
ನಾಗ್ಪುರ(ಅ.13): ‘ಭಾರತ ಇಂದು ಶಕ್ತಿಶಾಲಿಯಾಗಿದ್ದು, ತನ್ನ ವಿಶ್ವಾಸಾರ್ಹತೆಯಿಂದ ಜಾಗತಿಕವಾಗಿ ಗೌರವಿಸಲ್ಪಡುತ್ತಿದೆ. ಆದರೆ ಅದರ ಸ್ಥೈರ್ಯವನ್ನು ಪರೀಕ್ಷಿಸಲು ಕೆಲ ದುಷ್ಟಶಕ್ತಿಗಳು ಪಿತೂರಿ ನಡೆಸುತ್ತಿವೆ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಿಡಿ ಕಾರಿದ್ದಾರೆ. ಅಲ್ಲದೆ, ‘ಬಾಂಗ್ಲಾಗೆ ಭಾರತದಿಂದ ಬೆದರಿಕೆಯಿದೆ ಎಂದು ಬಿಂಬಿಸಿ ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಅಂತೆಯೇ ಪಾಕಿಸ್ತಾನದೊಂದಿಗೆ ಕೈಜೋಡಿಸಲು ಪ್ರಚೋದಿಸಲಾಗುತ್ತಿದೆ’ ಎಂದೂ ಹೇಳಿದ್ದಾರೆ.
ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ಶನಿವಾರ ವಿಜಯದಶಮಿ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ತಲೆ ಮೇಲೆ ಆತಂಕದ ಕತ್ತಿ ತೂಗುತ್ತಿದೆ. ಅಲ್ಲಿನ ಹಿಂದೂಗಳಿಗೆ ಈಗ ಭಾರತ ಸರ್ಕಾರ ಸೇರಿದಂತೆ ಮಾನವೀಯತೆ ಮತ್ತು ಸಾಮರಸ್ಯವನ್ನು ಬೆಂಬಲಿಸುವವರ ಸಹಾಯದ ಅವಶ್ಯಕತೆಯಿದೆ’ ಎಂದರು. ಜೊತೆಗೆ, ಸಮಾಜದ ಒಂದು ವರ್ಗವನ್ನು ಗುರಿಯಾಗಿಸಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಹಳವಳ ವ್ಯಕ್ತಪಡಿಸಿದರು.
ಭಾರತ ಹಿಂದೂ ರಾಷ್ಟ್ರ: ಸುರಕ್ಷತೆಗಾಗಿ ಹಿಂದೂ ಸಮಾಜ ಒಗ್ಗೂಡಬೇಕು: ಭಾಗವತ್
‘ಒಂದು ದೇಶ ತನ್ನ ಪ್ರಜೆಗಳ ವ್ಯಕ್ತಿತ್ವದಿಂದ ಮಹಾನ್ ಎನ್ನಿಸಿಕೊಳ್ಳುತ್ತದೆ. ಭರವಸೆ ಮತ್ತು ಆಕಾಂಕ್ಷೆಗಳ ಜೊತೆಗೆ ಸವಾಲು ಮತ್ತು ಸಮಸ್ಯೆಗಳೂ ದೇಶದಲ್ಲಿವೆ. ದೇಶದ ಕಲ್ಯಾಣ, ಧರ್ಮ, ಸಂಸ್ಕೃತಿ ಹಾಗೂ ಸಮಾಜಕ್ಕಾಗಿ ಮಡಿದ ಅಹಿಲ್ಯಾಬಾಯಿ ಹೋಲ್ಕರ್, ದಯಾನಂದ ಸರಸ್ವತಿ, ಬಿರ್ಸಾ ಮುಂಡಾರಂತಹವರಿಂದ ಸ್ಫೂರ್ತಿ ಪಡೆಯಬೇಕು’ ಎಂದ ಅವರು, ಸಂಘ ಮುಂದಿನ ವರ್ಷ ಶತಮಾನ ಪೂರೈಸಲಿದೆ ಸಂತಸ ವ್ಯಕ್ತಪಡಿಸಿದರು.
ಹಮಾಸ್-ಇಸ್ರೇಲ್ ಸಂಘರ್ಷದಿಂದ ಯುದ್ಧ ಎಲ್ಲಿಯವರೆಗೆ ಹರಡುತ್ತದೆ ಎಂಬ ಆತಂಕವಿದೆ ಎಂದ ಭಾಗವತ್, ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಗಳು ಶಾಂತಿಯುತವಾಗಿ ಸಂಪನ್ನಗೊಂಡ ಕುರಿತು ತೃಪ್ತಿಯಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ