ಕೊರೋನಾ 2ನೇ ಅಲೆ, ಒಂದೇ ವಾರದಲ್ಲಿ ಮೋದಿ ಮಾಡಿದ್ದಿಷ್ಟು!

By Suvarna News  |  First Published Apr 25, 2021, 11:55 AM IST

 ಇಂತಹ ಸ್ಥಿತಿಯಲ್ಲಿ ಯಾರನ್ನು ದೂಷಿಸುವುದು ಸರಿ? ವೈದ್ಯಕೀಯ ಸೌಲಭ್ಯಕ್ಕಾಗಿ ಹಣ ಬಿಡುಗಡೆ ಮಾಡಿದ ಕೇಂದ್ರವನ್ನೋ ಅಥವಾ ಕೇಂದ್ರ ಬಿಡುಗಡೆ ಮಾಡಿದ ಹಣ ಬಳಕೆ ಮಾಡದೇ ಈಗ ವೈದ್ಯಕೀಯ ಕೊರತೆ ಎದುರಿಸುತ್ತಿರುವ ರಾಜ್ಯ ಸರ್ಕಾರವನ್ನೋ?
 


ನವದೆಹಲಿ(ಏ.25): ದೇಶದಲ್ಲಿ ಕೊರೋನಾ ತಾಂಡವವಾಡುತ್ತಿದೆ. ಎರಡನೇ ಅಲೆ ಗಂಭೀರ ಸ್ವರೂಪ ಪಡೆದಿದ್ದು, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಆಸ್ಪತ್ರೆಗಳು ಭರ್ತಿಯಾಗಿದ್ದು, ಸೋಂಕಿತರ ಹಾಗೂ ಸಾವಿನ ಪ್ರಮಾಣ ಏರಿಕೆಯಾಗುತ್ತಿದೆ. ಹೀಗಿರುವಾಗ ಜನ ಸಾಮಾನ್ಯರ ಮನದಲ್ಲಿ ಸರ್ಕಾರವೇನು ಮಾಡಿದೆ? ಎಂಬ ಪ್ರಶ್ನೆ ಮನೆ ಮಾಡಿದ್ದು, ಈ ಬಗ್ಗೆ ಜನರು ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೀಗಿರುವಾಗ ಎರಡನೇ ಅಲೆ ದೇಶಕ್ಕೆ ಎಂಟ್ರಿ ಕೊಟ್ಟಾಗಿನಿಂದ, ಕಳೆದೊಂದು ವಾರದಲ್ಲಿ ಕೇಂದ್ರ ಸರ್ಕಾರ ಏನು ಮಾಡಿದೆ? ಮೊದಲ ಅಲೆ ಬಂದ ಬಳಿಕ ಮುಂದೆ ಇಂತಹ ಪರಿಸ್ಥಿತಿ ಎದುರಾದಾಗ ಸಜ್ಜಾಗಿರುವಂತೆ ರಾಜ್ಯ ಸರ್ಕಾರಗಳಿಗೆ ಯಾವ ರೀತಿಯ ಅನುದಾನ ಘೋಷಿಸಿದೆ ಹಾಗೂ ರಾಜ್ಯಗಳು ಇದನ್ನು ಯಾವ ರೀತಿ ಬಳಸಿಕೊಂಡಿದೆ ಎಂದು ತಿಳಿದುಕೊಳ್ಳುವುದು ಅತೀ ಅವಶ್ಯಕ. ಈ ಕುರಿತಾದ ಕೆಲ ಮಾಹಿತಿ ಇಲ್ಲಿದೆ ನೋಡಿ

Tap to resize

Latest Videos

undefined

ಕೋವಿಡ್ ಲಸಿಕೆ: ಮಹತ್ವದ ಹೆಜ್ಜೆ ಇಟ್ಟ ಯಡಿಯೂರಪ್ಪ

ಒಂದು ವಾರದೊಳಗೆ ಮೋದಿ ಮಾಡಿದ್ದೇನು?

* ಜರ್ಮನಿಯಿಂದ 23 ಆಕ್ಸಿಜನ್ ಟ್ಯಾಂಕರ್‌ ಏರ್‌ಲಿಫ್ಟ್‌.

* ಯುಎಇಯಿಂದಲೂ ಆಕ್ಸಿಜನ್ ಟ್ಯಾಂಕರ್‌ ಏರ್‌ಲಿಫ್ಟ್

* ಸಿಂಗಾಪುರದಿಂದ ಆಕ್ಸಿಜನ್ ಟ್ಯಾಂಕರ್‌ಗಳ ಏರ್‌ಲಿಫ್ಟ್

* ಪ್ರತೀ ರಾಜ್ಯಕ್ಕೂ ಆಕ್ಸಿಜನ್‌ ಎಕ್ಸ್‌ಪ್ರೆಸ್‌ ಟ್ರೈನ್‌ ರವಾನೆ

* 262 ಆಕ್ಸಿಜನ್‌ ಘಟಕಗಳ ಸ್ಥಾಪನೆ(ಇವುಗಳಲ್ಲಿ 22 ಈಗಾಗಲೇ ಆರಂಭಗೊಂಡಿವೆ)

* ಪ್ರತಿಯೊಬ್ಬ ಉದ್ಯಮಿಗಳನ್ನು ಕೇಂದ್ರ ಸಂಪರ್ಕಿಸಿದ್ದು, ಅಂಬಾನಿ, ಅದಾನಿ, ಜಿಂದಾಲ್‌ ಮೊದಲಾದವರ ಬಳಿ ತಮ್ಮ ಕೈಗಾರಿಕಾ ಘಟಕದಲ್ಲಿ ಬಳಸುವ ಆಮ್ಲಜನಕ ಒದಗಿಸುವಂತೆ ಮನವಿ ಮಾಡಿದೆ.

* ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಸಾವಿರಕ್ಕೂ ಅಧಿಕ ಐಸಿಯು ಹಾಗೂ ಆಕ್ಸಿಜನ್‌ನ ಬೆಡ್‌ ವ್ಯವಸ್ಥೆ ಮಾಡಿದೆ.

* ಕೊರೋನಾ ಹೋರಾಟದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುವ ರೆಮ್‌ಡೆಸಿವಿರ್ ಇಂಜೆಕ್ಷನ್‌ಗಳ ಉತ್ಪಾದನೆ ಹೆಚ್ಚಿಸಿದೆ. ಈ ಹಿಂದೆ ಪ್ರತಿ ತಿಂಗಳು ನಲ್ವತ್ತು ಲಕ್ಷ ಉತ್ಪಾದನೆಯಾಗುತ್ತಿದ್ದ ರೆಮ್‌ಡೆಸಿವಿರ್‌ ತೊಂಭತ್ತು ಲಕ್ಷಕ್ಕೇರಿಸಲಾಗಿದೆ.

* DRDO/ITBP ಹಾಗೂ ಭಾರತೀಯ ಸೇನೆ ಒಟ್ಟಾಗಿ ಬೆಡ್‌ ವ್ಯವಸ್ಥೆ, ವೈದ್ಯರು ಹಾಗೂ ರಕ್ಷಣಾ ಇಲಾಕೆಯಡಿ ನೀಡಬಹುದಾದ ಎಲ್ಲಾ ಸೇವೆಯನ್ನು ಒದಗಿಸುತ್ತಿದೆ.

* ಮೇ ತಿಂಗಳಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಆರಂಭವಾಗಲಿದೆ.

* ಬಿಜೆಪಿ ಸರ್ಕಾರವಿರುವ ಎಲ್ಲಾ ರಾಜ್ಯಗಳಲ್ಲಿ ಕೊರೋನಾ ಲಸಿಕೆ ಉಚಿತವಾಗಿ ವಿತರಣೆ.

* ಎಂಭತ್ತು ಕೋಟಿ ಜನರಿಗೆ ಮುಂದಿನ ಎರಡು ತಿಂಗಳವರೆಗೆ ಐದು ಕೆಜಿ ಉಚಿತ ರೇಷನ್ ವಿತರಣೆ.

ಇಂದು ಪಿಪಿಇ ಕಿಟ್‌, ಮಾಸ್ಕ್ ಹಾಗೂ ವೆಂಟಿಲೇಟರ್‌ ವಿಚಾರದಲ್ಲಿ ಯಾವುದೇ ಕೊರತೆ ಎದುರಾಗಿಲ್ಲ. ಕಳೆದ ವರ್ಷದಿಂದ ಇವುಗಳ ಉತ್ಪಾದನೆ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಭಿವೃದ್ಧಿಗೊಂಡ ರಾಷ್ಟ್ರಗಳನ್ನು ನಡುಗಿಸುವ ಇಂತಹ ಮಹಾಮಾರಿಯನ್ನು ಭಾರತ ಧೈರ್ಯದಿಂದ ಎದುರಿಸಿದ್ದು, ಈ ಹೋರಾಟಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತಿದೆ.

ಲಸಿಕೆಗೆ ವಿಭಿನ್ನ ದರವೇಕೆ?: ಪ್ರಧಾನಿಗೋ ಸೋನಿಯಾ ಪತ್ರ

ಕಹಿ ಸತ್ಯ: ಕಳೆದ ವರ್ಷ ರಾಜ್ಯ ಸರ್ಕಾರಗಳ ಬೇಡಿಕೆಯಂತೆ 162 ಆಕ್ಸಿಜನ್ ಘಟಕಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದಕ್ಕಾಗಿ ಬೇಕಾದ ಮೊತ್ತವನ್ನೂ ಬಿಡುಗಡೆ ಮಾಡಿದೆ.

ಆದರೆ ರಾಜ್ಯ ಸರ್ಕಾರಗಳು ಈವರೆಗೆ ಕೇವಲ 33 ಘಟಕಗಳನ್ನಷ್ಟೇ ಸ್ಥಾಪಿಸುವಲ್ಲಿ ಯಶಸ್ವಿಯಾಗಿವೆ.

ದೆಹಲಿ ಸರ್ಕಾರ ಎಂಟು ಘಟಕಗಳ ಪೈಕಿ ಕೇವಲ ಒಂದನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಘಿದೆ

ಪಶ್ಚಿಮ ಬಂಗಾಳ: ಈವರೆಗೂ ಒಂದು ಘಟಕವನ್ನೂ ಸ್ಥಾಪಿಸಿಲ್ಲ.

ರಾಜಸ್ಥಾನ: ಇಲ್ಲೂ ಒಂದೂ ಘಟಕ ಸ್ಥಾಪನೆಯಾಗಿಲ್ಲ.

ಹೀಗಿರುವಾಗ ಇಂತಹ ಸ್ಥಿತಿಯಲ್ಲಿ ಯಾರನ್ನು ದೂಷಿಸುವುದು ಸರಿ? ವೈದ್ಯಕೀಯ ಸೌಲಭ್ಯಕ್ಕಾಗಿ ಹಣ ಬಿಡುಗಡೆ ಮಾಡಿದ ಕೇಂದ್ರವನ್ನೋ ಅಥವಾ ಕೇಂದ್ರ ಬಿಡುಗಡೆ ಮಾಡಿದ ಹಣ ಬಳಕೆ ಮಾಡದೇ ಈಗ ವೈದ್ಯಕೀಯ ಕೊರತೆ ಎದುರಿಸುತ್ತಿರುವ ರಾಜ್ಯ ಸರ್ಕಾರವನ್ನೋ?

ಬೆಂಗಳೂರಿನ ಉಚಿತ ಕೊರೋನಾ ಕೇಂದ್ರಗಳ ಪಟ್ಟಿ

 


 

click me!