ಕೃಷಿ ಕಾಯ್ದೆ ಹಿಂಪಡೆವವರೆಗೆ ವಿರಮಿಸಲ್ಲ: ರಾಹುಲ್‌

By Suvarna NewsFirst Published Jan 16, 2021, 10:50 AM IST
Highlights

ಕೃಷಿ ಕಾಯ್ದೆ ಹಿಂಪಡೆವವರೆಗೆ ವಿರಮಿಸಲ್ಲ: ರಾಹುಲ್‌|  ದಿಲ್ಲಿಯಲ್ಲಿ ರಾಹುಲ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಪ್ರತಿಭಟನೆ

ನವದೆಹಲಿ(ಜ.16): ವಿವಾದಾತ್ಮಕ ಕೃಷಿ ಕಾಯ್ದೆ ಹಿಂಪಡೆಯುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗುಡುಗಿದ್ದಾರೆ.

ಕಾಯ್ದೆ ವಿರೋಧಿಸಿ ಶುಕ್ರವಾರ ದೆಹಲಿಯಲ್ಲಿ ನಡೆದ ಪ್ರತಿಭಟನಾ ರಾರ‍ಯಲಿಯಲ್ಲಿ ಮಾತನಾಡಿದ ರಾಹುಲ್‌, ಈ ಹಿಂದೆ ಭೂ ಸ್ವಾಧೀನತೆ ಕಾಯ್ದೆ ಮೂಲಕ ರೈತರ ಜಮೀನನ್ನು ಕಸಿದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಯತ್ನವನ್ನು ಕಾಂಗ್ರೆಸ್‌ ವಿಫಲಗೊಳಿಸಿತ್ತು. ಇದೀಗ ಬಿಜೆಪಿ ಮತ್ತು ಅವರ ಇಬ್ಬರಿಂದ ಮೂವರು ಸ್ನೇಹಿತರು ಈ ಕಾಯ್ದೆಗಳ ಮೂಲಕ ರೈತರ ಮೇಲೆ ದಬ್ಬಾಳಿಕೆಗೆ ಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಅಲ್ಲದೇ ಪ್ರತಿಭಟನಾ ರಾರ‍ಯಲಿಯಲ್ಲಿ 100 ರೈತರು ಸತ್ತರೂ ಮೋದಿ ಮನಸು ಕರಗಲ್ಲ. ಅವರಿಗೆ ರೈತರ ಬಗ್ಗೆ ಸ್ವಲ್ಪವೂ ಗೌರವವೂ ಇಲ್ಲ. ಜೊತೆಗೆ ಅವರ ಸಾಮರ್ಥ್ಯದ ಬಗ್ಗೆ ತಿಳುವಳಿಕೆಯೂ ಇಲ್ಲ. ಅದು ಇದ್ದಿದ್ದರೆ ಇಷ್ಟೊತ್ತಿಗಾಗಲೇ ವಿವಾದಾತ್ಮಕ ಕಾಯ್ದೆಗಳನ್ನು ಹಿಂಪಡೆಯಬೇಕಿತ್ತು ಎಂದು ಕಿಡಿಕಾರಿದರು.

click me!