ಕೇಂದ್ರ, ರಾಜ್ಯ ಸರ್ಕಾರಕ್ಕೆ ಆತಂಕ ಕೊಟ್ಟಿದೆ 533 ಜಿಲ್ಲೆಗಳ ವರದಿ!

By Suvarna NewsFirst Published May 12, 2021, 12:32 PM IST
Highlights

* ಭಾರತದಲ್ಲಿ ಕೊರೋನಾ ಆರ್ಭಟ

* ದೇಶದ 533 ಜಿಲ್ಲೆಗಳಲ್ಲಿ ಶೇ.10 ರಷ್ಟು ಪಾಸಿಟಿವ್ ರೇಟ್

* ಕೇಂದ್ರ, ರಾಜ್ಯ ಸರ್ಕಾರಕ್ಕೆ ಆತಂಕ ಕೊಟ್ಟಿದೆ 533 ಜಿಲ್ಲೆಗಳ ವರದಿ!

ಡೆಲ್ಲಿ ಮಂಜು, ಇಂಡಿಯಾ ರೌಂಡ್ಸ್

ನವದೆಹಲಿ (12) : ಕೊರೊನಾ ಮಹಾಸ್ಫೋಟ ಸಂಭವಿಸಿ ಇಡೀ ಇಂಡಿಯಾದಲ್ಲಿ ಆರ್ಭಟಿಸುತ್ತಿದೆ. ಇದರ ಪ್ರಮಾಣ ದೇಶದ 533 ಜಿಲ್ಲೆಗಳಲ್ಲಿ ಶೇ.10 ರಷ್ಟು ಪಾಸಿಟಿವ್ ರೇಟ್ ಇದ್ದು  ಕೇಂದ್ರ ಹಾಗು ರಾಜ್ಯ ಸರ್ಕಾರಗಳನ್ನು ಆತಂಕ ದತ್ತ ದೂಡುತ್ತಿದೆ. 

ಇನ್ನು ಆರೋಗ್ಯ ಮೂಲಸೌಕರ್ಯಗಳು ಸರಿಯಾಗಿ ಇಲ್ಲದ ಗ್ರಾಮೀಣ ಪ್ರದೇಶಗಳಿಗೆ ಇದೀಗ ವಿಸ್ತರಿಸಿಕೊಳ್ಳುತ್ತಿರುವ ಕೊರೊನಾ 2 ನೇ ಅಲೆ, ಮುಂದೆ ಎಂತಹ ಸ್ಥಿತಿ ತಂದೊಡ್ಡುತ್ತದೆಯೋ ಎಂಬ ದಿಗಿಲು ದಿನೇ ದಿನೇ ಜಾಸ್ತಿಯಾಗುತ್ತಿದೆ.

ಒಟ್ಟು 13 ರಾಜ್ಯಗಳಲ್ಲಿ ಒಂದು ಲಕ್ಷಕ್ಕಿಂತ ಅಧಿಕ ಆಕ್ಟೀವ್ ಕೇಸ್ ಗಳಿವೆ. 6 ರಾಜ್ಯಗಳಲ್ಲಿ 50 ಸಾವಿರದಿಂದ ಒಂದು ಲಕ್ಷದ ತನಕ ಆಕ್ಟೀವ್ ಕೇಸ್, 17 ರಾಜ್ಯಗಳಲ್ಲಿ 50 ಸಾವಿರಕ್ಕಿಂತ ಕಡಿಮೆ ಆಕ್ಟೀವ್ ಕೇಸ್ ಗಳಿವೆ.

2ನೇ ಡೋಸ್‌ಗೆ ಹೆಚ್ಚಿನ ಆದ್ಯತೆ ನೀಡಿ: ರಾಜ್ಯಗಳಿಗೆ ಸೂಚನೆ

ನ್ಯಾಷನಲ್ ಪಾಸಿಟಿವ್ ರೇಟ್ ಗಿಂತ ಹೆಚ್ಚು:  ಇನ್ನು ನ್ಯಾಷನಲ್ ಪಾಸಿಟಿವ್ ರೇಟ್ ಶೇ.21ಇದ್ದರೆ, ದೇಶದ 42 ಜಿಲ್ಲೆಗಳಲ್ಲಿ ನ್ಯಾಷನಲ್ ಪಾಸಿಟಿವ್ ರೇಟ್ ಸರಾಸರಿ ಕೇಸುಗಳು ಜಾಸ್ತಿ ಇವೆ.

ಶೇ.25 ಕ್ಕಿಂತ ಹೆಚ್ಚು ಪಾಸಿಟಿವ್ ರೇಟ್ ಇರೋ ರಾಜ್ಯಗಳು 

ಗೋವಾ- ಶೇ. 49.6

ಪುದುಚೇರಿ ಶೇ- 42.8

ಪಶ್ಚಿಮ ಬಂಗಾಳ ಶೇ. 34.4

ಹರಿಯಾಣ ಶೇ 34.3

ಕರ್ನಾಟಕ ಶೇ 32.4

ರಾಜಸ್ತಾನ ಶೇ 30.00

ಚತ್ತೀಸ್ ಘಡ್ ಶೇ 27.5

ಆಂಧ್ರಪ್ರದೇಶ‌ ಶೇ  26.2 

ದೆಹಲಿಯಲ್ಲಿ ಶೇ 25.7 

ಹಳ್ಳಿಗಳ ಬಗ್ಗೆ ಆತಂಕ : ಕೊರೊನಾ ಕಬಂಧಬಾಹುಗಳು ದಿನೇ ದಿನೇ ಹಳ್ಳಗಳತ್ತ  ಚಾಚುತ್ತಿದೆ. ಈ ಹಿನ್ನೆಲೆ ಐಸಿಎಂಆರ್ ರಾಜ್ಯಗಳಿಗೆ ಎಚ್ಚರಿಕೆಯ ಗಂಟೆ ಭಾರಿಸುತ್ತಲೇ ಇದೆ. ಆರ್ ಪಿ ಸಿ ಆರ್ ಟೆಸ್ಟ್ ಅಂತಲೇ ಕಾಯದೆ, ಆಂಟಿಜೆನ್ ಟೆಸ್ಟ್ ಬೂತ್ ಗಳನ್ನು ಪ್ರತಿ ಹಳ್ಳಿಯ ಶಾಲೆ, ಸಮುದಾಯದ ಭವನಗಳಲ್ಲಿ ಶುರು ಮಾಡಿ.  ಆಂಟಿಜೆನ್ ಟೆಸ್ಟ್ ಮಾಡುವ ಮೂಲಕ ಸೋಂಕು ಮುಂದೆ ಹರಡದಂತೆ ತಡೆಯಿರಿ ಎನ್ನುತ್ತಿದೆ ಐಸಿಎಂಆರ್.

ಹೈ ಪಾಸಿಟಿವಿಟಿ ರೇಟ್‌ ಅಂದ್ರೇನು? ಹೇಗೆ ಅಳೆಯಲಾಗುತ್ತದೆ?

ಜಿಲ್ಲೆಯೊಂದರ ಪಾಸಿಟಿವಿಟಿ ದರ ತಿಳಿದುಕೊಳ್ಳಲು, ಆ ಜಿಲ್ಲೆಯಲ್ಲಿ ದಾಖಲಾದ ಪಾಟಿಸಿವ್ ಕೇಸ್‌ಗಳ ಸಂಖ್ಯೆ ತೆಗೆದುಕೊಳ್ಳಿ. ಇದನ್ನು ಆ ಜಿಲ್ಲೆಯಲ್ಲಿ ಅದೇ ಸಮಯಕ್ಕೆ ಟೆಸ್ಟ್‌ ಮಾಡಿದ ಒಟ್ಟು ಸಂಕ್ಯೆಯಿಂದ ಭಾಗಿಸಿ. ಇಲ್ಲಿ ಸಿಗುವ ಉತ್ತರವೇ ಆ ಜಿಲ್ಲೆಯ ಪಾಸಿಟಿವಿಟಿ ದರವಾಗಿರುತ್ತದೆ.

ಹೈ ಪಾಸಿಟಿವಿಟಿ ದರ ಎಂದರೆ ಹೆಚ್ಚು ಟೆಸ್ಟ್‌ ಮಾಡಬೇಕಾದ ಅಗತ್ಯವಿರುತ್ತದೆ. ಕೊರೋನಾ ವೈರಸ್‌ ನಿಯಂತ್ರಿಸುವ ನಿಟ್ಟಿನಲ್ಲಿ ವಿಧಿಸಲಾದ ಕ್ರಮಗಳನ್ನು ಸಡಿಲಗೊಳಿಸದಿರಲು ಇದು ಸೂಚಿಸುತ್ತದೆ. ಪಾಟಿಸಿವಿಟಿ ದರ ಹೆಚ್ಚಾದಂತೆ ಜನರ ಓಡಾಟ ನಿರ್ಬಂಧಿಸುವುದು ಅಗತ್ಯವಾಗುತ್ತದೆ. ಇಲ್ಲವೆಂದಾಧರೆ ಈ ಸೋಂಕಿಗೆ ಕಡಿವಾಣ ಹಾಕುವುದು ಅಸಾಧ್ಯವಾಗುತ್ತದೆ. 
 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

 

click me!