2ನೇ ಡೋಸ್ ವಿಳಂಬವಾದರೆ ಆತಂಕ ಬೇಡ; ತಜ್ಞರ ವರದಿಯಿಂದ ನಿಟ್ಟುಸಿರು ಬಿಟ್ಟ ಜನ!

By Suvarna News  |  First Published May 12, 2021, 3:45 PM IST
  • ಕೊರೋನಾ ವೈರಸ್ ಲಸಿಕೆ 2ನೇ ಡೋಸ್ ಪಡೆಯಲು ಜನರ ಪರದಾಟ
  • ಲಸಿಕೆ ಸಿಗದ ಕಾರಣ ಜನರಲ್ಲಿ ಆತಂಕದ ವಾತಾರವಣ
  • 2ನೇ ಡೋಸ್ ವಿಳಂಬವಾದರೆ ಯಾವುದೇ ಸಮಸ್ಯೆ ಇಲ್ಲ ಎಂದು ತಜ್ಞರ ವರದಿ 

ನವದೆಹಲಿ(ಮೇ.12): ಕೊರೋನಾ ವೈರಸ್ 2ನೇ ಅಲೆ ಭೀಕರತೆ ದೇಶದಲ್ಲಿ ಎಲ್ಲರಿಗೂ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಆದರೆ ಹಲವು ರಾಜ್ಯಗಳಲ್ಲಿ ಲಸಿಕೆ ಕೊರತೆ ಕಾಡುತ್ತಿದೆ. ಹೀಗಾಗಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾ ಇನ್ನೂ ಆರಂಭಗೊಂಡಿಲ್ಲ. ಇಷ್ಟೇ ಅಲ್ಲ ಮೊದಲ ಡೋಸ್ ಪಡೆದ ಮಂದಿಗೆ 2ನೇ ಡೋಸ್ ಸಿಗುತ್ತಿಲ್ಲ. ಇದರಿಂದ ಜನರು ಆತಂಕಗೊಂಡಿದ್ದಾರೆ. ಆದರೆ 2ನೇ ಡೋಸ್ ವಿಳಂಬವಾಗುತ್ತಿದೆ. ನಿಗದಿತ ಸಮಯಕ್ಕೆ ಸಿಗುತ್ತಿಲ್ಲ ಅನ್ನೋ ಜನರ ಚಿಂತೆಯನ್ನು ತಜ್ಞ ವೈದ್ಯರು ದೂರ ಮಾಡಿದ್ದಾರೆ.

ಸೆಕೆಂಡ್ ಡೋಸ್‌ಗೂ ಇಲ್ಲ ಲಸಿಕೆ : ಎಲ್ಲಾ ಕಡೆ ನೋ ಸ್ಟಾಕ್ ಬೋರ್ಡ್

Tap to resize

Latest Videos

undefined

ಕೋವಾಕ್ಸಿನ್‌ ಅಥವಾ ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದು 4 ರಿಂದ 6 ವಾರಗಳ ಅಂತರದಲ್ಲಿ 2ನೇ ಡೋಸ್ ಪಡೆಯಬೇಕು ಅನ್ನೋದನ್ನು ಆರೋಗ್ಯ ಇಲಾಖೆ ಹೇಳಿದೆ. ಆದರೆ ಸದ್ಯ 2ನೇ ಡೋಸ್ ಹಲವು ರಾಜ್ಯಗಳಲ್ಲಿ ವಿಳಂಬವಾಗುತ್ತಿದೆ. ಇದರಿಂದ ಜನರು ಆತಂಕಗೊಳ್ಳುವ ಅಗತ್ಯವಿಲ್ಲ. 2ನೇ ಡೋಸ್ 8 ರಿಂದ 10 ವಾರ ವಿಳಂಬವಾದರೂ ಯಾವುದೇ ಸಮಸ್ಯೆ ಇಲ್ಲ. ಇದರಿಂದ ಮೊದಲ ಡೋಸ್ ವ್ಯರ್ಥವಾಗಲಿದೆ ಅನ್ನೋ ಭಯ ಬೇಡ ಎಂದು ರಾಷ್ಟ್ರೀಯ ಆರೋಗ್ಯ  ಸಮಿತಿ ವೈದ್ಯ ಡಾ.ಎನ್‌ಕೆ ಆರೋರಾ ಹೇಳಿದ್ದಾರೆ.

ಮೊದಲ ಡೋಸ್ ಹಾಗೂ 2ನೇ ಡೋಸ್ ನಡುವೆ ಅಂತರ ಹೆಚ್ಚಾದರೂ, ಲಸಿಕೆ ಪರಿಣಾಮಕಾರಿಯಾ ಕೆಲಸ ನಿರ್ವಹಿಸಲಿದೆ. ಇದೀಗ ಹಲವರು ಎರಡನೇ ಡೋಸ್ ವಿಳಂಬವಾಗುತ್ತಿದೆ ಅನ್ನೋ ಕಾರಣಕ್ಕೆ ಮೊದಲ ಡೋಸ್ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಮೊದಲ ಡೋಸ್ ಪಡೆದವರು 2ನೇ ಡೋಸ್ ಸಿಗದೆ ಆತಂಕಕ್ಕೆ ಒಳಗಾಗಿದ್ದಾರೆ. ಈ ರೀತಿಯ ಭಯ ಅವಶ್ಯಕತೆ ಇಲ್ಲ ಎಂದು ತಜ್ಞರು ಹೇಳಿದ್ದಾರೆ.

ಲಸಿಕೆ ಕೊರತೆ : ಸೆಕೆಂಡ್ ಡೋಸ್ ಪಡೆಯುವವರಿಗೆ ಆದ್ಯತೆ

ಕೊರೋನಾ ವೈರಸ್‌ನಿಂದ ಸುರಕ್ಷಿತವಾಗಿರಲು 2 ಡೋಸ್ ಲಸಿಕೆ ಅಗತ್ಯವಿದೆ. ಆದರೆ ನಿಗದಿತ ಸಮಯದಲ್ಲಿ ಸಿಕ್ಕಿಲ್ಲ ಎಂದು ಲಸಿಕೆ ಕಾರ್ಯನಿರ್ವಹಿಸುವುದಿಲ್ಲ ಎಂದರ್ಥವಲ್ಲ. ಮೊದಲ ಡೋಸ್ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಕೆಲಸ ಮಾಡಲಿದೆ. ಹೀಗಾಗಿ ತಡವಾಗಿ ಆದರೂ 2ನೇ ಡೋಸ್ ಪಡೆದರೂ ಆರೋಗ್ಯ ಹಾಗೂ ಪ್ರತಿರೋಧಕ ಶಕ್ತಿ ವೃದ್ಧಿಸುವ ಕೆಲಸದಲ್ಲಿ ಯಾವುದೇ ಅಡಚಣೆ ಇರುವುದಿಲ್ಲ ಎಂದು ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ರೋಗನಿರೋಧಕ ತಜ್ಞ ಡಾ. ವಿನೀತಾ ಬಾಲ್ ಹೇಳಿದ್ದಾರೆ.

ಮೊದಲ ಡೋಸ್ ಪಡೆದ ಬಳಿಕ ದೇಹದಲ್ಲಿ ರೋಗನಿರೋಧಕ ಶಕ್ತಿ ಹಾಗೂ ವೈರಸ್ ವಿರುದ್ಧ ಪ್ರತಿರಕ್ಷಣಾ ಪ್ರತಿಕ್ರಿಯೆ ಆರಂಭಿಸಲು 4 ರಿಂದ 5 ತಿಂಗಳು ತೆಗೆದುಕೊಳ್ಳಲಿದೆ. ಹೀಗಾಗಿ ಅಧ್ಯಯನ ವರದಿ ಪ್ರಕಾರ ಕೋವಿಶೀಲ್ಡ್ ಡೋಸ್ ಅಂತರವನ್ನು 4 ವಾರಗಳಿಂದ 12 ವಾರಗಳಿಗೆ ಹೆಚ್ಚಿಸಲಾಗಿದೆ ಎಂದು ವಿನೀತಾ ಬಾಲ್ ಹೇಳಿದ್ದಾರೆ.

click me!