ಕೊರೋನಾ ವೈರಸ್ ಸಂಕಷ್ಟ; ಮುದ್ದಿನ ನಾಯಿಗೆ 2 ವಾರ ಐಸೋಲೇಶನ್!

By Suvarna NewsFirst Published Apr 15, 2020, 10:33 PM IST
Highlights
ಕೊರೋನಾ ಸೋಂಕು ಇದೀಗ ಹೇಗೆ ಹರಡುತ್ತಿದೆ ಅನ್ನೋದನ್ನು ಪತ್ತೆ ಹಚ್ಚುವುದೇ ಕಷ್ಟವಾಗುತ್ತಿದೆ. ಮನೆಯೊಳಗೆ ಇದ್ದ ಹಲವರಿಗೆ ಕೊರೋನಾ ಸೋಂಕು ತಗುಲಿದೆ ಊದಾಹರಣೆಗಳಿವೆ. ಕೊರೋನಾ ವೈರಸ್‌ ತಗುಲಿ ನಾಯಿಯನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದು ಮಾತ್ರವಲ್ಲ,  ನಾಯಿಯನ್ನು 2 ವಾರ ಐಸೋಲೇಶನ್‌ನಲ್ಲಿಟ್ಟು ತಪಾಸಣೆ ನಡೆಸಲಾಗಿದೆ. ಈ ಕುರಿತು ವಿವರ ಇಲ್ಲಿದೆ.
ಮುಂಬೈ(ಏ.15): ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇತ್ತ ಸಾವನ್ನಪ್ಪುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಅದರಲ್ಲೂ ಮಹಾರಾಷ್ಟ್ರ ಕೊರೋನಾ ಹೊಡೆತಕ್ಕೆ ನಲುಗಿದೆ. ಮುಂಬೈನ ದಿಯೋನರ್‌ನಲ್ಲಿನ ಕುಂಟಬದಲ್ಲಿನ ಮುದ್ದಿನ ಪಮೋರಿಯನ್ ನಾಯಿಯನ್ನು 65 ವರ್ಷದ ವೃದ್ಧೆ ನೋಡಿಕೊಳ್ಳುತ್ತಿದ್ದರು. ಇದೀಗ ವೃದ್ಧೆ ಕೊರೋನಾ ಸೋಂಕಿಗೆ ಬಲಿಯಾದ ಕಾರಣ, ನಾಯಿಮರಿಯನ್ನು 2 ವಾರ ಐಸೋಲೇಶನ್‌ನಲ್ಲಿ ಇಡಲಾಗಿತ್ತು.

ಮಹಾರಾಷ್ಟದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ದಿಯೋನರ್‌ನಲ್ಲಿ ನೆಲೆಸಿದ್ದ ಕುಟುಂಬದಲ್ಲಿನ ನಾಯಿಯನ್ನು ವೃದ್ಧೆ ಆರೈಕೆ ಮಾಡುತ್ತಿದ್ದರು. ಆದರೆ ಕೊರೋನಾ ಸೋಂಕು ತಗುಲಿದೆ ಕಾರಣ ವೃದ್ಧೆ ಆಸ್ಪತ್ರೆಯಲ್ಲಿ ಅಸುನೀಗಿದ್ದರು. ಹೀಗಾಗಿ ಕುಟುಂಬದ 7 ಜನರನ್ನು ಕ್ವಾರಂಟನೈನ್‌ಲ್ಲಿ ಇಡಲಾಗಿತ್ತು.  ಇಷ್ಟೇ ಅಲ್ಲ ಮನೆಯ ಮುದ್ದಿನ ಪಮೋರಿಯನ್ ನಾಯಿಯನ್ನು 2 ವಾರಗಳ ಕಾಲ ಐಸೋಲೇಶನ್‌ನಲ್ಲಿಟ್ಟು ತಪಾಸಣೆ ಮಾಡಲಾಯಿತು.

ಸತತ 2 ವಾರ ತಪಾಸಣೆ, ಪರೀಕ್ಷೆಗಳ ಬಳಿಕ ನಾಯಿ ಮರಿಯಲ್ಲಿ ಯಾವುದೇ ಕೊರೋನಾ ರೋಗದ ಲಕ್ಷಣಗಳು ಕಾಣಿಸಿಲ್ಲ. ಹೀಗಾಗಿ ನಾಯಿ ಮರಿಯನ್ನು ಮತ್ತೆ ಮನೆಗೆ ವಾಪಸ್ ತಂದು ಬಿಡಲಾಗಿದೆ. ಇತ್ತ ಕುಟಂಬದ 7 ಮಂದಿ ಕೂಡ 14 ದಿನದ ಕ್ವಾರಂಟೈನ್ ಬಳಿಕ ಯಾವುದೇ ಕೊರೋನ ವೈರಸ್ ರೋಗಲಕ್ಷಣಗಳು ಕಾಣಸಿಲ್ಲ. ಆದರೂ ಮನೆಯಿಂದ ಹೊರಬದಂತೆ ಸೂಚಿಸಲಾಗಿದೆ. 
 
click me!