8 ಲಕ್ಷ ಖರ್ಚು, 3 ವರ್ಷ ಶ್ರಮ, 250ಕ್ಕೂ ಅಧಿಕ ವಿಡಿಯೋ; ದಿಢೀರ್ YouTube ಅಕೌಂಟ್ ಡಿಲೀಟ್ ಮಾಡಿ ಕಣ್ಣೀರಿಟ್ಟ ಯುವತಿ

Published : Dec 18, 2024, 07:50 PM IST
8 ಲಕ್ಷ ಖರ್ಚು, 3 ವರ್ಷ ಶ್ರಮ, 250ಕ್ಕೂ ಅಧಿಕ ವಿಡಿಯೋ; ದಿಢೀರ್ YouTube ಅಕೌಂಟ್ ಡಿಲೀಟ್ ಮಾಡಿ ಕಣ್ಣೀರಿಟ್ಟ ಯುವತಿ

ಸಾರಾಂಶ

ಯುಟ್ಯೂಬರ್ ನಳಿನಿ ಅನಗರ್ ತಮ್ಮ ಯುಟ್ಯೂಬ್ ಚಾನೆಲ್‌ಗಾಗಿ 8 ಲಕ್ಷ ರೂ. ಖರ್ಚು ಮಾಡಿ, 250ಕ್ಕೂ ಹೆಚ್ಚು ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದರು. ಆದರೆ ಇದೀಗ ಖಾತೆಯನ್ನು ಡಿಲೀಟ್ ಮಾಡಿದ್ದಾರೆ.

ನವದೆಹಲಿ: ಯುಟ್ಯೂಬರ್ ನಳಿನಿ ಅನಾಗರ್ ಕಳೆದ ಮೂರು ವರ್ಷಗಳಿಂದ ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಯುಟ್ಯೂಬ್ ಚಾನೆಲ್‌ಗಾಗಿ 3 ವರ್ಷದಲ್ಲಿ 8 ಲಕ್ಷ ರೂಪಾಯಿಯವರೆಗೂ ಹಣ ಖರ್ಚು ಮಾಡಿದ್ದಾರೆ. ಯುಟ್ಯೂಬ್‌ ಅಕೌಂಟ್‌ನಲ್ಲಿ 250ಕ್ಕೂ ಅಧಿಕ ವಿಡಿಯೋಗಳನ್ನು ಹೊಂದಿದ್ದಾರೆ. ಇದೀಗ ಯುಟ್ಯೂಬ್ ಅಕೌಂಟ್ ಡಿಲೀಟ್ ಮಾಡಿರುವ ನಳಿನಿ ಅನಾಗರ್ ಕಣ್ಣೀರು ಹಾಕಿದ್ದಾರೆ. ಯಾಕೆ ಯುಟ್ಯೂಬ್ ಖಾತೆಯನ್ನು ಡಿಲೀಟ್ ಮಾಡಲಾಗಿದೆ ಎಂಬುದರ ಮಾಹಿತಿಯನ್ನು ಸಹ ನಳಿನಿ ಹಂಚಿಕೊಂಡಿದ್ದಾರೆ.

"ನಳಿನಿ ಕಿಚನ್ ರೆಸಿಪಿ" ಹೆಸರಿನ ಯುಟ್ಯೂಬ್ ಚಾನೆಲ್ ನಡೆಸುತ್ತಿದ್ದರು. ಇದೀಗ ಎಕ್ಸ್ ಪೋಸ್ಟ್‌ನಲ್ಲಿ ಚಾನೆಲ್ ಆರಂಭ ಮತ್ತು  ತಾವು ಎದುರಿಸಿರುವ ಸವಾಲುಗಳ ಬಗ್ಗೆ ತಿಳಿಸಿದ್ದಾರೆ. ಇದೇ ಪೋಸ್ಟ್‌ನಲ್ಲಿ ಅಡುಗೆ ಸಾಮಾಗ್ರಿಗಳು ಮತ್ತು ಸ್ಟುಡಿಯೋ ಮಾರಾಟ ಮಾಡುತ್ತಿರೋದಾಗಿ ಘೋಷಣೆಯನ್ನು ಮಾಡಿದ್ದಾರೆ.

ನಾನು ನಳಿನಿ, 
ಯುಟ್ಯೂಬ್ ನಲ್ಲಿ ಕೆರಿಯರ್ ಕಟ್ಟಿಕೊಳ್ಳುವಲ್ಲಿ ನಾನು ಸೋತಿದ್ದೇನೆ. ಹಾಗಾಗಿ ನನ್ನ ಸ್ಟುಡಿಯೋ ಮತ್ತು ಅಡುಗೆ ಸಾಮಾಗ್ರಿ ಹಾಗೂ ಎಲ್ಲಾ ಪಾತ್ರೆಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದೇನೆ. ಖರೀದಿಸುವ ಆಸಕ್ತಿ ಹೊಂದಿರುವವರು ನನ್ನನ್ನ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ. ಯುಟ್ಯೂಬ್ ಚಾನೆಲ್ ಮಾಡಿ ಹೇಗೆ ಆರ್ಥಿಕ ನಷ್ಟ ಅನುಭವಿಸಿದ್ರು  ಎಂಬುದನ್ನು ಸಹ ಎಕ್ಸ್ ಪೋಸ್ಟ್‌ನಲ್ಲಿ ನಳಿನಿ ಹಂಚಿಕೊಂಡಿದ್ದಾರೆ.

ನಾನು ಯುಟ್ಯೂಬ್ ಚಾನೆಲ್‌ಗಾಗಿ ಸ್ಟುಡಿಯೋ ಮಾಡಿಕೊಂಡಿದ್ದೆ. ಅಡುಗೆ ಮಾಡಲು ಪಾತ್ರೆ ಸೇರಿದಂತೆ ಅನೇಕ ಸಾಮಾಗ್ರಿಗಳನ್ನು ಖರೀದಿಸುತ್ತಿದ್ದೆ. ಇದಕ್ಕೆಲ್ಲಾ ನಾನು ಒಟ್ಟು 8 ಲಕ್ಷ ರೂಪಾಯಿಯವರೆಗೆ ಖರ್ಚು ಮಾಡಿದ್ದೇನೆ. ಆದರೆ ನನ್ನ ಬಂಡವಾಳಕ್ಕೆ ಹಿಂದಿರುಗಿ ಹಣ ಬಂದಿಲ್ಲ.  ನನ್ನ ವಿಡಿಯೋ ಶ್ರಮಕ್ಕೆ ಪ್ರತಿಫಲ ಶೂನ್ಯ ಆಗಿದೆ. ಹಾಗಾಗಿ ಅಕೌಂಟ್ ಡಿಲೀಟ್ ಮಾಡಿರೋದಾಗಿ ನಳಿನಿ ತಿಳಿಸಿದ್ದಾರೆ.

ಇದನ್ನೂ ಓದಿ:  ಯುವಕರು ಎತ್ತರ ಕಡಿಮೆಯಿರೋ ಯುವತಿಯರತ್ತ ಆಕರ್ಷಿತರಾಗೋದೇಕೆ? ಇಲ್ಲಿವೆ 5 ಕಾರಣ 

ಮೂರು ವರ್ಷವನ್ನು ಯುಟ್ಯೂಬ್ ಚಾನೆಲ್‌ಗಾಗಿಯೇ ಮೀಸಲಿಟಿದ್ದೆ. ಆದ್ರೆ ಯಾವುದೇ ಸಕಾರಾತ್ಮಕತೆ ನನಗೆ ಸಿಗಲಿಲ್ಲ. ಹಾಗಾಗಿ ಯುಟ್ಯೂಬ್‌ ಚಾನೆಲ್‌ನಿಂದ ಹೊರಬರಲು ನಿರ್ಧರಿಸಿದ್ದು, 3 ವರ್ಷದಲ್ಲಿ 250ಕ್ಕೂ ಅಧಿಕ ವಿಡಿಯೋಗಳನ್ನು ಮಾಡಿದ್ದೇನೆ. ಯಾವ ನಿರೀಕ್ಷೆಯಿಂದ ಬಂದೆನೋ ಆ ಯಶಸ್ಸು ನನ್ನದಾಗಲಿಲ್ಲ.  ಆದ್ದರಿಂದ ಚಾನೆಲ್ ಬಂದ್ ಮಾಡುತ್ತಿದ್ದೇನೆ ಎಂದು ನಳಿನಿ ಹೇಳಿದ್ದಾರೆ. 

ನಳಿನಿ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಮತ್ತು ಅವರ ಚಾನೆಲ್ ನೋಡುಗರು, ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿಕೊಂಡಿದ್ದಾರೆ. ಯಾಕೆ ನಷ್ಟ ಆಯ್ತು ಎಂಬುದರ ಬಗ್ಗೆ ತಜ್ಞರಿಂದ ಸಲಹೆ ಪಡೆದುಕೊಳ್ಳಿ. ಭವಿಷ್ಯದಲ್ಲಿ ನಿಮ್ಮ ವಿಡಿಯೋಗೆ ಹೆಚ್ಚಿನ ವ್ಯೂವ್ ಬರಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕ್ರಿಸ್ಮಸ್, ನ್ಯೂ ಇಯರ್‌ಗೆ ಶುರುವಾಗಿದೆ ಬೋಲ್ಡ್ ಟ್ರೆಂಡ್; ಆದ್ರೆ ಇದು ನೀವು ಯೋಚಿಸುತ್ತಿರೋದು ಮಾತ್ರ ಅಲ್ಲ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್
ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು