ಮುಂದಿನ ತಿಂಗಳಿಂದ 3ನೇ ಅಲೆ ಆರಂಭ, ಸೆಪ್ಟೆಂಬರ್‌ನಲ್ಲಿ ಗರಿಷ್ಠ; ಆತಂಕ ಹೆಚ್ಚಿಸಿದ SBI ವರದಿ!

By Suvarna NewsFirst Published Jul 5, 2021, 7:28 PM IST
Highlights
  • ಕೊರೋನಾ 2ನೇ ಅಲೆ ತಗ್ಗಿದ ಬೆನ್ನಲ್ಲೇ 3ನೇ ಅಲೆ ಎಚ್ಚರಿಕೆ
  • ಮುಂದಿನ ತಿಂಗಳಿನಿಂದ 3ನೇ ಕೊರೋನಾ ಅಲೆ ಆರಂಭ
  • ಸೆಪ್ಟೆಂಬರ್ ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ SBI ಸಂಶೋಧನಾ ವರದಿ

ನವದೆಹಲಿ(ಜು.05): ಕೊರೋನಾ 2ನೇ ಅಲೆ ತಗ್ಗಿದ ಕಾರಣ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭಗೊಂಡಿದೆ. 2 ತಿಂಗಳಿಗೂ ಹೆಚ್ಚು ಕಾಲ ಬಂಧಿಯಾಗಿದ್ದ ಜನರ ಕೊಂಚ ಉಸಿರಾಡಲು ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ 3ನೇ ಅಲೆ ಆತಂಕ ಶುರುವಾಗಿದೆ. ಸ್ಟೇಬ್ ಬ್ಯಾಂಕ್ ಆಫ್ ಇಂಡಿಯಾ(SBI) ನಡೆಸಿದ ಸಂಶೋಧನಾ ಅಧ್ಯಯನದಲ್ಲಿ ಮುಂದಿನ ತಿಂಗಳಲ್ಲಿ 3ನೇ ಅಲೆ ಆರಂಭವಾಗಲಿದೆ ಎಂದಿದೆ.

ಲಸಿಕಾ ಸಾಮರ್ಥ್ಯ ಹೆಚ್ಚಿಸಲು ಕೇಂದ್ರದ ಮಹತ್ವದ ಹೆಜ್ಜೆ; ಮತ್ತೆರಡು ವ್ಯಾಕ್ಸಿನ್ ಟೆಸ್ಟ್ ಲ್ಯಾಬ್!.

ಕೊರೋನಾ 3ನೇ ಅಲೆ ಆಗಸ್ಟ್ ತಿಂಗಳಲ್ಲಿ ಆರಂಭಗೊಳ್ಳಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಲಿದೆ. ಜುಲೈ 2 ಹಾಗೂ 3ನೇ ವಾರದಲ್ಲಿ ಭಾರತದ ಹೊಸ ಕೊರೋನಾ ಪ್ರಕರಣ ಸಂಖ್ಯೆ 10,000ಕ್ಕೆ ಇಳಿಯಲಿದೆ. ಆದರೆ ಆಗಸ್ಟ್ ತಿಂಗಳಿನಿಂದ ಕೊರೋನಾ ಮತ್ತೆ ಏರಿಕೆಯಾಗಲಿದೆ. ಇದು 3ನೇ ಅಲೆ ಪ್ರಭಾವ ಎಂದು  SBI ವರದಿ ಹೇಳುತ್ತಿದೆ.

3ನೇ ಕೊರೋನಾ ಅಲೆ 2ನೇ ವೇವ್‌ಗಿಂತ 1.7 ರಷ್ಟು ಹೆಚ್ಚಾಗಲಿದೆ. ಹೀಗಾಗಿ ಇದರ ಪರಿಣಾಮ ಊಹಿಸಬುಹುದು ಎಂದು ವರದಿ ಹೇಳುತ್ತಿದೆ. ಆದರೆ ಮೂರನೇ ಅಲೆಯಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಲಿದೆ. ಇದಕ್ಕೆ ಲಸಿಕೆ ಕೂಡ ನೆರವಾಗಲಿದೆ ಎಂದು ವರದಿ ಹೇಳುತ್ತಿದೆ.

ಎರಡು ಡೋಸ್‌ ಲಸಿಕೆ: ಸಾವಿನಿಂದ 98% ರಕ್ಷಣೆ

ಇಂದು(ಜು.05) ಭಾರತದಲ್ಲಿ 39,796 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದೆ.  ಈ ಮೂಲಕ ಭಾರತದ ಒಟ್ಟು ಕೋವಿಡ್ ಪ್ರಕರಣ ಸಂಖ್ಯೆ 3,05,85,229 ಕ್ಕೆ ಏರಿದೆ. ಇನ್ನು ಕಳೆದ 24 ಗಂಟೆಯಲ್ಲಿ 723  ಸಾವು ಸಂಭವಿಸಿದೆ.  ಈ ಮೂಲಕ ಕೊರೋನಾಗೆ ಬಲಿಯಾದವರ ಸಂಖ್ಯೆ  4,02,728 ಆಗಿದೆ.

click me!