ಸೆಪ್ಟೆಂಬರ್ 27ಕ್ಕೆ ಭಾರತ್ ಬಂದ್; ಸಂಪೂರ್ಣ ಬೆಂಬಲ ಘೋಷಿಸಿದ ಕಾಂಗ್ರೆಸ್!

By Suvarna NewsFirst Published Sep 6, 2021, 3:41 PM IST
Highlights
  • ಕೇಂದ್ರದ ವಿರುದ್ದ ರೈತಸಂಘಟನೆಗಳು ಕರೆ ನೀಡಿದ ಭಾರತ್ ಬಂದ್
  • ರೈತ ಸಂಘಟನೆ ಕರೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ 
  • ಕೇಂದ್ರ ಕೃಷಿ ಕಾಯ್ದಿ ವಿರೋಧಿಸಿ ರೈತ ಸಂಘಟನೆಗಳಿಂದ ಭಾರತ್ ಬಂದ್

ನವದೆಹಲಿ(ಸೆ.06): ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಸರಿಸುಮಾರು ಒಂದು ವರ್ಷದ ಸನಿಹದಲ್ಲಿದೆ. ಕೇಂದ್ರ ಕೃಷಿ ಕಾಯ್ದೆ ರದ್ದುಪಡಿಸುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಈಗಾಗಲೇ ರೈತ ಸಂಘಟನೆಗಳು ಖಚಿತಪಡಿಸಿದೆ. ಇದೀಗ ಸೆಪ್ಟೆಂಬರ್ 27 ರಂದು ಭಾರತ್ ಬಂದ್‌ಗೆ ಕರೆ ನೀಡುವ ಮೂಲಕ ಪ್ರತಿಭಟನೆಯನ್ನು ಮತ್ತಷ್ಟು ಚುರುಕುಗೊಳಿಸಲು ರೈತ ಸಂಘಟನೆ ಮುಂದಾಗಿದೆ. ರೈತರು ಕರೆ ನೀಡಿದ ಭಾರತ್ ಬಂದ್‌ಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿದೆ.

ರೈತ ಪ್ರತಿಭಟನೆ ಹೆಸರಲ್ಲಿ ಹಳೇ ಫೋಟೋ ಶೇರ್ ಮಾಡಿ ಪೇಚಿಗೆ ಸಿಲುಕಿದ ರಾಹುಲ್!

ಕೇಂದ್ರಕ್ಕೆ ಪ್ರತಿಭಟನೆ ಬಿಸಿ ಮುಟ್ಟಿಸಲು ಸಂಯುಕ್ತ ಕಿಸಾನ್ ಮೋರ್ಚಾ((SKM)ಸಂಘಟನೆ ಸೆಪ್ಟೆಂಬರ್ 27ರಂದು ಭಾರತ್ ಬಂದ್‌ಗೆ ಕರೆ ನೀಡಿದೆ. ಕಿಸಾನ್ ಮೋರ್ಚಾ ಕರೆಗೆ 300ಕ್ಕೂ ಹೆಚ್ಚು ರೈತ ಸಂಘಟನೆಗಳು ಬೆಂಬಲ ಸೂಚಿಸಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರೈತ ಸಂಘಟನೆ ಕರೆ ನೀಡಿದ ಭಾರತ್ ಬಂದ್‌ಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.

ಕೇಂದ್ರದ ಕೃಷಿ ಮಸೂದೆಯನ್ನು ಪ್ರಬಲವಾಗಿ ವಿರೋಧಿಸಿದ ಪಕ್ಷ ಕಾಂಗ್ರೆಸ್. ರೈತ ಸಂಘಟನೆಗಳ ಪ್ರತಿಭಟನೆಗೆ ಆರಂಭದಿಂದಲೂ ಬೆಂಬಲ ಸೂಚಿಸಿದ ಕಾಂಗ್ರೆಸ್ ಇತ್ತೀಚೆಗೆ ಕೇಂದ್ರದ ವಿರುದ್ಧದ ಪ್ರತಿಭಟನೆ, ಆಂದೋಲನದ ನಾಯಕತ್ವವನ್ನು ದ್ವಿಗ್ವಿಯ್ ಸಿಂಗ್‌ಗೆ ನೀಡಲಾಗಿದೆ. ದಿಗ್ವಿಜಯ್ ಸಿಂಗ್ ನಾಯಕತ್ವದಲ್ಲಿ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ರೈತರ ಕಿಸಾನ್ ಮಹಾಪಂಚಾಯತ್ ಪ್ರತಿಭಟನೆ ಸಂಪೂರ್ಣ ಬೆಂಬಲ ನೀಡಿದೆ.

ಖಲಿಸ್ತಾನ ಉಗ್ರರಿಂದ ರೈತ ಪ್ರತಿಭಟನೆ ಹೈಜಾಕ್; ಎಚ್ಚರಿಕೆ ನೀಡಿದ ರೈತ ಮುಖಂಡನಿಗೆ ಗೇಟ್‌ಪಾಸ್!

ಬಿಜೆಪಿಯೇತರ ಪಕ್ಷಗಳು ಭಾರತ್ ಬಂದ್ ಲಾಭ ಪಡೆಯಲು ಮುಂದಾಗಿದೆ. ಕೇಂದ್ರದ ವಿರುದ್ಧ ಈಗಾಗಲೇ ಬೆಲೆ ಏರಿಕೆ ಪ್ರತಿಭಟನ ನಡೆಯುತ್ತಿದೆ. ಇದರ ಜೊತೆ ಕೃಷಿ ಮಸೂದೆ ವಿರುದ್ಧ ಪ್ತತಿಭಟನೆ ಮೂಲಕ ಕೇಂದ್ರ ಬಿಜಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಹಾಗೂ ವಿಪಕ್ಷಗಳು ಮುಂದಾಗಿದೆ.

ಕೇಂದ್ರ ಸರ್ಕಾರ ರೈತ ಸಂಘಟನೆಗಳ ಬೇಡಿಕೆಯನ್ನು ಈಡೇರಿಸಿಲ್ಲ. ಕೃಷಿ ಕಾಯ್ದೆ ಸಂಪೂರ್ಣವಾಗಿ ರದ್ದು ಮಾಡಬೇಕು ಅನ್ನೋದೇ ನಮ್ಮ ಬೇಡಿಕೆ. ಇದರಲ್ಲಿ ತಿದ್ದುಪಡಿಯ ಅಗತ್ಯವಿಲ್ಲ ಎಂದು ರೈತ ಸಂಘಟನಗಳು ಪುನರುಚ್ಚರಿಸಿದೆ. ಪ್ರತಿಭಟನಾ ನಿರತ ರೈತರೊಂದಿಗೆ ಕಳದ 9 ತಿಂಗಳಲ್ಲಿ ಕೇಂದ್ರ ಸರ್ಕಾರ 11 ಸಭೆ ನಡೆಸಿದೆ. ಆದರೆ 11 ಸಭೆಗಳು ವಿಫಲವಾಗಿದೆ.

click me!