ದೇಶದಲ್ಲೇ ಮೊದಲ ಬಾರಿ ಕೋವಿಡ್ ರೋಗಿ ಏರ್ ಲಿಫ್ಟ್

By Suvarna NewsFirst Published Sep 7, 2020, 4:05 PM IST
Highlights

ದೇಶದಲ್ಲೇ ಮೊದಲ ಬಾರಿ ಕೋವಿಡ್ ರೋಗಿ ಏರ್ ಲಿಫ್ಟ್ ಮಾಡಲಾಗಿದೆ. ಕೋಲ್ಕತ್ತಾದಿಂದ ಚೆನ್ನೈ MGM ಆಸ್ಪತ್ರೆಗೆ  ಏರ್ ಲಿಫ್ಟ್ ಮಾಡಲಾಗಿದೆ. ಮೂರು ತಾಸಿನ ಒಳಗೆ ಕರೆತರಲಾಗಿದೆ. 

ಚೆನ್ನೈ (ಸೆ.07):  ದೇಶದಲ್ಲೇ ಮೊದಲ ಬಾರಿ ಕೋವಿಡ್ ರೋಗಿ ಏರ್ ಲಿಫ್ಟ್ ಮಾಡಲಾಗಿದೆ. ಕೋಲ್ಕತ್ತಾದಿಂದ ಚೆನ್ನೈ MGM ಆಸ್ಪತ್ರೆಗೆ  ಏರ್ ಲಿಫ್ಟ್ ಮಾಡಲಾಗಿದೆ. ಮೂರು ತಾಸಿನ ಒಳಗೆ ಕರೆತರಲಾಗಿದೆ. 

58 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿದ್ದು, ಶ್ವಾಸಕೋಶಕ್ಕೂ ಸೋಂಕು ವ್ಯಾಪಿಸಿ ಪರಿಸ್ಥಿತಿ ಗಂಭೀರವಾಗಿತ್ತು. ಇದರಿಂದ ಕೋಲ್ಕತ್ತಾ ದಿಂದ ಚೆನ್ನೈಗೆ ಶಿಫ್ಟ್ ಮಾಡಲಾಗಿದೆ.

Latest Videos

ಸೋಂಕಿನಲ್ಲಿ ಬ್ರೆಜಿಲ್ ಹಿಂದಿಕ್ಕಿದ ಭಾರತವೀಗ ವಿಶ್ವದಲ್ಲೇ ನಂಬರ್ 2! ..

ಐಕ್ಯಾಟ್ KYATHI ಏರ್ ಆಂಬ್ಯುಲೆನ್ಸ್ ಮೂಲಕ ಕೋವಿಡ್ ರೋಗಿ ಶಿಫ್ಟ್ ಮಾಡಲಾಗಿದ್ದು, ಕೋಲ್ಕತಾದ ಖಾಸಗಿ ಆಸ್ಪತ್ರೆಯಿಂದ ಏರ್ ಪೋರ್ಟ್ ಗೆ ಗ್ರೀನ್ ಕಾರಿಡಾರ್ ಮೂಲಕ ಕರೆತರಲು 30 ನಿಮಿಷ ಸಮಯ ತೆಗೆದುಕೊಳ್ಳಲಾಗಿದೆ.  ಕೋಲ್ಕತ್ತಾ ಏರ್ ಪೋರ್ಟ್ ನಿಂದ ಚೆನ್ನೈ ಏರ್ ಪೋರ್ಟ್ ಗೆ 2 ಗಂಟೆ15 ನಿಮಿಷ ತೆಗೆದುಕೊಳ್ಳಲಾಗಿದೆ. 

ಗುಣಹೊಂದಿದ ಮಹಿಳೆಗೆ ಮತ್ತೆ ಕೊರೋನಾ! ಎಚ್ಚರ! ..

ಚೆನ್ನೈ ಏರ್ ಪೋರ್ಟ್ ನಿಂದಲೂ MGM ಆಸ್ಪತ್ರೆಗೆ ಗ್ರೀನ್ ಕಾರಿಡಾರ್ ಮೂಲಕ ತೆರಳಲು15 ನಿಮಿಷ ತೆಗೆದುಕೊಳ್ಳಲಾಗಿದೆ. ಒಟ್ಟು ಕೇವಲ ಮೂರು ಗಂಟೆಯಲ್ಲಿ ಕೋವಿಡ್ ರೋಗಿಯನ್ನ ಶಿಫ್ಟ್ ಮಾಡಲಾಗಿದೆ.

ಏರ್ ಆಂಬ್ಯುಲೆನ್ಸ್ ನಲ್ಲಿ ರೋಗಿ ಶಿಫ್ಟ್ ಮಾಡಲು ಜರ್ಮನ್ ಐಸೋಲೇಷನ್ ಪಾಡ್ ಬಳಕೆ ಮಾಡಲಾಗಿದ್ದು, ವೆಂಟಿಲೇಟರ್ ವ್ಯವಸ್ಥೆ, ಅತ್ಯಾಧುನಿಕ ತಂತ್ರಜ್ಞಾನದ ವ್ಯವಸ್ಥೆ ಮೂಲಕ ರೋಗಿಯನ್ನ ಶಿಫ್ಟ್ ಮಾಡಲಾಗಿದೆ.

click me!