ಭೀಕರ ಗುಂಡಿನ ದಾಳಿಯಲ್ಲಿ ಮಾಜಿ ಸಚಿವ ಬಾಬಾ ಸಿದ್ದಿಕಿ ನಿಧನ, ದೇಹ ಹೊಕ್ಕಿತ್ತು 3 ಬುಲೆಟ್!

By Chethan Kumar  |  First Published Oct 12, 2024, 10:56 PM IST

ಮಹಾರಾಷ್ಚ್ರ ಮಾಜಿ ಸಚಿವ ಬಾಬಾ ಸಿದ್ದಿಕಿ ಮೇಲೆ ಗುಂಡಿನ ದಾಳಿ ನಡೆದಿದೆ. ಮೂರು ಗುಂಡುಗಳು ದೇಹ ಹೊಕ್ಕಿದೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. 


ಮುಂಬೈ(ಅ.12): ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಪೂರ್ವ ಬಾಂದ್ರಾ ಶಾಕರ ಸಿದ್ದಿಕಿ ಪುತ್ರ ಜೀಶಾನ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಏಕಾಏಕಿ ನಡೆದ ಗುಂಡಿನ ದಾಳಿಯಲ್ಲಿ ಬಾಬಾ ಸಿದ್ದಿಕಿ ದೇಹದ ಮೇಲೆ ಮೂರು ಗುಂಡುಗಳು ಹೊಕ್ಕಿದೆ. ತಕ್ಷಣವೇ ಬಾಬಾ ಸಿದ್ದಿಕಿಯನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಸತತ ಚಿಕಿತ್ಸೆ ನಡುವೆ ಬಾಬಾ ಸಿದ್ದಿಕಿ ಮೃತಪಟ್ಟಿದ್ದಾರೆ. ಎದೆ ಭಾಗ, ಹೊಟ್ಟೆ ಸೇರಿದಂತೆ 3 ಗುಂಡುಗಳು ಸಿದ್ದಿಕಿ ದೇಹ ಹೊಕ್ಕಿತ್ತು.  ಬಾಬಾ ಸಿದ್ದಿಕ್ಕಿ ಕಾಂಗ್ರೆಸ್ ತೊರೆದು ಅಜಿತ್ ಪವಾರ್ ಎನ್‌ಸಿಪಿ ಬಣ ಸೇರಿಕೊಂಡಿದ್ದರು.

ಇಂದು(ಅ.12) ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಲೀಲಾವತಿ ಆಸ್ಪತ್ರೆಯಲ್ಲಿ ಸಿದ್ದಿಕಿಗೆ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ.  ಇತ್ತ ಸಿದ್ದಿಕಿ ಮೇಲೆ ಗುಂಡು ಹಾರಿಸಿದ ಆರೋಪಿಗಳ ಪೈಕಿ ಇಬ್ಬರನ್ನು ಪೊಲೀರು ಬಂಧಿಸಿದ್ದಾರೆ. ಬಂಧಿತರಿಂದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.

Tap to resize

Latest Videos

undefined

ಬಾಲಿವುಡ್ ಸೆಲೆಬ್ರೆಟಿಗಳ ಜೊತೆ ಆಪ್ತವಾಗಿರುವ ಬಾಬಾ ಸಿದ್ದಿಕಿ ಪ್ರತಿ ವರ್ಷ ಈದ್ ಹಬ್ಬ ಅದ್ದೂರಿಯಾಗಿ ಆಚರಿಸುತ್ತಾರೆ. ಬಾಲಿವುಡ್‌ನ ಬಹುತೇಕ ಎಲ್ಲಾ ಸೆಲೆಬ್ರೆಟಿಗಳು ಬಾಬಿ ಸಿದ್ದಿಕಿ ಈದ್ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಇದೀಗ ಬಾಬಾ ಸಿದ್ದಿಕಿ ಆಸ್ಪತ್ರೆ ದಾಖಲಾಗುತ್ತಿದ್ದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್, ಸಂಜಯ್ ದತ್ ಸೇರಿದಂತೆ ಹಲವು ನಟರು ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ.  

ಬಾಬಾ ಸಿದ್ದಿಕಿ ಮೇಲೆ ಮೂವರು ಗುಂಡಿನ ದಾಳಿ ನಡೆಸಿದ್ದರು. ಈ ಪೈಕಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ. ಓರ್ವ ಉತ್ತರ ಪ್ರದೇಶ ಮೂಲದವನಾಗಿದ್ದರೆ, ಮತ್ತೊರ್ವ ಆರೋಪಿ ಹರ್ಯಾಣ ಮೂಲದವನು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಮೂರನೇ ಆರೋಪಿ ತಲೆಮರೆಸಿಕೊಂಡಿದ್ದು ಶೋಧ ಕಾರ್ಯ ಮುಂದುವರಿದಿದೆ. 

click me!