
ಡೆಹ್ರಡೂನ್ (ಜು.17) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅದ್ಧೂರಿ ಕಾರ್ಯಕ್ರಮದ ತಯಾರಿ ಉಸ್ತುವಾರಿ ಹೊತ್ತಿದ್ದ ಕಾಂಗ್ರೆಸ್ ನಾಯಕನ ಮೇಲೆ ಸಭಾಂಗಣದ ಕಬ್ಬಿಣದ ರಾಡ್ ಬಿದ್ದು ಮೃತಪಟ್ಟ ಘಟನೆ ಉತ್ತರಖಂಡದಲ್ಲಿ ನಡೆದಿದೆ. ಡೆಹ್ರಡೂನ್ ಬನ್ನು ಸ್ಕೂಲ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.ಈ ಕಾರ್ಯಕ್ರಮಕ್ಕಾಗಿ ಸಭಾಂಗಣ, ವೇದಿಕೆ ಸೇರಿದಂತೆ ಎಲ್ಲಾ ಜವಾಬ್ದಾರಿಯನ್ನು ಸ್ಥಳೀಯ ಕಾಂಗ್ರೆಸ್ ಮುಖಂಡ ಅಮರ್ ಮೆಹ್ತಾ ವಹಿಸಿದ್ದರು. ಆದರೆ ದುರಂತ ಘಟನೆಯಲ್ಲಿ ಅಮರ್ ಮೆಹ್ತಾ ಮೃತಪಟ್ಟಿದ್ದಾರೆ.
ಉತ್ತರಖಂಡದಲ್ಲಿ ರಾಹುಲ್ ಗಾಂಧಿ ಛತ್ರೊಂಕಿ ಗುಂಜ್ ಕಾರ್ಯಕ್ರಮದ ತಯಾರಿ ನಡೆಯುತ್ತಿದೆ. ಶಾಲಾ ಮೈದಾನದಲ್ಲಿ ಸಂಭಾಗಣ ಹಾಕಲಾಗಿದೆ. ಉತ್ತರಖಂಡದಲ್ಲಿ ಮಳೆ ಆರಂಭಗೊಂಡಿದೆ. ಪರಿಣಾಮ ತಯಾರಿಗೆ ತೀವ್ರ ಅಡಚಣೆಯಾಗಿದೆ. ಇದೇ ವೇಳೆ ವೇದಿಕೆ ಬಳಿಕ ಸಂಭಾಣಗಲ್ಲಿ ನೀರು ತುಂಬಿಕೊಂಡು ಕಬ್ಬಿಣದ ರಾಡ್ ಕೆಳಕ್ಕೆ ಬಿದ್ದಿದೆ. ತಯಾರಿ ಉಸ್ತುವಾರಿಯಲ್ಲಿ ಅಮರ್ ಮೆಹ್ತಾ ಮೇಲೆ ಬಿದ್ದಿದೆ. ಕಬ್ಬಿಣದ ರಾಡ್ ಬಿದ್ದ ಪರಿಣಾಮ ಅಮರ್ ಮೆಹ್ತಾ ಗಂಭೀರವಾಗಿ ಗಾಯಗೊಂಡಿದ್ದಾರೆ.
ತಕ್ಷಣವೇ ಅಮರ್ ಮೆಹ್ತಾ ಅವರನ್ನು ಬನ್ನು ಶಾಲಾ ಮೈದಾನದ ಪಕ್ಕದಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡ ಪರಿಣಾಮ ಅಮರ್ ಮೆಹ್ತಾ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಘಟನೆಯಿಂದ ಉತ್ತರಖಂಡ ಕಾಂಗ್ರೆಸ್ ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ. ಅಮರ್ ಮೆಹ್ತಾ ಕುಟುಂಬದ ಜೊತೆ ಕಾಂಗ್ರೆಸ್ ಪಕ್ಷ ಇದೆ ಎಂದಿದೆ.
ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಉತ್ತರಖಂಡ ಕಾಂಗ್ರೆಸ್ ಉಪಾಧ್ಯಕ್ಷ ಸೂರ್ಯಕಾಂತ್ ದಸ್ಮಾನ, ಘಟನೆ ನಡೆಯಬಾರದಿತ್ತು. ಆದರೆ ಭಾರಿ ಮಳೆಯಿಂದ ಅಚಾತುರ್ಯ ನಡೆದಿದೆ. ಕಾರ್ಯಕ್ರಮಕ್ಕಾಗಿ ಅಮರ್ ಮೆಹ್ತ ಅವರಿತ ಕೆಲಸ ಮಾಡಿದ್ದರು. ಅವರ ಕೊಡುಗೆಯನ್ನು ಕಾಂಗ್ರೆಸ್ ಸ್ಮರಿಸಿಕೊಳ್ಳಲಿದೆ ಎಂದು ಸೂರ್ಯಕಾಂತ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ