ಕೊಡಗಿನಲ್ಲಿ ಚೈನ್‌ಬ್ರೇಕ್‌: ಸತತ 26 ದಿನಗಳಿಂದ ಹೊಸ ಸೋಂಕು ಇಲ್ಲ!

By Kannadaprabha NewsFirst Published Apr 19, 2020, 8:14 AM IST
Highlights

ಕೊಡಗಿನಲ್ಲಿ ಸೋಂಕಿನ ಚೈನ್‌ಬ್ರೇಕ್‌| ಸತತ 26 ದಿನಗಳಿಂದ ಒಂದು ಸೋಂಕು ಪತ್ತೆ ಇಲ್ಲ

ನವದೆಹಲಿ(ಏ.19): ಕೊರೋನಾ ನಿಗ್ರಹಕ್ಕಾಗಿ ಲಾಕ್‌ಡೌನ್‌ ಸೇರಿದಂತೆ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ವಿವಿಧ ನಿಯಮಗಳು ಫಲ ಕೊಡುತ್ತಿವೆ. ಇದಕ್ಕೆ ಉದಾಹರಣೆಯಾಗಿ ಕೊರೋನಾ ಸೋಂಕಿತ ಜಿಲ್ಲೆಗಳಾದ ಕೊಡಗು ಮತ್ತು ಮಾಹೆಯಲ್ಲಿ ಕಳೆದ 28 ದಿನಗಳಲ್ಲಿ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ. 23 ರಾಜ್ಯಗಳ 47 ಜಿಲ್ಲೆಗಳಲ್ಲಿ ಕಳೆದ 14 ದಿನದಲ್ಲಿ ಒಂದೂ ಪ್ರಕರಣ ದಾಖಲಾಗಿಲ್ಲ. ತಳಮಟ್ಟದಲ್ಲಿ ನಾವು ಕೈಗೊಳ್ಳುತ್ತಿರುವ ಕಠಿಣ ಕ್ರಮಗಳು ಫಲ ನೀಡುತ್ತಿವೆ. ಕೇರಳದ ಕಾಸರಗೋಡಿನಲ್ಲಿ ದಾಖಲಾಗಿದ್ದ 168 ಜನರ ಪೈಕಿ 113 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ದೇಶದಲ್ಲಿ ಕೊರೋನಾಗೆ 500 ಸಾವು, 15,000 ಮಂದಿಗೆ ಸೋಂಕು!

ಸದ್ಯ ನಾವು ನಡೆಸುತ್ತಿರುವ ಆರ್‌ಟಿ-ಪಿಸಿಆರ್‌ ಟೆಸ್ಟ್‌ ಕೊರೋನಾ ಸೋಂಕು ಪತ್ತೆಗೆ ಅತ್ಯುತ್ತಮ ಟೆಸ್ಟ್‌ ಆಗಿದೆ. ರಾರ‍ಯಪಿಡ್‌ ಟೆಸ್ಟ್‌ ಮೂಲಕ ನಡೆಸುವ ಪ್ರತಿಕಾಯಗಳ ಪರೀಕ್ಷೆಯು ನಿರ್ದಿಷ್ಟಪ್ರದೇಶದಲ್ಲಿ ವೈರಸ್‌ ಸೋಂಕು ಇದೆಯೇ ಎಂಬುದನ್ನು ಪತ್ತೆಹಚ್ಚುವುದಕ್ಕೆ ಹಾಗೂ ಸರ್ವೇಕ್ಷಣೆಗೆ ಮಾತ್ರ ಪ್ರಯೋಜನಕ್ಕೆ ಬರುತ್ತದೆ. ವ್ಯಕ್ತಿಯಲ್ಲಿ ಸೋಂಕು ಪತ್ತೆಹಚ್ಚಲು ಈ ಪರೀಕ್ಷೆ ನಡೆಸುವುದಿಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ರಾಷ್ಟ್ರಪತಿ ಭವನಕ್ಕೂ ಕೊರೋನಾ ಭಯ!

75% ಸಾವು 60 ವರ್ಷ ಮೇಲ್ಪಟ್ಟವರದು

ದೇಶದಲ್ಲಿ ಕೊರೋನಾ ಸೋಂಕಿತರ ಸಾವಿನ ಪ್ರಮಾಣ ಶೇ.3.3ರಷ್ಟಿದೆ. 45 ವರ್ಷದೊಳಗಿನವರಲ್ಲಿ ಸಾವಿನ ಪ್ರಮಾಣ ಶೇ.14.4ರಷ್ಟು, 45-60 ವಯೋಮಾನದವರಲ್ಲಿ ಸಾವಿನ ಪ್ರಮಾಣ ಶೇ.10.3ರಷ್ಟು, 60ರಿಂದ 75 ವರ್ಷದವರಲ್ಲಿ ಸಾವಿನ ಪ್ರಮಾಣ ಶೇ.33.1 ಹಾಗೂ 75 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಸಾವಿನ ಪ್ರಮಾಣ ಶೇ.42.2ರಷ್ಟಿದೆ. ದೇಶದಲ್ಲಿ ಇಲ್ಲಿಯವರೆಗೆ ಸಂಭವಿಸಿದ ಕೊರೋನಾ ಸಾವಿನ ಪ್ರಕರಣಗಳಲ್ಲಿ ಶೇ.75ರಷ್ಟುಪ್ರಕರಣಗಳು 60 ವರ್ಷಕ್ಕಿಂತ ಮೇಲ್ಪಟ್ಟವರದೇ ಆಗಿದೆ.

click me!