ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ವಾರ ಲಾಕ್‌ಡೌನ್!

By Suvarna News  |  First Published Apr 25, 2021, 1:30 PM IST

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮತ್ತೊಂದು ವಾರ ಲಾಕ್ ಡೌನ್ ಮುಂದುವರಿಕೆ| ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿಕೆ| ಕೊರೊನಾ ಸೋಂಕು ದೆಹಲಿಯಲ್ಲಿ ಹೆಚ್ಚುತ್ತಿದೆ| ಮತ್ತೊಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ


ನವದೆಹಲಿ(ಏ.25): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಪ್ರಕರಣಗಳು ಏರುತ್ತಿರುವ ಹಿನ್ನೆಲೆ ಈಗಾಗಲೇ ವಿಧಿಸಲಾಗಿದ್ದ ಲಾಕ್‌ಡೌನ್‌ ಇನ್ನೊಂದು ವಾರ ಮುಂದುವರೆಸಲಾಗಿದೆ. ಈ ಬಗ್ಗೆ ಸಿಎಂ ಅರವಿಂದ ಕೇಜ್ರೀವಾಲ್ ಅಧಿಕೃತ ಆದೇಸ ಹೊರಡಿಸಿದ್ದಾರೆ.

ಕೊರೋನಾ 2ನೇ ಅಲೆ, ಒಂದೇ ವಾರದಲ್ಲಿ ಮೋದಿ ಮಾಡಿದ್ದಿಷ್ಟು!

Latest Videos

undefined

ಇವತ್ತು ಸುದ್ದಿಗೋಷ್ಠಿಯಲ್ಲಿ ಲಾಕ್ ಡೌನ್ ವಿಸ್ತರಣೆಯ ಮಾಹಿತಿ ನೀಡಿದ ಕೇಜ್ರಿವಾಲ್ ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಅಗತ್ಯ. ಹೀಗಾಗಿ ಮೇ 3 ಬೆಳಗಿನ ಜಾವದವರೆಗೆ ಈ ಲಾಕ್‌ಡೌನ್ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿದ್ದಾರೆ. 

"

ಇದೇ ವೇಳೆ ಇನ್ನು ಆಕ್ಸಿಜನ್ ಕೊರತೆ ಬಗ್ಗೆ ಮಾತಾಡಿದ ಕೇಜ್ರಿವಾಲ್ ದೆಹಲಿಗೆ 700 ಮೆಟ್ರಿಕ್ ಟನ್ ಅಗತ್ಯ ಇದೆ. ಈಗ 330 ಮೆಟ್ರಿಕ್ ಟನ್ ದೆಹಲಿ ತಲುಪಿದೆ. ಉಳಿದಂತೆ ಆಕ್ಸಿಜನ್ ತಯಾರಿಕರು, ಪೂರೈಕೆದಾರರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಆಕ್ಸಿಜನ್ ಪೂರೈಕೆ ಕುರಿತು ಪ್ರತಿ ಎರಡು ಗಂಟೆಗೊಮ್ಮೆ ಪರಾಮರ್ಶೆ ನಡೆಸಲಾಗುತ್ತಿದೆ ಎಂದೂ ಮಾಹಿತಿ ನೀಡಿದ್ದಾರೆ.
 

click me!