ಕೊರೋನಾ ಎದುರಿಸಲು ಸರ್ಕಾರದ ಹೊಸ ಪ್ಲಾನ್!

By Suvarna NewsFirst Published Mar 21, 2020, 1:26 PM IST
Highlights

ಕೊರೋನಾ ವೈರಸ್ ತಡೆಗಟ್ಟಲು ಸರ್ಕಾರದ ಹೊಸ ಪ್ಲಾನ್| ಆಸ್ಪತ್ರೆಗಳಿಗೆ ಸರ್ಕಾರದಿಂದ ಹೊಸ ಆದೇಶ|

ನವದೆಹಲಿ(ಮಾ.21): ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ತಾನು ರೂಪಿಸಿರುವ ಯೋಜನೆಯಲ್ಲಿ ಕೊಂಚ ಬದಲಾವಣೆ ತಂದಿದೆ. ಇನ್ಮುಂದೆ ಎಲ್ಲಾ ಆಸ್ಪತ್ರೆಗಳಲ್ಲೂ ನ್ಯುಮೋನಿಯಾ ರೋಗಿಗಳ ತಪಾಸಣೆಯೂ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳಿಗೂ ಆದೇಶ ಜಾರಿಗೊಳಿಸಿದೆ.

ಆರೋಗ್ಯ ಇಲಾಖೆಯಿಂದ ಶುಕ್ರವಾರ ಜಾರಿಗೊಳಿಸಿರುವ ಈ ಆದೇಶದಲ್ಲಿ ಯಾವೊಬ್ಬ ಕೊರೋನಾ ವೈರಸ್ ಸೋಂಕು ಶಂಕಿತ ವ್ಯಕ್ತಿ ಆಸ್ಪತ್ರೆಯಿಂದ ಹೊರ ಹೋಗಬಾರದು. ಅಲ್ಲದೇ ಇಂತಹ ರೋಗಿಗಳ ಕುರಿತು ಕೂಡಲೇ NCDC ಹಾಗೂ IDSPಗೆ ಮಾಹಿತಿ ನೀಡಬೇಕು. ಹಾಗೆಯೇ ನ್ಯುಮೋನಿಯಾದಿಂದ ಬಳಲುತ್ತಿರುವ ಎಲ್ಲಾ ರೋಗಿಗಳ ಕುರಿತಾಗಿಯೂ NCDC ಹಾಗೂ IDSPಗೆ ಮಾಹಿತಿ ನೀಡಬೇಕು. ಈ ಮೂಲಕ ಅವರಿಗೂ ಕೊರೋನಾ ವೈರಸ್ ತಪಾಸಣೆ ನಡೆಸಬೇಕು. ಇನ್ನು ಆಸ್ಪತ್ರೆಗಳಲ್ಲಿ ಸೋಶಿಯಲ್ ಡಿಸ್ಟೆಂನ್ಸ್ ಅಗತ್ಯವಾಗಿ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದೆ.

ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನು ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಎಚ್ಚುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಿವೆ. ಅಂತೆಯೇ ಜನರಲ್ಲಿ ಅದನ್ನು ಪಾಲಿಸುವಂತೆ ಮನವಿ ಮಾಡಿಕೊಂಡಿದೆ. ಸದ್ಯ ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 271ಕ್ಕೆ ಏರಿಕೆಯಾಗಿದೆ.

click me!