1.5 ಲಕ್ಷ ಸಕ್ರಿಯ ಕೇಸ್‌: ಬೆಂಗ್ಳೂರು ದೇಶಕ್ಕೇ ನಂ.1!

By Kannadaprabha News  |  First Published Apr 25, 2021, 9:47 AM IST

1.5 ಲಕ್ಷ ಸಕ್ರಿಯ ಕೇಸ್‌| ಬೆಂಗ್ಳೂರು ದೇಶಕ್ಕೇ ನಂ.1| ಮುಂಬೈ, ದೆಹಲಿಯಂತಹ ನಗರಗಳನ್ನೂ ಹಿಂದಿಕ್ಕಿದ ಐಟಿ ಸಿಟಿ| ಪುಣೆಗೆ 2ನೇ ಸ್ಥಾನ


ನವದೆಹಲಿ(ಏ.25): ಕೊರೋನಾ ಎರಡನೇ ಅಲೆಯಿಂದ ಅತಿ ಹೆಚ್ಚು ನಲುಗಿರುವ ಜಿಲ್ಲೆ ದೇಶದಲ್ಲಿ ಯಾವುದಾದರೂ ಇದ್ದರೆ ಅದು ಮುಂಬೈ ಹಾಗೂ ದೆಹಲಿಯಲ್ಲ. ಕರ್ನಾಟಕದ ರಾಜಧಾನಿ ಬೆಂಗಳೂರು ಎಂಬ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

"

Tap to resize

Latest Videos

ಕರ್ನಾಟಕದಲ್ಲಿ ಪ್ರತಿ ದಿನ ಪತ್ತೆಯಾಗುವ ಸೋಂಕಿಗೆ ಶೇ.70ರಷ್ಟುಕೊಡುಗೆ ನೀಡುತ್ತಾ ಬಂದಿರುವ ಬೆಂಗಳೂರಿನಲ್ಲಿ ಸದ್ಯ 1.5 ಲಕ್ಷ ಸಕ್ರಿಯ ಪ್ರಕರಣಗಳು ಇವೆ. ಅತಿ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿರುವ ದೇಶದ 10 ಜಿಲ್ಲೆಗಳಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿದ್ದರೂ, ಆ ರಾಜ್ಯದಲ್ಲಿ ಅಧಿಕ ಸಕ್ರಿಯ ಪ್ರಕರಣಗಳಿರುವುದು ಪುಣೆಯಲ್ಲಿ. ಅಲ್ಲಿ 1.20 ಲಕ್ಷ ಸಕ್ರಿಯ ಪ್ರಕರಣಗಳಿದ್ದು, ಬೆಂಗಳೂರು ನಂತರದ 2ನೇ ಸ್ಥಾನದಲ್ಲಿದೆ. ದೇಶದಲ್ಲಿ ಬೆಂಗಳೂರು, ಪುಣೆ ಹೊರತುಪಡಿಸಿದರೆ ಬೇರಾವ ರಾಜ್ಯದ ಜಿಲ್ಲೆಯಲ್ಲೂ 1 ಲಕ್ಷ ಮೇಲ್ಪಟ್ಟಸಕ್ರಿಯ ಪ್ರಕರಣಗಳು ಇಲ್ಲ.

ಹೈದರಾಬಾದ್‌ 94 ಸಾವಿರ ಪ್ರಕರಣಗಳೊಂದಿಗೆ 3ನೇ ಸ್ಥಾನದಲ್ಲಿದೆ. ಮಿಕ್ಕಂತೆ ಟಾಪ್‌ 10ರ ಪಟ್ಟಿಯಲ್ಲಿ ಮಹಾರಾಷ್ಟ್ರದ ಐದು ಜಿಲ್ಲೆಗಳು ಇವೆ. ಅವೆಂದರೆ ಪುಣೆ, ಮುಂಬೈ, ನಾಗಪುರ, ಥಾಣೆ, ನಾಸಿಕ್‌. ಲಖನೌ, ಕಾಮರೂಪ್‌ ಮೆಟ್ರೋ (ಗುವಾಹಟಿ), ಅಹಮದಾಬಾದ್‌ ಜಿಲ್ಲೆಗಳು 10ರ ಪಟ್ಟಿಯಲ್ಲಿರುವ ಇತರೆ ಜಿಲ್ಲೆಗಳಾಗಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 11 ಜಿಲ್ಲೆಗಳು ಇವೆ. ಅಷ್ಟೂಜಿಲ್ಲೆಗಳಲ್ಲಿ ಒಟ್ಟು 1 ಲಕ್ಷ ಸಕ್ರಿಯ ಪ್ರಕರಣಗಳು ಇವೆ. ಹೀಗಾಗಿ ದೆಹಲಿಯನ್ನು ಒಂದು ಜಿಲ್ಲೆಯಾಗಿ ಪರಿಗಣಿಸಿಲ್ಲ. ಆದರೆ ದೆಹಲಿಗಿಂತ ಚಿಕ್ಕದಾಗಿರುವ ಬೆಂಗಳೂರಿನಲ್ಲಿ ಅಧಿಕ ಸಕ್ರಿಯ ಪ್ರಕರಣ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಎಲ್ಲಿ ಎಷ್ಟು ಸಕ್ರಿಯ ಕೇಸ್‌?

1. ಬೆಂಗಳೂರು 1.50 ಲಕ್ಷ

2. ಪುಣೆ 1.16 ಲಕ್ಷ

3. ಹೈದರಾಬಾದ್‌ 94000

4. ಮುಂಬೈ 81100

5. ನಾಗಪುರ 80900

6. ಥಾಣೆ 77800

7. ಲಖನೌ 53500

8. ನಾಸಿಕ್‌ 43800

9. ಗುವಾಹಟಿ 39000

10. ಅಹಮದಾಬಾದ್‌ 36200

*ದೆಹಲಿಯಲ್ಲಿ 11 ಜಿಲ್ಲೆಗಳಿದ್ದು, ಒಟ್ಟಾರೆ 1 ಲಕ್ಷ ಸಕ್ರಿಯ ಕೇಸುಗಳಿವೆ.

click me!