ಕೊರೋನಾ ಮೊದಲು ವಕ್ಕರಿಸಿದಾಗ ಎಚ್ಚರವಹಿಸಿದ್ದ ಭಾರತ, ಈ ಬಾರಿ ಕೊಂಚ ನಿರ್ಲಕ್ಷ್ಯ ವಹಿಸಿದ ಊದಾಹರಣೆಗಳೇ ಹೆಚ್ಚು. ಹೀಗಾಗಿ ಇದೀಗ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಏ.13): ಕೊರೋನಾ ವೈರಸ್ ಮೊದಲ ಅಲೆಯನ್ನು ಯಶಸ್ವಿಯಾಗಿ ಎದುರಿಸಿದ ಭಾರತ ಇದೀಗ 2ನೇ ಅಲೆಗೆ ನಲುಗಿ ಹೋಗಿದೆ. ಈಗಷ್ಟೇ ಆರಂಭವಾಗಿರುವ 2ನೇ ಅಲೆಗೆ ಪ್ರತಿ ದಿನ 1.5 ಲಕ್ಷ ಹೊಸ ಪ್ರಕರಣಗಳು ವರದಿಯಾಗುತ್ತಿದೆ. ಇನ್ನು ಸಾವಿನ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಗಣನೀಯ ಏರಿಕೆಯಾಗುತ್ತಿದೆ. ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಹತ್ವದ ಮಾಹಿತಿ ಬಹಿರಂಗ ಪಡಿಸಿದೆ.
ಮಹಾರಾಷ್ಟ್ರದಲ್ಲಿ ಸಂಪೂರ್ಣ ಲಾಕ್‌ಡೌನ್; ಸರ್ಕಾರದಿಂದ ಅಧೀಕೃತ ಘೋಷಣೆ ಸಾಧ್ಯತೆ!.
undefined
ದೇಶದಲ್ಲಿ ಕೊರೋನಾ ವೈರಸ್‌ನಿಂದ ಶೇಕಡಾ 98.51 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಗುಣಮುಖದಲ್ಲಿ ಭಾರತ ಪ್ರಗತಿ ಸಾಧಿಸುತ್ತಿದೆ. ಇದೊಂದೆ ಭಾರತಕ್ಕೆ ಆಶಾದಾಯಕವಾಗಿದ್ದರೆ, ಇನ್ನುಳಿದ ಎಲ್ಲಾ ವರದಿಗಳು ಆತಂಕ ತರುವಂತಿದೆ. ಭಾರತದಲ್ಲಿ ಶೇ.9.24ರಷ್ಟು ಸಕ್ರೀಯ ಕೊರೋನಾ ಪ್ರಕರಣಗಳು ಇವೆ ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ಕೊರೋನಾ ಆತಂಕ; ಎಲ್ಲಾ ರಾಜ್ಯಪಾಲರ ಜೊತೆ ಪ್ರಧಾನಿ ಮೋದಿ ಮಹತ್ವದ ಸಭೆ!
ಕಳೆದೊಂದು ವಾರದಿಂದ ದೇಶದಲ್ಲಿ ಪ್ರತಿ ದಿನ ಸರಾಸರಿ 1.5 ಲಕ್ಷ ಪ್ರಕರಣ ದಾಖಲಾಗುತ್ತಿದೆ. ಇನ್ನು ಸಾವಿನ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳವಾಗಿದೆ. ಮೊದಲ ಕೊರೋನಾ ಅಲೆಯಲ್ಲಿ ಒಂದು ದಿನ ಅತೀ ಹೆಚ್ಚು ದಾಖಲಾದ ಸಾವು 1,114 ಆಗಿತ್ತು. ಆದರೆ 2ನೇ ಅಲೆಯ ಆರಂಭದಲ್ಲೇ ಇದೀಗ ಸಾವಿನ ಸಂಖ್ಯೆ ಒಂದು ದಿನಕ್ಕೆ 879 ತಲುಪಿದೆ.
ಕೊರೋನಾ ಸೋಂಕಿತರಲ್ಲಿ ಶೇಕಡಾ 1.25ರಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವು ಸಾವಿನ ಸಂಖ್ಯೆ ವರದಿ ಎಚ್ಚರಿಕೆಯ ಕರೆಗಂಟೆಯಾಗಿದೆ. ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಚತ್ತೀಸ್‌ಘಡ, ದೆಹಲಿ ಕೇರಳ, ತಮಿಳುನಾಡು ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಕೊರೋನಾ ಅಟ್ಟಹಾಸ ಆರಂಭಿಸಿದೆ.