
ವಾಷಿಂಗ್ಟನ್(ನ.16): ಮಾರಕ ಕೊರೋನಾ ವೈರಸ್ ವ್ಯಾಧಿ ಹಾಗೂ ಅದು ಸೃಷ್ಟಿಸಿದ ಆರ್ಥಿಕ ಪರಿಣಾಮಗಳನ್ನು ಎದುರಿಸಲು ಭಾರತ ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಅತೀವ ಮೆಚ್ಚುಗೆ ವ್ಯಕ್ತಪಡಿಸಿದೆ. ಆರ್ಥಿಕತೆಯ ರೂಪಾಂತರಕ್ಕೆ ಈ ವರ್ಷ ಇನ್ನಷ್ಟುಚುರುಕಿನ ಕ್ರಮಗಳನ್ನು ಕೈಗೊಳ್ಳುವಂತೆಯೂ ಹುರಿದುಂಬಿಸಿದೆ.
ಜಾಗತಿಕ ಮಾಧ್ಯಮಗಳ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸಲಿನಾ ಜಾರ್ಜೀವಾ, ಜ.26ರಂದು ಬಿಡುಗಡೆಯಾಗಲಿರುವ ಐಎಂಎಫ್‌ನ ವಿಶ್ವ ಆರ್ಥಿಕ ವರದಿಯಲ್ಲಿ ಭಾರತಕ್ಕೆ ಅಷ್ಟೇನೂ ಕೆಟ್ಟಅಂಶಗಳು ಇರುವುದಿಲ್ಲ. ಏಕೆಂದರೆ ಕೊರೋನಾ ಹಾಗೂ ಅದರ ಆರ್ಥಿಕ ಪರಿಣಾಮ ಎದುರಿಸಲು ಭಾರತ ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಕೃಷಿ ಮಸೂದೆಗೆ ಬೆಂಬಲ:
ಭಾರತ ಸರ್ಕಾರ ಅಂಗೀಕರಿಸಿರುವ ಕೃಷಿ ಮಸೂದೆಗಳು ಕೃಷಿ ಕ್ಷೇತ್ರದ ಸುಧಾರಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳಾಗಿವೆ. ಈ ಸುಧಾರಣೆಯಿಂದಾಗಿ ಹೊಸ ವ್ಯವಸ್ಥೆಗೆ ಹೊರಳುವಾಗ ಪ್ರತಿಕೂಲ ಪರಿಣಾಮಕ್ಕೆ ಒಳಗಾಗುವವರಿಗಾಗಿ ಸಾಮಾಜಿಕ ಸುರಕ್ಷಾ ಜಾಲದ ಅವಶ್ಯಕತೆ ಇದೆ ಎಂದು ಐಎಂಎಫ್ ವಕ್ತಾರ ಗೆರ್ರಿ ರೈಸ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ