ಬರ್ತ್‌ಡೇ ಸೆಲೆಬ್ರೇಟ್ ಮಾಡಲ್ಲ ಎಂದು ಮನೆಯಲ್ಲೆ ಉಳಿದ ಮಹಿಳೆಗೆ ಪೊಲೀಸರಿಂದ ಪ್ರೀತಿಯ ಕೇಕ್

Published : Apr 24, 2021, 02:10 PM ISTUpdated : Apr 24, 2021, 05:07 PM IST
ಬರ್ತ್‌ಡೇ ಸೆಲೆಬ್ರೇಟ್ ಮಾಡಲ್ಲ ಎಂದು ಮನೆಯಲ್ಲೆ ಉಳಿದ ಮಹಿಳೆಗೆ ಪೊಲೀಸರಿಂದ ಪ್ರೀತಿಯ ಕೇಕ್

ಸಾರಾಂಶ

ಬರ್ತ್‌ಡೇ ದಿನ ಮನೆಯಲ್ಲೇ ಉಳಿದ ಮಹಿಳೆ | ಕೊರೋನಾ ಸಂಕಟದ ಮಧ್ಯೆ ಪೊಲೀಸರು ಕೊಟ್ರು ಸ್ವೀಟ್ ಸರ್ಪೈಸ್

ಮುಂಬೈ(ಏ.24): ಬರೀ ಕೊರೋನಾ ಸಾವು, ಸೋಂಕಿತರ ಸಂಖ್ಯೆ ಹೆಚ್ಚಳ, ಆಕ್ಸಿಜನ್ ಇಲ್ಲದೆ ನರಳಾಟ ಇದನ್ನೇ ನೋಡಿ ನೋಡಿ ಮನಸು ಕೆಟ್ಟಿದೆಯಾ..? ಹಾಗಾದ್ರೆ ಇಲ್ಲಿ ನೋಡಿ. ಕೊರೋನಾ ಸಂಕಟದ ಮಧ್ಯೆ ನಡೆದ ಸಣ್ಣ, ಸುಂದರ ಘಟನೆಯೊಂದು ಎಲ್ಲೆಡೆ ವೈರಲ್ ಆಗಿದೆ.

ಮುಂಬೈ ಪೊಲೀಸರ ಜನಸ್ನೇಹಿ ನಡವಳಿಕೆ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನಸು ಗೆದ್ದಿದೆ. ಟ್ವಿಟರ್ ಬಳಕೆದಾರರಿಂದ ಶೇರ್ ಮಾಡಲಾದ ಪೋಸ್ಟ್‌ನಲ್ಲಿ ತನ್ನ ಜನ್ಮದಿನವನ್ನು ಆಚರಿಸಲು ಹೊರಗೆ ಹೋಗಲು ನಿರಾಕರಿಸಿದ ಮಹಿಳೆಗೆ ಇಲಾಖೆಯು ಕೇಕ್ ಕಳುಹಿಸಿದ ಸುಂದರ ವಿಚಾರವೊಂದು ಆನ್‌ಲಯನ್‌ನಲ್ಲಿ ಓಡಾಡುತ್ತಿದೆ.

ಸುಪ್ರೀಂಕೋರ್ಟ್ ನೂತನ ಸಿಜೆಐ ಎನ್​. ವಿ. ರಮಣ ಪ್ರಮಾಣವಚನ ಸ್ವೀಕಾರ!

ಟ್ವಿಟರ್ ಬಳಕೆದಾರರು ತಮ್ಮ ಪೋಸ್ಟ್ನಲ್ಲಿ ಮುಂಬೈ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ. ಘಟನೆಗಳ ವಿವರಿಸುವ ಸ್ಕ್ರೀನ್‌ಶಾಟ್‌ಗಳು ಆನ್‌ಲೈನ್‌ನಲ್ಲಿ ಓಡಾಡುತ್ತಿದೆ. ನನ್ನ ದಿನ ಸುಂದರವಾಗಿಸಿದ್ದಕ್ಕಾಗಿ ಧನ್ಯವಾದಗಳು-ಮುಂಬೈ ಪೋಲಿಸ್ ಎಂದು ಅವರು ಪೋಸ್ಟ್ ಹಂಚಿಕೊಂಡಾಗ ಬರೆದಿದ್ದಾರೆ.

ಇದಕ್ಕೆ ಮುಂಬೈ ಪೊಲೀಸರು ಕೂಡ ಹೃದಯಸ್ಪರ್ಶಿ ಉತ್ತರ ನೀಡಿದ್ದಾರೆ. ನೀವು ಜವಾಬ್ದಾರಿಯುತ ಪ್ರಜೆ. ನಿಮ್ಮ ವಿಶೇಷ ದಿನದಂದು ನೀವು ಮನೆಯಲ್ಲಿಯೇ ಇರುವುದಕ್ಕೆ ನಮ್ಮ ಮೆಚ್ಚುಗೆ ಇದು. ಇಂದು ನಿಮ್ಮ ಸುರಕ್ಷಿತ ಆಚರಣೆಯು ನಾಳೆ ನಗರ ಸಂತೋಷದಿಂದಿರಲು ಸಹಾಯ ಮಾಡುತ್ತದೆ. ನಾವು ನಿಮಗೆ ಮತ್ತೊಮ್ಮೆ ಜನ್ಮದಿನದ ಶುಭಾಶಯಗಳನ್ನು ತಿಳಿಸುತ್ತೇವೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ
ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್