ಕರ್ನಾಟಕದ ಗದಗ ಜಿಲ್ಲೆಯ ಗಾಂಧಿ ವೇಷಧಾರಿ ಮುತ್ತಣ್ಣ ಕರ್ಕಿಕಟ್ಟಿ ಅವರು ಗದಗದಿಂದ ಅಯೋಧ್ಯೆವರೆಗೆ 1,800 ಪಾದಯಾತ್ರೆ ಮೂಲಕ ನಡೆದುಕೊಂಡು ಹೋಗಿದ್ದಾರೆ.
ಗದಗ (ಜ.19): ಆಯೋಧ್ಯೆಯ ರಾಮಮಂದಿದಲ್ಲಿ ಜ.22ರಂದು ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಇಡೀ ದೇಶವೇ ಸಂಭ್ರಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು, ಸಾಧು, ಸಂತರು ರಾಮಮಂದಿರ ಉದ್ಘಾಟನೆಗೆ ತೆರಳುತ್ತಿದ್ದಾರೆ. ಇನ್ನು ಗದಗ ಜಿಲ್ಲೆಯಿಂದ 1,800 ಕಿ.ಮೀ ದೂರದಲ್ಲಿರುವ ಆಯೋಧ್ಯೆ ರಾಮಮಂದಿರಕ್ಕೆ ರೋಣ ತಾಲೂಕಿನ ಗಾಂಧಿ ವೇಷಧಾರಿ ಮುತ್ತಣ್ಣ ತಿರ್ಲಾಪುರ ಪಾದಯಾತ್ರೆ ಹೊರಟಿದ್ದಾರೆ.
ಹೌದು, ಅಯೋಧ್ಯಾ ಶ್ರೀರಾಮ್ ಮಂದಿರ ಉದ್ಘಾಟನೆಯ ನಿಮಿತ್ತ ಪಾದಯಾತ್ರೆ ಮೂಲಕ ಜಾಗೃತಿ ಅಭಿಯಾನವನ್ನು ಹೊರಟಿರುವ ಗದಗ ಜಿಲ್ಲೆ ರೋಣ ತಾಲೂಕಿನ ಕರ್ಕಿಕಟ್ಟಿ ಗ್ರಾಮದ ಮಹಾತ್ಮಾ ಗಾಂಧಿ ವೇಷಧಾರಿ ಮುತ್ತಣ್ಣ ತಿರ್ಲಾಪುರ ಈಗಾಗಲೇ 1750 ಕಿ.ಮೀ.ಗೂ ಅಧಿಕ ದಾರಿಯನ್ನು ಸ್ರವಿಸಿದ್ದಾರೆ. ರಾಮ ಮಂದಿರ ಉದ್ಘಾಟನೆಗೆ ಇನ್ನು ಮೂರು ದಿನಗಳು ಮಾತ್ರ ಬಾಕಿಯಿದ್ದು, ಅಷ್ಟರೊಳಗೆ ಅಯೋಧ್ಯೆಯನ್ನು ತಲುಪುವ ನಿರೀಕ್ಷೆಯನ್ನು ಹೊಂದಿದ್ದಾರೆ.
undefined
ಕೆಎಸ್‌ಆರ್‌ಟಿಸಿ ಉದ್ಯೋಗ: ಎಂಟು ವರ್ಷಗಳಲ್ಲಿ 13,888 ನೌಕರರ ನಿವೃತ್ತಿ, ಕೇವಲ 262 ನೇಮಕಾತಿ
ಇನ್ನು ಪಾದಯಾತ್ರೆಯನ್ನು ಹೊರಟಿರುವ ಗದಗಿನ ಗಾಂಧಿ ಮುತ್ತಣ್ಣ ಅವರು ಗಾಂಧಿಯಂತೆ ಕೈಯಲ್ಲೊಂದು ಕೋಲು, ಬರಿಮೈಗೆ ಒಂದು ಶಾಲು, ಸೊಂಟಕ್ಕೆ ಸುತ್ತಿದ ಪಂಚೆ, ದೊಡ್ಡ ಕನ್ನಡಕ, ಸೊಂಟಕ್ಕೆ ಗಡಿಯಾರ ಸಿಕ್ಕಿಸಿಕೊಂಡು ದೊಡ್ಡ ಹೆಜ್ಜೆಯನ್ನು ಇಡುತ್ತಾ ಪಾದಯಾತ್ರೆ ಹೋಗುತ್ತಿದ್ದಾರೆ. ಇನ್ನು ಅವರ ಎಡಗೈಯಲ್ಲಿ ರಾಮನ ಸಂದೇಶ ಹಾಗೂ ಇತರೆ ಜಾಗೃತಿ ಸಂದೇಶಗಳನ್ನು ಬರೆದಿರುವ ಫಲಕವನ್ನು ಹಿಡಿದು ಹೊರಟಿದ್ದಾರೆ. ಇವರು ಯಾರಿಂದಲೂ ಹಣವನ್ನು ಬೆಡದೇ ಅಲ್ಲಲ್ಲಿ ಊಟ ಹಾಗೂ ನಿದ್ದೆಯನ್ನು ಮಾಡುತ್ತಾ ಸಾಗುತ್ತಿದ್ದಾರೆ.
ಶ್ಲೋಕದ ಜಾಗೃತಿ ಫಲಕ: ನನ್ನ ದೇಶ.. ನನ್ನ ಮಣ್ಣು.. ನನ್ನ ರಾಮ ಶ್ಲೋಕದೊಂದಿಗೆ ಜಾಗೃತಿ ಮೂಡಿಸುತ್ಇದ್ದಾರೆ. ಗಾಂಧಿ ಆಶಯದಂತೆ ನಮ್ಮ ದೇಶ ಮದ್ಯಪಾನ ಮುಕ್ತ ದೇಶವಾಗಬೇಕು. ಪರಿಸರ, ಮಣ್ಣು, ನೀರನ್ನು ಉಳಿಸೋಣ. ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸೋಣ. ವನ್ಯಜೀವಿಗಳ ಸಂರಕ್ಷಣೆ, ಪ್ರಾಣಿ ಹಿಂಸೆ ನಿಲ್ಲಿಸೋಣ ಇತ್ಯಾದಿ ಸಂದೇಶಗಳನ್ನು ಬರೆದುಕೊಂಡಿದ್ದಾರೆ. ಜೊತೆಗೆ, ಮಹಾತ್ಮ ಗಾಂಧಿ ಹೇಳಿದ ಎಲ್ಲ ತತ್ವಗಳನನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕೆಂದು ಹೇಳಿದ್ದಾರೆ.
RamLalla Photo: ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ, ಹೀಗಿದ್ದಾನೆ ನೋಡಿ ಶ್ರೀರಾಮ!
ಗದಗ ಜಿಲ್ಲೆ ಕರ್ಕಿಕಟ್ಟಿ ಗ್ರಾಮದಿಂದ ಅಯೋಧ್ಯೆಯವರಿಗೆ ಸುಮಾರು 2 ಸಾವಿರ ಕಿಲೋಮೀಟರ್ ಇದೆ. ಇನ್ನು ಡಿಸೆಂಬರ್ ತಿಂಗಳಲ್ಲೇ ಅಯೋಧ್ಯೆಯತ್ತ ಹೊರಟಿರುವ ಮುತ್ತಣ್ಣ, ಈಗ ಅಯೋಧ್ಯೆಯ ಸಮೀಪದಲ್ಲಿದ್ದಾರೆ. ಅವರನ್ನು ಹಿಂದಿಯ ಯ್ಯೂಟೂಬರ್ ಒಬ್ಬರು ಮಾತನಾಡಿಸಿದ್ದು, ರಾಮಮಂದಿರ ಉದ್ಘಾಟನೆಗೆ ಎಲ್ಲೆಂದಿಲೋ ಪಾದಯಾತ್ರೆ ಬರುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಮಹಾತ್ಮ ಗಾಂಧಿ ವೇಷಧಾರಿ ಮುತ್ತಣ್ಣ ಅವರನ್ನಿ ನೋಡಿ ಮಾತನಾಡಿಸಿದ್ದಾರೆ. ಮುತ್ತಣ್ಣ ಅನಾರೋಗ್ಯಕ್ಕೆ ಒಳಗಾದವರಂತೆ ಕಂಡಿದ್ದು, ಊಟ ಹಾಗೂ ಚೇತರಿಸಿಕೊಳ್ಳಲು ನೆರವಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.