'ಕೇಂದ್ರದ ನೀತಿಯಿಂದ ಲಸಿಕೆ ಕಂಪನಿಗಳಿಗೆ 1 ಲಕ್ಷ ಕೋಟಿ ಲಾಭ'

By Kannadaprabha News  |  First Published Apr 26, 2021, 9:45 AM IST

ಅಸೂಕ್ಷ್ಮತೆ ಮತ್ತು ತಾರತಮ್ಯ ನೀತಿ ಅನುಸರಿಸಿರುವ ಕೇಂದ್ರ ಸರ್ಕಾರ ಲಸಿಕೆ ಉತ್ಪಾದಕ ಕಂಪನಿಗಳು 1.11 ಲಕ್ಷ ಕೋಟಿ ರು. ಲಾಭ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ ಎಂದು ಕಾಂಗ್ರೆಸ್‌  ಆರೋಪ ಮಾಡಿದೆ. 


ನವದೆಹಲಿ (ಏ.26): ನೂತನ ಕೊರೋನಾ ಲಸಿಕೆ ನಿಯಮಾವಳಿಯಲ್ಲಿ ಅಸೂಕ್ಷ್ಮತೆ ಮತ್ತು ತಾರತಮ್ಯ ನೀತಿ ಅನುಸರಿಸಿರುವ ಕೇಂದ್ರ ಸರ್ಕಾರ ಲಸಿಕೆ ಉತ್ಪಾದಕ ಕಂಪನಿಗಳು 1.11 ಲಕ್ಷ ಕೋಟಿ ರು. ಲಾಭ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ ಎಂದು ಕಾಂಗ್ರೆಸ್‌ ದೂರಿದೆ.

Tap to resize

Latest Videos

undefined

ಈ ಬಗ್ಗೆ ಭಾನುವಾರ   ಮಾತನಾಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ ಅವರು, ‘ದೇಶದ ಯುವ ಮತ್ತು ಬಡಜನರಿಗೆ ಉಚಿತ ಲಸಿಕೆ ನೀಡುವ ಜವಾಬ್ದಾರಿಯಿಂದ ಕೇಂದ್ರ ಸರ್ಕಾರ ನುಣುಚಿಕೊಂಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಾಂಕ್ರಾಮಿಕ ರೋಗದ ಹೊಡೆತಕ್ಕೆ ಇಡೀ ದೇಶವೇ ಸಂಕಷ್ಟಕ್ಕೀಡಾದಾಗ ಮೋದಿ ಸರ್ಕಾರ ಏಕೆ ಲಾಭದ ಪ್ರಕ್ರಿಯೆಯಲ್ಲಿ ತೊಡಗಿದೆ. ಇಷ್ಟುಪ್ರಮಾಣದ ಲಾಭ ಮಾಡಿಕೊಳ್ಳಲು ಅವಕಾಶ ನೀಡಿದ್ದೇಕೆ? ಈ ಬಗ್ಗೆ ಮೋದಿ ಸರ್ಕಾರ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ಕೊರೋನಾ ತುರ್ತು ಸ್ಥಿತಿ : ಹೆಚ್ಚಿದ ನೆರವು ...

ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆಯ ಶೇ.50ರಷ್ಟನ್ನು ರಾಜ್ಯ ಸರ್ಕಾರಗಳು ಮತ್ತು ಬಾಕಿ ಶೇ.50ರಷ್ಟನ್ನು ಲಸಿಕೆ ಪಡೆಯುವ ಫಲಾನುಭವಿಗಳು ಭರಿಸಬೇಕಿದೆ. ದೇಶದಲ್ಲಿ 45 ವರ್ಷದೊಳಗಿನವರು 101 ಕೋಟಿ ಜನರಿದ್ದಾರೆ. ಇದರಿಂದಾಗಿ ಕೋವಿಶೀಲ್ಡ್‌ ಲಸಿಕೆ ಉತ್ಪಾದನೆಯ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ಗೆ 35,350 ಕೋಟಿ ರು. ಹಾಗೂ ಕೋವ್ಯಾಕ್ಸಿನ್‌ ಲಸಿಕೆ ಉತ್ಪಾದಿಸುವ ಭಾರತ್‌ ಬಯೋಟೆಕ್‌ ಸಂಸ್ಥೆಗೆ 75,750 ಕೋಟಿ ರು. ಲಾಭವಾಗಲಿದೆ ಎಂದು ಆರೋಪಿಸಿದ್ದಾರೆ.

click me!