ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಜಾತಿ ಗಣತಿ ಮಾಡಲು ಕಾಂಗ್ರೆಸ್ ನಿರ್ಣಯ

Published : Oct 11, 2023, 09:48 AM IST
ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಜಾತಿ ಗಣತಿ ಮಾಡಲು ಕಾಂಗ್ರೆಸ್ ನಿರ್ಣಯ

ಸಾರಾಂಶ

ಕಾಂಗ್ರೆಸ್‌ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಜಾತಿ ಗಣತಿ ನಡೆಸಲು ಮತ್ತು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಜಾತಿ ಗಣತಿ ನಡೆಸಲು ಒತ್ತಡ ಹೇರುವ ನಿರ್ಣಯವನ್ನು ಸರ್ವಾನುಮತದಿಂದ ಕಾಂಗ್ರೆಸ್‌ ಕೈಗೊಂಡಿದೆ. 

ನವದೆಹಲಿ: ಕಾಂಗ್ರೆಸ್‌ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಜಾತಿ ಗಣತಿ ನಡೆಸಲು ಮತ್ತು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಜಾತಿ ಗಣತಿ ನಡೆಸಲು ಒತ್ತಡ ಹೇರುವ ನಿರ್ಣಯವನ್ನು ಸರ್ವಾನುಮತದಿಂದ ಕಾಂಗ್ರೆಸ್‌  ಕೈಗೊಂಡಿದೆ. ಅಲ್ಲದೆ, ದೇಶದಲ್ಲಿ 2024ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶವ್ಯಾಪಿ ಜಾತಿ ಗಣತಿ ನಡೆಸಲಾಗುವುದು. ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಕೂಡಲೇ ಶೇ.33ರಷ್ಟು ಮಹಿಳಾ ಮೀಸಲು ಜಾರಿಗೊಳಿಸಲಾಗುವುದು. ಈ ಶೇ.33 ಮಹಿಳಾ ಮೀಸಲಿನಲ್ಲಿ ಒಬಿಸಿ (ಹಿಂದುಳಿದ ವರ್ಗ) ಮೀಸಲು ಜಾರಿಗೊಳಿಸಲಾಗುವುದು ಎಂದು ನಿರ್ಣಯಿಸಲಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಸುಮಾರು 4 ಗಂಟೆಗಳ ಕಾಲ ನಡೆದ ಪಕ್ಷದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ಗೊತ್ತುವಳಿಗಳನ್ನು ಅಂಗೀಕರಿಸಲಾಗಿದೆ. ಇದೇ ವೇಳೆ, ಜಿ20 ದೇಶಗಳ ಪೈಕಿ ಇಂಥ ಜಾತಿ ಗಣತಿ ನಡೆಸದ ಏಕೈಕ ದೇಶವೆಂದರೆ ಅದು ಭಾರತ. ಇದು ನಾಚಿಕೆಗೇಡಿನ ವಿಷಯ ಎಂದು ಕಾರ್ಯಕಾರಿಣಿ ಸಮಿತಿ ನಿರ್ಣಯ ಟೀಕಿಸಿದೆ. ಸಭೆಯಲ್ಲಿ ಜಾತಿ ಗಣತಿ (caste census) ನಿರ್ಣಯಕ್ಕೆ ಖುದ್ದು ರಾಹುಲ್‌ ಗಾಂಧಿ (Rahul Gandhi) ಆಗ್ರಹಿಸಿದರು. ಆಗ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು, ‘ನಾನು ಶೇ.100ರಷ್ಟು ಜಾತಿ ಗಣತಿ ಪರ ಇದ್ದೇನೆ’ ಎಂದು ಹೇಳಿದರು ಎಂದು ಮೂಲಗಳು ಹೇಳಿವೆ.

ಅಧಿಕಾರದ ಮದದಿಂದ ಮಿದುಳಿಗೂ ಗೆದ್ದಲು ಹಿಡಿದಿದೆ: ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಜೆಡಿಎಸ್‌

ಇನ್ನು ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಸಿಡಬ್ಲ್ಯುಸಿ (CWC)ಕೈಗೊಂಡಿದ್ದು ಐತಿಹಾಸಿಕ ನಿರ್ಧಾರವಾಗಿದೆ. ದೇಶಾದ್ಯಂತ ಜಾತಿ ಗಣತಿ ನಡೆಸುವುದರಿಂದ ಬಡವರ ವಿಮೋಚನೆ ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ, ದೇಶವ್ಯಾಪಿ ಜಾತಿ ಗಣತಿಗೆ ಆಗ್ರಹ ಹಾಗೂ ಮುಂಬರುವ ವಿಧಾನಸಭೆ ಚುನಾವಣೆಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಭಾಗಿಯಾಗಿದ್ದ ನಮ್ಮ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಜಾತಿ ಗಣತಿ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೇ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಗಣತಿಗೆ ಆಗ್ರಹಿಸಲಾಗುತ್ತದೆ. ಇದು ಯಾವುದೇ ಜಾತಿ ಮತ್ತು ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಇದು ಬಡಜನರಿಗೆ ಸಂಬಂಧಿಸಿದ್ದು, ಇದು ರಾಜಕೀಯವಲ್ಲ ಸಾಮಾಜಿಕ ನ್ಯಾಯ’ ಎಂದರು.

ನನಗೆ ಬಿಡುವು ಇಲ್ಲ, ಹೀಗಾಗಿ ನಾನು ಮದುವೆ ಆಗಿಲ್ಲ: ರಾಹುಲ್ ಗಾಂಧಿ

ಜಾತಿಗಣತಿ ದೇಶದ ‘ಎಕ್ಸ್‌ ರೇ’ ಇದ್ದ ಹಾಗೆ : ರಾಹುಲ್‌

ಬೆಹೌರಿ (ಮ.ಪ್ರದೇಶ): ಜಾತಿ ಗಣತಿ ದೇಶದ ‘ಎಕ್ಸ್ ರೇ’ ಇದ್ದ ಹಾಗೆ. ಹೀಗಾಗಿ ಜಾತಿಗಳ ಸ್ಥಿತಿಗತಿ ಅರಿಯಲು ಜಾತಿಗಣತಿ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್‌ ಒತ್ತಾಯಿಸುತ್ತದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಇಲ್ಲಿನ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ರಾಹುಲ್‌ ‘ಜಾತಿಗಣತಿ ಎಂಬುದು ಒಂದೇ ದೇಶದ ಎಕ್ಸ್‌ ರೇ ಇದ್ದ ಹಾಗೆ. ಇದು ಒಬಿಸಿಗಳು, ಬುಡಕಟ್ಟು ಜನಾಂಗಗಳು ಮತ್ತು ದಲಿತರ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುತ್ತದೆ. ದೇಶದಲ್ಲಿನ ಈ ಸಮುದಾಯದ ಜನರು ಘಾಸಿಗೊಂಡಿದ್ದಾರೆ. ಇವರ ನಿಜವಾದ ಸ್ಥಿತಿಗತಿ ತಿಳಿಯಲು ಜಾತಿ ಗಣತಿ ನಡೆಸುವಂತೆ ನಾವು ಕೇಂದ್ರವನ್ನು ಒತ್ತಾಯಿಸುತ್ತೇವೆ. ಕಾಂಗ್ರೆಸ್‌ ಸರ್ಕಾರ (Congress Govt) ಇರುವ ರಾಜಸ್ಥಾನ, ಕರ್ನಾಟಕ ಹಾಗೂ ಛತ್ತೀಸ್‌ಗಢದಲ್ಲಿ ಜಾತಿಗಣತಿ ಪ್ರಕ್ರಿಯಿ ಶುರುವಾಗಿದೆ ಎಂದಿದ್ದಾರೆ. ಅಲ್ಲದೇ ‘ಪ್ರಧಾನಿ ನರೇಂದ್ರ ಮೋದಿ, ಜಾತಿಗಣತಿಯ ಬಗ್ಗೆ ಮಾತನಾಡುತ್ತಿಲ್ಲ’ ಎಂದು ಕಿಡಿಕಾರಿದ್ದಾರೆ.

ಲುಲೂ ಮಾಲ್‌ನಲ್ಲಿ ಭಾರತದ ತಿರಂಗಗಿಂತ ದೊಡ್ಡ ಪಾಕಿಸ್ತಾನ ಧ್ವಜ, ಹೆಚ್ಚಿದ ಆಕ್ರೋಶ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕಕ್ಕೆ ಶೀತ ಅಲೆಯ ಕಂಟಕ: ರಾಯಚೂರಿನಲ್ಲಿ 9.4 ಡಿಗ್ರಿಗೆ ಕುಸಿದ ತಾಪಮಾನ! ಎಲ್ಲೆಲ್ಲಿ ಆರೆಂಜ್ ಅಲರ್ಟ್?
ಮುಕೇಶ್ ಅಂಬಾನಿ 68ರಲ್ಲೂ ಫಿಟ್ & ಎನರ್ಜಿಟಿಕ್‌ ಆಗಿರಲು ಬೆಳಗ್ಗಿನ ಈ ಅಭ್ಯಾಸ ಕಾರಣ!