ಮಾಸ್ಕ್ ಧರಿಸಿಯೇ ಸಪ್ತಪದಿ, ಮದುವೆಗೆ ಬಂದವರಿಗೆ ಸಿಕ್ತು ಸ್ಪೆಷಲ್ ಗಿಫ್ಟ್!

By Suvarna NewsFirst Published Mar 21, 2020, 2:56 PM IST
Highlights

ಕೊರೋನಾ ಅಟಟ್ಟಹಾಸ, ಮಾಸ್ಕ್ ಧರಿಸಿಯೇ ಮದುವೆಯಾದ ವಧು, ವರ| ಕೊರೋನಾದಿಂದಾಗಿ ಮೂರು ಬಾರಿ ಮದುವೆ ದಿನಾಂಕ ಬದಲು| ಮದುವೆಗೆ ಆಗಮಿಸಿದ ಅತಿಥಿಗಳಿಗೆ ವಿಶೇಷ ಗಿಫ್ಟ್

ಅಹಮದಾಬಾದ್(ಮಾ.21): ಕೊರೋನಾ ವೈರಸ್ ಭಾರತದಲ್ಲೂ ತನ್ನ ತಾಂಡವ ಮುಂದುವರೆಸಿದೆ. ಸದ್ಯ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ ೨೭೦ ದಾಟಿದ್ದು, ಜನರು ಇದರಿಂದ ಪಾರಾಗಲು ಎಚ್ಚರ ವಿಸುತ್ತಿದ್ದಾರೆ. ಮತ್ತೊಂದೆಡೆ ಹಲವಾರು ಸಭೆ ಸಮಾರಂಭಗಳು ಈ ಮಾರಕ ವೈರಸ್ ನಿಂದಾಗಿ ರದ್ದಾಗಿವೆ. ಆಧರೀಗ ಗುಜರಾತ್ ನಲ್ಲಿ ಮದುವೆಯೊಂದು ನಡೆದಿದ್ದು, ವಧು ಹಾಗೂ ವರ ಇಬ್ಬರೂ ಮಾಸ್ಕ್ ಧರಿಸಿಯೇ ಸಪ್ತಪದಿ ತುಳಿದಿದ್ದಾರೆ.

ಎಲ್ಲಾ ಸಂಪ್ರದಾಯಗಳನ್ನೂ ಮಾಸ್ಕ್ ಧರಿಸಯೇ ಮಾಡಿದ್ರು

ಶುಕ್ರವಾರದಂದು ವಡೋಧರಾದ ವಾಘೋಡಿಯಾ ರಸ್ತೆಯ ಮನಸ್ವೀ ಸೊಸೈಟಿಯಲ್ಲಿ ಈ ಮದುವೆ ಸಮಾರಂಭ ನಡೆದಿದೆ. ಈ ಕಾರ್ಯಕ್ರಮದಲ್ಲಿ ವಧು ಹಾಗೂ ವರ ಇಬ್ಬರ ಕುಟುಂಬ ಸದಸ್ಯರು, ಅತಿಥಿಇಗಳು ಹಾಗೂ ಕ್ಯಾಟರಿಂಗ್ ಸಿಬ್ಬಂದಿ ಕೂಡಾ ಮಾಸ್ಕ್ ಧರಿಸಿದ್ದರು. ವಧುವಿನ ಕಡೆಯವರು ಮದುವೆಗೆ ಆಗಮಿಸಿದ ಅತಿಥಿಗಳಿಗೆ ಗಿಫ್ಟ್ ಬದಲು ಸ್ಯಾನಿಟೈಸರ್ ನೀಡಿದ್ದಾರೆ. ವರ ಶಶಾಂತ್ ಜಾಧವ್ ಹಾಗೂ ವಧು ನಿಧಿ ಸೋನುಣೆ ಮದುವೆಯ ಎಲ್ಲಾ ಸಂಪ್ರದಾಯಗಳನ್ನು ಮಾಸ್ಕ್ ಧರಿಸಿಯೇ ಮಾಡಿದ್ದಾರೆ.

ಮೂರು ಬಾರಿ ಬದಲಾಯಿಸಿದ್ರು ಮದುವೆ ದಿನಾಂಕ

ಈ  ಕುರಿತು ಪ್ರತಿಕ್ರಿಯಿಸಿದ ವರನ ಕುಟುಂಬ ಸದಸ್ಯರು ಕೊರೋನಾ ಅಟ್ಟಹಾಸದದಿಂದಾಗಿ ನಾವು ಮದುವೆ  ದಿನಾಂಕವನ್ನು ಮೂರು ಬಾರಿ ಬದಲಾಯಿಸಿದೆವು. ಮತ್ತೊಂದೆಡೆ ವರನ ಸಹೋದರಿ ಅಮೆರಿಕಾದಲ್ಲಿದ್ದಾಳೆ, ಕೊರೋನಾದಿಂದಾದಿಇ ಆಕೆಗೂ ಈ ಮದುವೆಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಅಲ್ಲದೇ ಬೇರೆ ನಗರಗಳಲ್ಲಿ ವಾಸಿಸುತ್ತಿರುವ ಅನೇಕರಿಗೆ ಮದುವೆಗೆ ಆಗಮಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ಭಾರತದಲ್ಲಿ ಸದ್ಯ ಕೊರೋನಾ ವೈರಸ್ ಪೀಡಿತರ ಸಂಖ್ಯೆ 270 ದಾಟಿದ್ದು, ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮನೆಯಲ್ಲೇ ಉಳಿದುಕೊಳ್ಳಲಾರಂಭಿಸಿದ್ದಾರೆ. ಮತ್ತೊಂದೆಡೆ ಈ ಸೋಂಕು ಜಗಗತ್ತಿನ ಸುಮಾರು 185 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸಿದ್ದು, ಅಪಾರ ಸಾವು ನೋವನ್ನುಂಟು ಮಾಡಿದೆ.

click me!