ಯ

500 ಕೆ.ಜಿ.: ಎಆರ್‌5000ಸಿ ಹೆಸರಿನ ಕಾಪ್ಟರ್‌ ಡ್ರೋನ್‌ಗೆ ಹೊತ್ತೊಯ್ಯಬಲ್ಲ ತೂಕ ಸಾಮರ್ಥ್ಯ

15000 ಅಡಿ: ಇಷ್ಟುಎತ್ತರದಿಂದ ಕಣ್ಗಾವಲು ಇರಿಸಿ, ದಾಳಿ ನಡೆಸಬಲ್ಲ ಅತ್ಯಾಧುನಿಕ ಡ್ರೋನ್‌

170 ಕಿ.ಮೀ.: ಎಲೆಕ್ಟ್ರಾನಿಕ್‌ ಸಕ್ರ್ಯೂಟ್‌ಗೆ ಅಡ್ಡಿಪಡಿಸಬಲ್ಲ ಡ್ರೋನ್‌ ಸಾಗುವ ವೇಗದ ಕ್ಷಮತೆ

click me!