2-4 ವಾರದಲ್ಲಿ ಕೊರೋನಾ 3ನೇ ಅಲೆ ಹೊಡೆತ; ಟಾಸ್ಕ್ ಫೋರ್ಸ್ ಎಚ್ಚರಿಕೆ!

By Suvarna NewsFirst Published Jun 17, 2021, 3:55 PM IST
Highlights
  • ಕೊರೋನಾ 2ನೇ ಅಲೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ
  • 3ನೇ ಅಲೆ ವಕ್ಕರಿಸುವ ಎಚ್ಚರಿಕೆ ನೀಡಿದ ಟಾಸ್ಕ್ ಫೋರ್ಸ್
  • 2 ರಿಂದ 4 ವಾರದಲ್ಲಿ ಕೊರೋನಾ 3ನೇ ಅಲೆ ಎಚ್ಚರಿಕೆ

ಮುಂಬೈ(ಜೂ.17):  ಕೊರೋನಾ 2ನೇ ಅಲೆ ನಿಯಂತ್ರಿಸಲು ಭಾರತ ಹರಸಾಹಸ ಪಟ್ಟಿದೆ. 2 ತಿಂಗಳಿಗೂ ಹೆಚ್ಚು ಕಾಲ ಲಾಕ್‌ಡೌನ್, ಕಠಿಣ ನಿರ್ಬಂಧ ಸೇರಿದಂತೆ ಹಲವು ನಿಯಮಗಳು ಈಗಲೂ ಇವೆ. ಆದರೂ 2ನೇ ಅಲೆ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಇದದೀಗ ಇನ್ನು 2 ರಿಂದ 4 ವಾರದಲ್ಲಿ ಕೊರೋನಾ 3ನೇ ಅಲೆ ಅಪ್ಪಳಿಸಲಿದೆ ಎಂದು ಮಹಾರಾಷ್ಟ್ರ ಟಾಸ್ಕ್ ಫೋರ್ಸ್ ತಂಡ ಎಚ್ಚರಿಕೆ ನೀಡಿದೆ.

18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲು ಸಿದ್ಧತೆ

ಮಹಾರಾಷ್ಟ್ರದಲ್ಲಿ ಇನ್ನೊಂದು ತಿಂಗಳಲ್ಲಿ 3ನೇ ಅಲೆ ಅಬ್ಬರ ಶುರುವಾಗಲಿದೆ ಎಂದು ಟಾಸ್ಕ್ ಫೋರ್ಸ್ ತಂಡ ಎಚ್ಚರಿಕೆ ನೀಡಿದೆ. 3ನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಅನ್ನೋದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ 3ನೇ ಅಲೆಯಲ್ಲಿ ಸಕ್ರೀಯ ಕೊರೋನಾ ಪ್ರಕರಣ ಸಂಖ್ಯೆ ದುಪ್ಪಟ್ಟಲಾಗಲಿದೆ ಎಂದು ಮಹಾರಾಷ್ಟ್ರ ಟಾಸ್ಕ್ ಫೋರ್ಸ್ ಎಚ್ಚರಿಕೆ ನೀಡಿದೆ.

ಸಿಎಂ ಉದ್ದವ್ ಠಾಕ್ರೆ ಜೊತೆಗಿನ ಮಹತ್ವದ ಸಭೆಯಲ್ಲಿ ಟಾಸ್ಕ್ ಫೋರ್ಸ್ ತಂಡ ಈ ಎಚ್ಚರಿಕೆ ನೀಡಿದೆ.  3ನೇ ಅಲೆ ಶೇಕಡಾ 10 ರಷ್ಟು ಮಕ್ಕಳು ಹಾಗೂ ಯುವಕರಲ್ಲಿ ಕಾಣಿಸಿಕೊಳ್ಳಲಿದೆ. ಲಂಡನ್‌ನಲ್ಲಿ 2ನೇ ಅಲೆ ಅಂತ್ಯಗೊಂಡ ನಾಲ್ಕು ವಾರಕ್ಕೆ 3ನೇ ಅಲೆ ಕಾಣಿಸಿಕೊಂಡಿದೆ. ಇದೇ ಪರಿಸ್ಥಿತಿ ಮಹಾರಾಷ್ಟ್ರದಲ್ಲೂ ಸಂಭವಿಸುವ ಸಾಧ್ಯತೆ ಹೆಚ್ಚು ಎಂದು ಟಾಸ್ಕ್ ಫೋರ್ಸ್ ತಂಡದ ಸದಸ್ಯ ಡಾ.ಶಶಾಂಕ್ ಜೋಶಿ ಹೇಳಿದ್ದಾರೆ.

ಅಕ್ಟೋಬರ್‌ಗೂ ಮುನ್ನವೇ ರಾಜ್ಯಕ್ಕೆ 3ನೇ ಅಲೆ: ತಜ್ಞರ ವಾರ್ನಿಂಗ್!.

ಮಹಾರಾಷ್ಟ್ರದಲ್ಲಿ 2ನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ಉದ್ಧವ್ ಠಾಕ್ರೆ 5 ಹಂತದ ಅನ್‌ಲಾಖ್ ಘೋಷಿಸಿದ್ದಾರೆ. ಇದರಂತೆ ಮಹಾರಾಷ್ಟದ ಹಲವು ಜಿಲ್ಲೆಗಳು ಹಂತ ಹಂತವಾಗಿ ಅನ್‌ಲಾಕ್ ಆಗಿವೆ. ಇನ್ನು 2 ರಿಂದ 3 ವಾರಗಳಲ್ಲಿ ಬಹುತೇಕ ಜಿಲ್ಲೆಗಳು ಅನ್‌ಲಾಕ್ ಆಗಲಿವೆ.

ಪ್ರಾಣಿಗಳ ಕಾಡುತ್ತಿರುವ ವೈರಸ್; ಕೊರೋನಾಕ್ಕೆ ಮತ್ತೊಂದು ಸಿಂಹ ಬಲಿ

ಅನ್‌ಲಾಕ್ ಹಾಗೂ 3ನೇ ಅಲೆ ಕುರಿತು ಟಾಸ್ಕ್ ಫೋರ್ಸ್ ಎಚ್ಚರಿಕೆ ನೀಡಿದೆ. ಆದಷ್ಟು ಬೇಗ ಲಸಿಕೆ ಎಲ್ಲರಿಗೂ ಸಿಗುವಂತಾಗಬೇಕು. ಜೊತೆಗೆ ಸಾರ್ವಜನಿಕರು ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. ಮೂರನೇ ಅಲೆ ನಿಯಂತ್ರಿಸಲು ಸರ್ಕಾರ ಎಲ್ಲಾ ಕ್ರಮಕೈಗೊಂಡಿದೆ. ಜನರು ಸಹಕರಿಸಬೇಕು ಎಂದು ಉದ್ದವ್ ಠಾಕ್ರೆ ಹೇಳಿದ್ದಾರೆ.

click me!