ಸಿಂಗಾಪುರದಿದ ಆಕ್ಸಿಜನ್ ಟ್ಯಾಂಕ್ ಏರ್‌ಲಿಫ್ಟ್ ಮಾಡಿದ IAF ಏರ್‌ಕ್ರಾಫ್ಟ್!

Published : Apr 24, 2021, 02:35 PM ISTUpdated : Apr 24, 2021, 08:36 PM IST
ಸಿಂಗಾಪುರದಿದ ಆಕ್ಸಿಜನ್ ಟ್ಯಾಂಕ್ ಏರ್‌ಲಿಫ್ಟ್ ಮಾಡಿದ IAF ಏರ್‌ಕ್ರಾಫ್ಟ್!

ಸಾರಾಂಶ

ಕೊರೋನಾ ಸೋಂಕಿತರ ಚಿಕಿತ್ಸೆಗೆ ದೇಶದ ಹಲವು ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ಹೀಗಾಗಿ ಆಕ್ಸಿಜನ್ ಪೂರೈಕೆ ಮಾಡಲು ಕೇಂದ್ರ ಸರ್ಕಾರ ಇದೀಗ ಸಿಂಗಾಪುರದಿಂದ ಆಮ್ಲಜನ ಟ್ಯಾಂಕ್‌ಗಳನ್ನು ಏರ್‌ಲಿಫ್ಟ್ ಮಾಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಚಾಂಗಿ ವಿಮಾನ ನಿಲ್ದಾಣ(ಏ.24):  ಕೊರೋನಾ ವೈರಸ್ 2ನೇ ಅಲೆಗೆ ದೇಸ ತತ್ತರಿಸಿದೆ. ಭಾರತದಲ್ಲಿ ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ಕೊರತೆ, ಐಸಿಯು ಬೆಡ್, ವೆಂಟಿಲೇಟರ್ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದೆ. ಆಮ್ಲಜನಕ ಕೊರತೆಯಿಂದ ಈಗಾಗಲೇ ಹಲವು ಸೋಂಕಿತರು ಸಾವನ್ನಪ್ಪಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾಗಿರುವ ಕೇಂದ್ರ ಸರ್ಕಾರ ಇದೀಗ IAF ಏರ್‌ಕ್ರಾಫ್ಟ್ ಮೂಲಕ ಸಿಂಗಾಪುರದಿಂದ ಆಕ್ಸಿಜನ್ ಏರ್‌ಲಿಫ್ಟ್ ಮಾಡಿದೆ.

ಸಿಂಗಾಪುರದಿಂದ ನಾಲ್ಕು ಕ್ರಯೋಜೆನಿಕ್ ಆಕ್ಸಿಜನ್ ಟ್ಯಾಂಕ್‌ಗಳನ್ನು ಭಾರತೀಯ ವಾಯುಸೇನೆ ಏರ್‌ಕ್ರಾಫ್ಟ್ ಮೂಲಕ ಏರ್‌ಲಿಫ್ಟ್ ಮಾಡಲಾಗಿದೆ. ಸಿಂಗಾಪುರದಿಂದ ಆಕ್ಸಿಜನ್ ಹೊತ್ತು ಬಂದ IAF C-17  ಏರ್‌ಕ್ರಾಫ್ಟ್  ಪಶ್ಚಿಮ ಬಂಗಾಳದ ಪಂಗರ ವಾಯುನೆಲೆಗೆ ಬಂದಿಳಿದಿದೆ. 

 

ಆಕ್ಸಿಜನ್ ತುಂಬಿಸಲು ಟ್ಯಾಂಕರ್‌ಗಳನ್ನು ಏರ್‌ಲಿಫ್ಟ್ ಮಾಡಿಸಿದ IAF

ಭಾರತದಲ್ಲಿ ಆಕ್ಸಿಜನ್ ಕೊರತೆ ನೀಗಿಸಲು ಕೇಂದ್ರ ಗೃಹ ಇಲಾಖೆ, ಇಂಡಿಯನ್ ಏರ್‌ಫೋರ್ಸ್ ಸೇವೆ ಪಡೆದುಕೊಂಡಿದೆ. ಇಂದು(ಏ.24) ಬೆಳಗ್ಗೆ IAF ಏರ್‌ಕ್ರಾಫ್ಟ್ ವಿಮಾನ ಸಿಂಗಾಪುರದಿಂದ ಆಕ್ಸಿಜನ್ ಟ್ಯಾಂಕ್ ಏರ್‌ಲಿಫ್ಟ್ ಮಾಡಿತ್ತು.. ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದಿಂದ ಆಮ್ಲಜನಕ ಟ್ಯಾಂಕ್‌ಗಳನ್ನು ಏರ್‌ಲಿಫ್ಟ್ ಮಾಡುತ್ತಿರುವ ದೃಶ್ಯಗಳನ್ನು ಗೃಹ ಇಲಾಖೆ ಅಧೀಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿತ್ತು.

 

ವಿದೇಶಗಳಿಂದ ಆಕ್ಸಿಜನ್ ಟ್ಯಾಂಕ್, ಆಕ್ಸಿಜನ್ ಉತ್ಪಾಜಕ ಘಟಕ ಏರ್‌ಲಿಫ್ಟ್ ಮಾಡುವ ಜವಾಬ್ದಾರಿಯನ್ನು ಭಾರತೀಯ ರಕ್ಷಣಾ ಇಲಾಖೆ ವಹಿಸಿಕೊಂಡಿದೆ. ಇದರ ಅಂಗವಾಗಿ ಇದೀಗ ಸಿಂಗಾಪುರದಿಂದ ಆಕ್ಸಿಜನ್ ಟ್ಯಾಂಕ್ ಹೊತ್ತ ಏರ್‌ಕ್ರಾಫ್ಟ್ ಇದೀಗ ಭಾರತದತ್ತ ಪ್ರಯಾಣ ಬೆಳೆಸಿದೆ. 

ಜರ್ಮನಿಯಿಂದ 23 ಆಕ್ಸಿಜಿನ್ ಉತ್ಪಾದಕ ಘಟಕ ಏರ್‌ಲಿಫ್ಟ್‌ಗೆ ಮುಂದಾದ ಭಾರತ!

ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿರುವ ಕಾರಣ ಚಿಕಿತ್ಸೆಗೆ ಪ್ರತಿ ಗಂಟೆಗೆ ಸುಮಾರು 2,400 ಲೀಟರ್ ಆಕ್ಸಿಜನ್ ಅವಶ್ಯಕತೆ ಇದೆ. ಆಕ್ಸಿಜನ್ ಬೇಡಿಕೆ ಹೆಚ್ಚಾಗಿರುವ ಕಾರಣ ಇದೀಗ ಕೇಂದ್ರ ಸರ್ಕಾರ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ.

ಶೀಘ್ರದಲ್ಲೇ ಜರ್ಮನಿಯಿಂದ 23 ಆಕ್ಸಿಜನ್ ಉತ್ಪಾದಕ ಘಟಕಗಳನ್ನು ಏರ್‌ಕ್ರಾಫ್ಟ್ ಏರ್‌ಲಿಫ್ಟ್ ಮಾಡಲಿದೆ. ಇದು ಪ್ರತಿ ಘಂಟೆಗೆ 24,000 ಲೀಟರ್ ಆಕ್ಸಿಜನ್ ಉತ್ಪಾದಿಸುವ ಸಮಾರ್ಥ್ಯ ಹೊಂದಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!
ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಕೋಕಾ ಕೋಲಾ ಕಂಪನಿ ಚಾರ್ಟೆಡ್ ಅಕೌಂಟೆಂಟ್ ಹಠಾತ್ ಸಾವು