* ಸಕ್ರಿಯ ಕೇಸು 12.72 ಲಕ್ಷಕ್ಕೆ ಏರಿಕೆ, ಪಾಸಿಟಿವಿಟಿ ದರ ಶೇ.14.78ಕ್ಕೆ
* 315 ಸೋಂಕಿತರು ಬಲಿ, 265 ಹೊಸ ಒಮಿಕ್ರೋನ್ ಕೇಸು
* ದೇಶದಲ್ಲಿ ಒಂದೇ ದಿನ 2.64 ಲಕ್ಷ ಸೋಂಕು: 8 ತಿಂಗಳ ಗರಿಷ್ಠ
ನವದೆಹಲಿ(ಜ.15): ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 2,64,202 ಕೋವಿಡ್ ಪ್ರಕರಣಗಳು ದಾಖಲಾಗಿದೆ. ಇದು ಕಳೆದ 239 ದಿನಗಳಲ್ಲೇ (8 ತಿಂಗಳಲ್ಲಿ) ದಾಖಲಾದ ಅತಿ ಹೆಚ್ಚಿನ ದೈನಂದಿನ ಪ್ರಕರಣವಾಗಿದೆ.
ಇದೇ ಅವಧಿಯಲ್ಲಿ 315 ಸೋಂಕಿತರು ಸಾವಿಗೀಡಾಗಿದ್ದು, ಒಟ್ಟು ಪ್ರಕರಣ 3.65 ಕೋಟಿಗೆ ಹಾಗೂ ಒಟ್ಟು ಸಾವು 4.85 ಲಕ್ಷಕ್ಕೆ ಏರಿಕೆಯಾಗಿದೆ.
undefined
ಇನ್ನು ಸಕ್ರಿಯ ಪ್ರಕರಣಗಳು 12.72 ಲಕ್ಷಕ್ಕೆ ಏರಿಕೆಯಾಗಿದ್ದು, ಇದು 220 ದಿನಗಳ (7.5 ತಿಂಗಳ) ಗರಿಷ್ಠವಾಗಿದೆ. ಕಳೆದ 24 ಗಂಟೆಗಳಲ್ಲಿ 1.54 ಲಕ್ಷ ಸಕ್ರಿಯ ಪ್ರಕರಣಗಳು ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರ ಶೇ.14.78ರಷ್ಟುದಾಖಲಾಗಿದೆ. ಈವರೆಗೆ ದೇಶದಲ್ಲಿ 155.39 ಕೊಟಿ ಡೋಸ್ ಲಸಿಕೆ ವಿತರಿಸಲಾಗಿದೆ.
ಒಮಿಕ್ರೋನ್ ಕೇಸು 5753ಕ್ಕೆ:
ಈ ನಡುವೆ, 265 ಹೊಸ ಒಮಿಕ್ರೋನ್ ಪ್ರಕರಣಗಳು ಶುಕ್ರವಾರ ವರದಿಯಾಗಿವೆ. ಇದರೊಂದಿಗೆ ಒಮಿಕ್ರೋನ್ ಸೋಂಕಿತರ ಸಂಖ್ಯೆ 5,753ಕ್ಕೇರಿದೆ. ಗುರುವಾರಕ್ಕೆ ಹೋಲಿಸಿದರೆ ಒಮಿಕ್ರೋನ್ ಪ್ರಕರಣಗಳಲ್ಲಿ ಶೇ.4.83ರಷ್ಟುಹೆಚ್ಚಳವಾಗಿದೆ.