
ಬೆಂಗಳೂರು(ಮಾ.20): ಪ್ರಧಾನಿ ನರೇಂದ್ರ ಮೋದಿ ಕೊರೋನಾ ವೈರಸ್ ಹರಡದಂತೆ ತಡೆಯಲು ಜನರಲ್ಲಿ ಸ್ವಯಂ ದಿಗ್ಬಂಧನದಲ್ಲಿ ಇರಲು ಮನವಿ ಮಾಡಿದ್ದಾರೆ. ಭಾನುವಾರ(ಮಾ.22)ರಂದು ಜನತಾ ಕರ್ಫ್ಯೂ ಹೇರಬೇಕೆಂದು ಕೋರಿದ್ದಾರೆ. ಮೋದಿ ನಿರ್ಧಾರಕ್ಕೆ ಕೆಲವರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಆದರೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಬೆಂಬಲ ಸೂಚಿಸಿದ್ದಾರೆ.
ಕೊರೋನಾ ವೈರಸ್‌ನಿಂದ ದೇಶವನ್ನ ಉಳಿಸಲು ನಮೋ ಮಂತ್ರ..!
ಮೋದಿ ಮನವಿಯನ್ನು ಬೆಂಬಲಿ ದೇವೇಗೌಡ, ಮೋದಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ ಜನತಾ ಕರ್ಫ್ಯೂ ಹಾಗೂ ಜನರ ಕರ್ತವ್ಯದ ಕುರಿತು ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ದೇಶಕ್ಕೆ ಆವರಿಸಿರುವ ಮಹಾಮಾರಿ ಕೊರೋನಾ ವೈರಸ್ ತಡೆಯಲು ಪ್ರಧಾನಿ ಮನವಿಯನ್ನು ಪಾಲಿಸಬೇಕು. ಮೋದಿ ಮಾತಿನಲ್ಲಿ ರಾಜಕೀಯ ಹುಡುಕಬೇಡಿ ಎಂದು ದೇವೇಗೌಡ ಹೇಳಿದ್ದಾರೆ.
ರಾಜಕೀಯ ಜೀವನದ ಅನುಭವ ಅರಿತು ಹೇಳುತ್ತಿದ್ದೇನೆ, ಮಾರಣಾಂತಿರ ವೈರಸ್‌ನಿಂದ ಮುಕ್ತರಾಗಲು ಸರ್ಕಾರ, ಆರೋಗ್ಯ ಇಲಾಖೆ ನೀಡುವ ಸೂಚನೆಗಳನ್ನು ಪಾಲಿಸಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಜನತಾ ಕರ್ಫ್ಯೂ ಮನವಿ ಮಾಡಿರುವುದು ಸರಿಯಾಗಿದೆ ಎಂದು ಮಾಜಿ ಪ್ರಧಾನಿ ಹೇಳಿದರು.
ಎಲ್ಲರು ಜೊತೆಯಾಗಿ ಹೋರಾಡೋಣ, ಕೊರೋನಾ ರೋಗವನ್ನು ತೊಲಗಿಸೋಣ ಎಂದು ದೇಶದ ಜನತೆಯಲ್ಲಿ ದೇವೇಗೌಡ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ