ಕರ್ನಾಟಕದಲ್ಲಿ ಕೊರೋನಾ ಆಗಸ್ಟ್‌ನಲ್ಲಿ ತಾರಕಕ್ಕೆ, ಬಳಿಕ ಇಳಿಮುಖ: ವರದಿ

By Kannadaprabha News  |  First Published Jul 12, 2020, 10:37 AM IST

ಕರ್ನಾಟಕದಲ್ಲಿ ಕೊರೋನಾ ಆಗಸ್ಟ್‌ನಲ್ಲಿ ತಾರಕಕ್ಕೆ: ವರದಿ| ಸೆಪ್ಟೆಂಬರ್‌ನಲ್ಲಿ ಸೋಂಕು ಇಳಿಮುಖ


ನವದೆಹಲಿ: ದೇಶ ಹಾಗೂ ಕರ್ನಾಟಕದಲ್ಲಿ ಕೊರೋನಾ ವೈರಸ್‌ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವಂತೆಯೇ, ಸಕ್ರಿಯ ಪ್ರಕರಣಗಳ ಸಂಖ್ಯೆ ಇನ್ನಷ್ಟುಹೆಚ್ಚಿ ಸೆಪ್ಟೆಂಬರ್‌ ಅಂತ್ಯದ ವೇಳೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರಬಹುದು ಎಂದು ‘ಟೈಮ್ಸ್‌ ನೌ-ಪ್ರೊಟಿವಿಟಿ’ ಜಂಟಿ ಅಧ್ಯಯನ ಸಮೀಕ್ಷೆ ಹೇಳಿದೆ.

ಕಳ್ಳರನ್ನು ಕಂಡರೇ ಪೊಲೀಸರಿಗೆ ಭಯ, ಆರೋಪಿಗಳಿಂದ ಬರುತ್ತಿದೆ ಕೊರೋನಾ!

Tap to resize

Latest Videos

undefined

ಕರ್ನಾಟಕದಲ್ಲಿ ಶುಕ್ರವಾರದ ವೇಳೆಗೆ ಸಕ್ರಿಯ ಸೋಂಕಿತರ ಸಂಖ್ಯೆ 19,035 ಇದ್ದು, ಇದರ ಸಂಖ್ಯೆ ಆಗಸ್ಟ್‌ 4ಕ್ಕೆ 53,546ಕ್ಕೆ ಏರಬಹುದು. ಇದು ಅತ್ಯಂತ ಗರಿಷ್ಠ ಮಟ್ಟ. ಬಳಿಕ ಸೆಪ್ಟೆಂಬರ್‌ 25ಕ್ಕೆ ಸೋಂಕಿನ ಪ್ರಮಾಣ ತಗ್ಗಬಹುದು ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.

ಸರ್ಕಾರದ ವಿರುದ್ಧ ‘ಲೆಕ್ಕ ಕೊಡಿ’ ಅಭಿಯಾನ: ಸಿದ್ದರಾಮಯ್ಯರಿಂದ 100 ಸೆಕೆಂಡಲ್ಲಿ 6 ಪ್ರಶ್ನೆ!

ಇನ್ನು ಕರ್ನಾಟಕದಲ್ಲೇ ಸೋಂಕು ಅಧಿಕ ಪ್ರಮಾಣದಲ್ಲಿರುವ ಬೆಂಗಳೂರನ್ನು ಕೊರೋನಾ ಸದ್ಯಕ್ಕೆ ಬಿಡುವ ಲಕ್ಷಣ ಇಲ್ಲ. ಆಗಸ್ಟ್‌ 10ರ ವೇಳೆಗೆ ಬೆಂಗಳೂರು ಒಂದರಲ್ಲೇ ಅತ್ಯಂತ ಗರಿಷ್ಠ 33,772 ಸಕ್ರಿಯ ಸೋಂಕಿತರು ಇರಬಹುದು. ಸಕ್ರಿಯ ಸೋಂಕಿತರ ಸಂಖ್ಯೆ ಸೆಪ್ಟೆಂಬರ್‌ 25ರ ವೇಳೆಗೆ ನಿಯಂತ್ರಣಕ್ಕೆ ಬರಬಹುದು ಎಂದು ಜಂಟಿ ಅಧ್ಯಯನ ಅಂದಾಜು ಮಾಡಿದೆ.

click me!