ಬಿ.ಸಿ ಪಾಟೀಲ್ ಬಳಿಕ ಮತ್ತೊರ್ವ MLAಗೆ ಮನೆಯಲ್ಲೇ ಲಸಿಕೆ; ಕೋವಿಡ್ ನಿಯಮ ಉಲ್ಲಂಘನೆ!

Published : Apr 13, 2021, 03:43 PM IST
ಬಿ.ಸಿ ಪಾಟೀಲ್ ಬಳಿಕ ಮತ್ತೊರ್ವ MLAಗೆ ಮನೆಯಲ್ಲೇ ಲಸಿಕೆ; ಕೋವಿಡ್ ನಿಯಮ ಉಲ್ಲಂಘನೆ!

ಸಾರಾಂಶ

ಕೊರೋನಾ 2ನೇ ಅಲೆಗೆ ದೇಶವೇ ಬೆಚ್ಚಿ ಬಿದ್ದಿದೆ. ಬೆಡ್ ಸಿಗುತ್ತಿಲ್ಲ, ವೈದ್ಯರಿಗೆ ಸಮಯ ಸಾಲುತ್ತಿಲ್ಲ, ಆಸ್ಪತ್ರೆ ಸಿಬ್ಬಂದಿಗಳಿಗೆ ರಜೆಗಳೇ ಇಲ್ಲದೆ ಸೇವೆ ನೀಡುತ್ತಿದ್ದಾರೆ. ಇದರ ನಡುವೆ ಇದೀಗ ಬಿಜೆಪಿ MLA ಮನೆಯಲ್ಲಿ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಮೂಲಕ ವಿವಾದ ಮಾತ್ರವಲ್ಲ ನಿಯಮ ಕೂಡ ಉಲ್ಲಂಘಿಸಿದ್ದಾರೆ.

ಪಾಟ್ನಾ(ಏ.13): ಕರ್ನಾಟಕ ಸಚಿವ ಬಿಸಿ ಪಾಟೀಲ್ ಮನೆಯಲ್ಲಿ ಲಸಿಕೆ ಪಡೆದು ಭಾರಿ ವಿವಾದ ಸಷ್ಟಿಸಿದ್ದರು. ಇಷ್ಟೇ ಅಲ್ಲ ಇದಕ್ಕೆ ದಂಡಕೂಡ ತೆರಬೇಕಾಯಿತು. ಈ ಘಟನೆ ಮಾಸುವ ಮುನ್ನವೇ ಇದೀಗ ಬಿಹಾರಾದ ಬಿಜೆಪಿ ಎಂಎಲ್ಎ ಅಶೋಕ್ ಸಿಂಗ್ ಮನೆಯಲ್ಲೇ ಲಸಿಕೆ ಪಡೆದುಕೊಂಡಿದ್ದಾರೆ. 

ಸಚಿವ ಬಿ.ಸಿ. ಪಾಟೀಲ್‌ ಮನೆಗೆ ಹೋಗಿ ಲಸಿಕೆ, ತಾಲೂಕು ಅಧಿಕಾರಿ ಸಸ್ಪೆಂಡ್‌

ಕೊರೋನಾ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಲು ಅಶೋಕ್ ಸಿಂಗ್ ನಿರಾಕರಿಸಿದ್ದಾರೆ. ವೈದ್ಯಾಧಿಕಾರಿಗಳಿಗೆ ಫೋನ್ ಕರೆ ಮಾಡಿ ತಮ್ಮ ಮನೆಗೆ ಕರೆಯಿಸಿಕೊಂಡಿದ್ದಾರೆ. ನರ್ಸ್ ಅಶೋಕ್ ಸಿಂಗ್‌ಗೆ ಲಸಿಕೆ ನೀಡುತ್ತಿರುವ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದೆ. ಇದು ಅಶೋಕ್ ಸಿಂಗ್‌ಗೆ ಭಾರಿ ಹಿನ್ನಡೆ ತಂದಿದೆ.

ಕೊರೋನಾ 2ನೇ ಅಲೆಯಿಂದ ಶೇ.77 ರಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳಲು ಸಿದ್ಧ; ಸಮೀಕ್ಷೆ ಬಹಿರಂಗ!

ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಾರ,   ಲಸಿಕೆಯನ್ನು ಲಸಿಕಾ ಕೇಂದ್ರ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಬೇಕು. ಅದರಲ್ಲೂ ಜನನಾಯಕರು, ಸಚಿವರಿಗೆ ನಿಯಮ ಮತ್ತಷ್ಟು ಕಟ್ಟು ನಿಟ್ಟಾಗಿದೆ. ಮನೆಗೆ ಕರೆಸಿಕೊಳ್ಳುವ ಮೂಲಕ ಆಸ್ಪತ್ರೆ ಸಿಬ್ಬಂಧಿ, ವೈದ್ಯರ ಸಮಯ ವ್ಯರ್ಥ ಮಾಡಬಾರದು ಅನ್ನೋದನ್ನು ಸ್ಪಷ್ಟವಾಗಿ ಸೂಚಿಸಲಾಗಿದೆ.  ಆದರೆ ಈ ನಿಯಮವನ್ನು ಗಾಳಿಗೆ ತೂರಿದ ಅಶೋಕ್ ಸಿಂಗ್ ಮನೆಯಲ್ಲೇ ಲಸಿಕೆ ಪಡೆದಿದ್ದಾರೆ.

ಕರ್ನಾಟಕ ಸೃಷಿ ಸಚಿವ ಬಿ.ಸಿ ಪಾಟೀಲ್ ಲಸಿಕಾ ಕೇಂದ್ರಕ್ಕೆ ತೆರಳದೇ ಮನೆಯಲ್ಲೇ ಲಸಿಕೆ ಹಾಕಿಸಿಕೊಂಡಿದ್ದರು. ಬಳಿಕ ಟ್ವಿಟರ್ ಮೂಲಕ ಸಂಚಸ ಹಂಚಿಕೊಂಡಿದ್ದರು. ಈ ಫೋಟೋ ಭಾರಿ ವಿವಾದವನ್ನೇ ಸೃಷ್ಟಿಸಿತ್ತು. ಇದೀಗ ಮತ್ತೊರ್ವ ಬಿಜೆಪಿ ನಾಯಕ ಇದೇ ದಾರಿ ತುಳಿದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ