ಕೊರೋನಾಗೆ ದೇಶದಲ್ಲಿ ಮತ್ತೊಂದು ಬಲಿ: ಸಾವಿನ ಸಂಖ್ಯೆ 11ಕ್ಕೇರಿಕೆ!

By Suvarna NewsFirst Published Mar 25, 2020, 4:10 PM IST
Highlights

ದೇಶದಲ್ಲಿ ಮುಂದುವರೆದ ಕೊರೋನಾ ಅಟ್ಟಹಾಸ| ಮತ್ತೊಬ್ಬ ವ್ಯಕ್ತಿ ಬಲಿ, ಸೋಂಕಿತರ ಸಂಖ್ಯೆಯೂ ಹೆಚ್ಚಳ| ಲಾಕ್‌ಡೌನ್‌ ಮತ್ತಷ್ಟು ಸ್ಟ್ರಿಕ್ಟ್

ಚೆನ್ನೈ (ಮಾ. 25): ಮಾರಕ ಕೊರೋನಾ ವೈರಸ್​ಗೆ ದೇಶದಲ್ಲಿ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದು, ಈ ಮೂಲಕ ಭಾರತದಲ್ಲಿ  ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಕೊರೋನಾ ವೈರಸ್‌ಗೆ ಬಲಿಯಾದ ವ್ಯಕ್ತಿ ತಮಿಳುನಾಡಿನವರಾಗಿದ್ದು, ಈ ಮೂಲಕ ಕೊರೋನಾ ಭೀತಿ ಮತ್ತಷ್ಟು ಹೆಚ್ಚಿದೆ. 

ತಮಿಳುನಾಡಿನ 54 ವರ್ಷದ ವ್ಯಕ್ತಿ ಮಧುರೈನ ರಾಜಾಜಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ ಕೊರೋನಾ ಸೋಂಕು ತಗಲಿರುವುದು ಸೋಮವಾರ ದೃಢವಾಗಿದ್ದು, ಚಿಕಿತ್ಸೆ ಆರಂಭಿಸಲಾಗಿತ್ತು. ಆದರೀಗ ಚಿಕಿತ್ಸೆ ಫಲಕಾರಿಯಾಗದೆ ಇಂದು, ಬುಧವಾರ ಬೆಳಗ್ಗೆ ಅವರು ಮೃತಪಟ್ಟಿರುವುದಾಗಿ ತಮಿಳುನಾಡಿನ ಆರೋಗ್ಯ ಸಚಿವ ಡಾ. ಸಿ. ವಿಜಯ ಭಾಸ್ಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

: Despite our best efforts, the +ve Pt at MDU, , passed away few minutes back.He had medical history of prolonged illness with steroid dependent COPD, uncontrolled Diabetes with Hypertension.

— Dr C Vijayabaskar (@Vijayabaskarofl)

ಸದ್ಯ ಭಾರತದಲ್ಲಿ ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಲಾಗಿದೆ. ಈ ಮೂಲಕ ಜನರು ಮನೆಯಲ್ಲೇ ಇರುವಂತೆ ಸೂಚನೆ ನಿಡಲಾಗಿದೆ. 

click me!