ಶ್ರೀರಾಮನ ಹೊಸ ಮೂರ್ತಿ ಬಾಲರೂಪದಲ್ಲಿಲ್ಲ, ವಿವಾದಿತ ಹೇಳಿಕೆ ನೀಡಿದ ಕಾಂಗ್ರೆಸ್‌ ಹಿರಿಯ ಮುಖಂಡ ದಿಗ್ವಿಜಯ್‌ ಸಿಂಗ್‌!

By Santosh Naik  |  First Published Jan 19, 2024, 6:24 PM IST

ಅಯೋಧ್ಯೆ ವಿಚಾರ ಹಾಗೂ ಶ್ರೀರಾಮ ಚಂದ್ರನ ಬಗ್ಗೆ ಆರಂಭದಿಂದಲೂ ಕುಹಕದ ಹೇಳಿಕೆಯನ್ನೇ ನೀಡುತ್ತಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಶುಕ್ರವಾರ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ.
 


ಭೋಪಾಲ್‌ (ಜ.19): ಅಯೋಧ್ಯೆ, ಶ್ರೀರಾಮಮಂದಿರ ವಿಚಾರವಾಗಿ ಆರಂಭದಿಂದಲೂ ಲೇವಡಿ ಮಾಡಿಕೊಂಡೇ ಮಾತನಾಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಮತ್ತೊಮ್ಮೆ ಅಯೋಧ್ಯೆಯ ಶ್ರೀರಾಮ ಮಂದಿರದ ವಿಚಾರವಾಗಿ ಮಾತನಾಡಿದ್ದಾರೆ. ಅಯೋಧ್ಯೆಯ ನೂತನ ಶ್ರೀರಾಮ ಮಂದಿರಲ್ಲಿ ಗುರುವಾರ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ಮೂರ್ತಿಯ ಕಣ್ಣಿಗೆ ಹಸಿರು, ಅರಿಶಿನ ಬಟ್ಟೆಯನ್ನು ಕಟ್ಟಲಾಗಿದೆ. ಶುಕ್ರವಾರ ಹೊಸ ರಾಮಲಲ್ಲಾ ಮೂರ್ತಿಯ ಚಿತ್ರಗಳು ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಇದರ ಬೆನ್ನಲ್ಲಿಯೇ ದಿಗ್ವಿಜಯ್‌ ಸಿಂಗ್‌ ಹೊಸ ರಾಮಲಲ್ಲಾ ಮೂರ್ತಿಯನ್ನು ಕೆತ್ತಿರುವ ರೀತಿಯ ಬಗ್ಗೆ ತಗಾದೆ ತೆಗೆದಿದ್ದಾರೆ. ಇಂದು ಶ್ರೀರಾಮಮಂದಿರದ ಒಳಗೆ ಪ್ರತಿಷ್ಠಾಪನೆ ಮಾಡಲಾಗಿರುವ ರಾಮಲಲ್ಲಾ ಮೂರ್ತಿಯಲ್ಲಿ ಬಾಲರೂಪದಲ್ಲಿ ಕಾಣುತ್ತಿಲ್ಲ ಎಂದು ಹೇಳಿದ್ದಾರೆ. ರಾಮಲಲ್ಲಾ ಮೂರ್ತಿ ಎಂದರೆ ಬಾಲಕ ರೂಪದಲ್ಲಿ, ತಾಯಿ ಕೌಸಲ್ಯಳ ತೊಡೆಯ ಮೇಲೆ ಕುಳಿತಿರುವಂತೆ ಇದ್ದಿರಬೇಕು ಎಂದು ಹೇಳಿದ್ದಾರೆ.

ರಾಮ ಮಂದಿರದಲ್ಲಿರುವ ರಾಮಲಲ್ಲಾ ವಿಗ್ರಹವು ಮಗುವಿನ ರೂಪದಂತೆ ಕಾಣುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.  ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆಂದರೆ, ವಿವಾದ ಉಂಟಾಗಿ ಒಡೆದು ಹೋಗಿರುವ ರಾಮಲಾಲಾ ಪ್ರತಿಮೆ ಎಲ್ಲಿದೆ? ಇನ್ನೊಂದು ಪ್ರತಿಮೆಯ ಅಗತ್ಯ ಏನಿತ್ತು? ನಮ್ಮ ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ್ ಜಿ ಮಹಾರಾಜ್ ಕೂಡ ಹಳೆಯ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು ಎಂದು ಸಲಹೆ ನೀಡಿದ್ದರು. ರಾಮಜನ್ಮಭೂಮಿ ದೇವಸ್ಥಾನದ ವಿಗ್ರಹವು ಮಗುವಿನ ರೂಪದಲ್ಲಿರಬೇಕು ಮತ್ತು ಮಾತೆಯ ಕೌಶಲ್ಯೆಯ ಮಡಿಲಲ್ಲಿರಬೇಕು, ಆದರೆ ದೇವಾಲಯದಲ್ಲಿ ಇರಿಸಲಾಗಿರುವ ವಿಗ್ರಹವು ಮಗುವಿನ ರೂಪದಲ್ಲಿ ಕಂಡುಬರುವುದಿಲ್ಲ ಎಂದು ಅವರು ಹೇಳಿದ್ದಾರೆ.

Tap to resize

Latest Videos

ಜನವರಿ 22 ರಂದು ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೂ ಮುನ್ನ, ಗುರುವಾರ ಅಯೋಧ್ಯೆಯ ದೇವಾಲಯದ ಗರ್ಭಗುಡಿಯಲ್ಲಿ ಶ್ರೀರಾಮನ ವಿಗ್ರಹವನ್ನು ಇರಿಸಲಾಗಿದೆ. ಅದರ ಚಿತ್ರಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

RamLalla Photo: ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ, ಹೀಗಿದ್ದಾನೆ ನೋಡಿ ಶ್ರೀರಾಮ!

51 ಇಂಚು ಎತ್ತರ ಪ್ರತಿಮೆ:
ಗುರುವಾರ ಗರ್ಭಗುಡಿಯಲ್ಲಿ ನಡೆದ ಪ್ರತಿಷ್ಠಾಪನಾ ಸಮಾರಂಭದಲ್ಲಿ ಬಟ್ಟೆಯಿಂದ ಮುಚ್ಚಿದ ವಿಗ್ರಹದ ಮೊದಲ ಚಿತ್ರ ಬಹಿರಂಗವಾಯಿತು. ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಅವರು 'ರಾಮ್ ಲಲ್ಲಾ' ವಿಗ್ರಹವನ್ನು ಕೆತ್ತಿದ್ದಾರೆ. ಪ್ರತಿಮೆಯು 51 ಇಂಚು ಎತ್ತರ ಮತ್ತು 1.5 ಟನ್ ತೂಕವಿದೆ. ರಾಮನನ್ನು 5 ವರ್ಷದ ಮಗುವಿನ ರೂಪದಲ್ಲಿ ಚಿತ್ರಿಸಲಾಗಿದ್ದು, ಕಮಲದ ಹೂವಿನ ಮೇಲೆ ನಿಂತಂತೆ ಕೆತ್ತಲಾಗಿದೆ. ಈ ನಡುವೆ ಜನವರಿ 22 ರಂದು ನಡೆಯಲಿರುವ ರಾಮಮಂದಿರದ 'ಪ್ರಾಣ ಪ್ರತಿಷ್ಠಾ' ಸಮಾರಂಭದ ಸಿದ್ಧತೆಗಾಗಿ ಗುರುವಾರ ಅಯೋಧ್ಯೆ ನಗರವನ್ನು ಹೂವುಗಳಿಂದ ಅಲಂಕಾರ ಮಾಡಲಾಗುತ್ತಿದೆ.

11 ದಿನ ಕೇವಲ ಎಳನೀರು ಸೇವಿಸಿ ಮೋದಿ ಉಪವಾಸ: ನೆಲದ ಮೇಲೆ ನಿದ್ದೆ ಸೇರಿ ಯಮ ನಿಯಮ ವ್ರತ ಪಾಲನೆ

click me!