ಆಕ್ಸಿಜನ್ ಕೊರತೆಗೆ ಮೋದಿ ಪರಿಹಾರ; ಸರ್ಕಾರಿ ಆಸ್ಪತ್ರೆಗಳಲ್ಲಿ 551 ಉತ್ಪಾದಕ ಘಟಕ ಸ್ಥಾಪನೆ!

By Suvarna News  |  First Published Apr 25, 2021, 2:31 PM IST

ಕೊರೋನಾ ವೈರಸ್ 2ನೇ ಅಲೆ ಬಿರುಗಾಳಿಯಂತೆ ಬೀಸುತ್ತಿದೆ. ಸಿಕ್ಕ ಸಿಕ್ಕವರಿಗೆ ವೈರಸ್‌ ತಗುಲುತ್ತಿದೆ.  ಇದರ ನಡುವೆ ಆಸ್ಪತ್ರೆಗಳು ಎದುರಿಸಿದ ಆಕ್ಸಿಜನ್ ಸಮಸ್ಯೆಗೆ ಕೇಂದ್ರ ಸರ್ಕಾರ  ರೈಲ್ವೈ ಇಲಾಖೆ, ವಾಯುಸೇನೆ ಮೂಲಕ ಆಕ್ಸಿಜನ್ ಪೂರೈಕೆ ಮಾಡುತ್ತಿದೆ. ಇದೀಗ ದೇಶದಲ್ಲಿ ಇನ್ನೆಂದು ಆಕ್ಸಿಜನ್ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಶಾಶ್ವತ ಪರಿಹಾರ ಒದಗಿಸಿದ್ದಾರೆ.


ನವದೆಹಲಿ(ಏ.25): ಕೊರೋನಾ ವೈರಸ್ ಭೀಕರತೆಗೆ ಭಾರತದ ನಲುಗಿದೆ. ಇದರ ನಡುವೆ ಎದುರಾಗಿರುವ ಹಲವು ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ತಕ್ಷಣದಲ್ಲೇ ಪರಿಹಾರ ಕಂಡುಕೊಂಡಿದೆ. ಇದೀಗ ಕೊರೋನಾ 2ನೇ ಅಲೆಯಲ್ಲಿ ಎದುರಾದ ಆಕ್ಸಿಜನ್ ಸಮಸ್ಯೆಗೆ ಪ್ರಧಾನಿ ನರೇಂದ್ರ ಮೋದಿ ಶಾಶ್ವತ ಪರಿಹಾರ ಒದಗಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಇದೀಗ 551 ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲು ನಿರ್ದೇಶಿಸಲಾಗಿದೆ.

ಸಿಂಗಾಪುರದಿದ ಆಕ್ಸಿಜನ್ ಟ್ಯಾಂಕ್ ಏರ್‌ಲಿಫ್ಟ್ ಮಾಡಿದ IAF ಏರ್‌ಕ್ರಾಫ್ಟ್!.

Latest Videos

undefined

ದೇಶದ ಪ್ರಮುಖ ನಗರ, ಜಿಲ್ಲಾ ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 551 ಆಕ್ಸಿಜನ್ ಘಟಕ ನಿರ್ಮಿಸಲು ನರೇಂದ್ರ ಮೋದಿ ಸೂಚಿಸಿದ್ದಾರೆ. ಇದಕ್ಕಾಗಿ ಪಿಎಂ ಕೇರ್ಸ್ ಫಂಡ್‌ನಿಂದ ಹಣಕಾಸಿನ ನೆರವು ಒದಿಸಲಾಗುತ್ತಿದೆ. ಈ ಮೂಲಕ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಾಗಬಾರದು ಎಂದು ಮೋದಿ ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯೊಳಗೆ ನಿರ್ಮಿಸಲು ಉದ್ದೇಶಿಸಿರುವ 551 ಆಕ್ಸಿಜನ್ ಪ್ಲಾಂಟ್ ಅತೀ ಶೀಘ್ರದಲ್ಲೇ ಆಕ್ಸಿಜನ್ ಘಟಕ ಕಾರ್ಯರಂಭಿಸಬೇಕು ಎಂದಿದ್ದಾರೆ. ಇದಕ್ಕಾಗಿ ಎಲ್ಲಾ ನೆರವು ನೀಡುವುದಾಗಿ ಮೋದಿ ಹೇಳಿದ್ದಾರೆ. 

ಕೊರೋನಾ 2ನೇ ಅಲೆ: ಕಳೆದ 24 ಗಂಟೆಯಲ್ಲಿ 150 ಟನ್ ಆಕ್ಸಿಜನ್ ಪೂರೈಕೆ!

ಪ್ರತಿ ಜಿಲ್ಲಾ ಆಸ್ಪತ್ರೆ ಕೇಂದ್ರಗಳಲ್ಲಿ ಈ ರೀತಿಯ ಆಕ್ಸಿಜನ್ ಉತ್ಪಾದನಾ ಘಟಕ ಕಾರ್ಯನಿರ್ವಹಿಸಿದರೆ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಾಗಲ್ಲ. ಜಿಲ್ಲಾ ಕೇಂದ್ರದಲ್ಲಿನ ಆಕ್ಸಿಜನ್ ಘಟಕ ಸಂಪೂರ್ಣ ಜಿಲ್ಲಿಗೆ ಆಕ್ಸಿಜನ್ ಒದಗಿಸುವ ಸಾಮರ್ಥ್ಯ ಹೊಂದಿರುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿ ಎಲ್ಲಾ ರೀತಿಯ ಹಾಗೂ ಅತ್ಯುತ್ತಮ ಚಿಕಿತ್ಸೆ ಸಿಗುವಂತಾಗಬೇಕು ಎಂದು ಮೋದಿ ಹೇಳಿದ್ದಾರೆ

click me!