ಭಾನುವಾರ ಪ್ಯಾಸೆಂಜರ್, ಮೇಲ್, ಎಕ್ಸ್‌ಪ್ರೆಸ್ ರೈಲು ಸೇವೆ ಪೂರ್ಣ ಬಂದ್| ಭಾನುವಾರದ ಜನತಾ ಕರ್ಫ್ಯೂಗೆ ಭಾರತೀಯ ರೈಲ್ವೆ ಕೂಡಾ ಸ್ಪಂದಿನೆ
ನವದೆಹಲಿ(ಮಾ.21): ಪ್ರಧಾನಿ ಮೋದಿ ಕರೆಕೊಟ್ಟಿರುವ ಭಾನುವಾರದ ಜನತಾ ಕರ್ಫ್ಯೂಗೆ ಭಾರತೀಯ ರೈಲ್ವೆ ಕೂಡಾ ಸ್ಪಂದಿಸಿದೆ.
ಭಾನುವಾರ ದೇಶಾದ್ಯಂತ ಯಾವುದೇ ಪ್ಯಾಸೆಂಜರ್, ಮೇಲ್, ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ನಡೆಸದೇ ಇರಲು ಇಲಾಖೆ ನಿರ್ಧರಿಸಿದೆ. ಶನಿವಾರ ಮಧ್ಯರಾತ್ರಿ 12 ಗಂಟೆಯಿಂದ ಭಾನುವಾರ ರಾತ್ರಿ 10 ಗಂಟೆಯವರೆಗೆ ದೇಶದ ಯಾವುದೇ ನಿಲ್ದಾಣಗಳಿಂದ ಪ್ಯಾಸೆಂಜರ್ ರೈಲು ಹೊರಡುವುದಿಲ್ಲ.
ಭಾನುವಾರ ಬೆಳಗ್ಗೆ 4 ಗಂಟೆಯಿಂದ ರಾತ್ರಿ 10ರವರೆಗೆ ಮೇಲ್, ಎಕ್ಸ್‌ಪ್ರೆಸ್ ರೈಲು ಸಂಚಾರ ಇರದು. ಇದೇ ವೇಳೆ ಮಾ.22ರಿಂದ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಎಲ್ಲಾ ರೀತಿಯ ಆಹಾರ ಪೂರೈಕೆ ಬಂದ್‌ಗೆ ನಿರ್ಧರಿಸಿದೆ.