ದೇಶದಲ್ಲಿ ಹಿಂದೂಗಳ ಸಂಖ್ಯೆ ಕುಸಿತಕ್ಕೆ ಕಾಂಗ್ರೆಸ್ ಕಾರಣ: ಬಿಜೆಪಿ ಕೆಂಡ

By Kannadaprabha NewsFirst Published May 10, 2024, 6:58 AM IST
Highlights

ಎಸ್‌ಸಿ, ಎಸ್ಟಿ, ಒಬಿಸಿಗಳ ಮೀಸಲು ಕಸಿದು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಸಂಚು ರೂಪಿಸಿದೆ ಎಂಬ ಬಿಜೆಪಿ ಆರೋಪಗಳ ನಡುವೆಯೇ, ಕಳೆದ 60 ವರ್ಷದಲ್ಲಿ ಭಾರತದಲ್ಲಿ ಹಿಂದೂಗಳ ಸಂಖ್ಯೆ ಕುಸಿತವಾಗಿದೆ ಎಂದು ವರದಿಯೊಂದು ಹೇಳಿದೆ. ಈ ವರದಿ ಬಿಜೆಪಿ ಮತ್ತು ವಿಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. ದೇಶದಲ್ಲಿ ಹಿಂದೂಗಳ ಸಂಖ್ಯೆ ಇಳಿಕೆಗೆ ಕಾಂಗ್ರೆಸ್‌ ಕಾರಣಎಂದುಬಿಜೆಪಿ ಆರೋಪಿಸಿದ್ದರೆ, ಇಂಥ ವರದಿಗಳ ಮೂಲಕ ಸಮಾಜ ವಿಭಜನೆಗೆ ಬಿಜೆಪಿ ಯತ್ನಿಸುತ್ತಿದೆ ಎಂದು ವಿಪಕ್ಷಗಳು ಕಿಡಿಕಾರಿವೆ.

ನವದೆಹಲಿ(ಮೇ.10):  ಎಸ್‌ಸಿ, ಎಸ್ಟಿ, ಒಬಿಸಿಗಳ ಮೀಸಲು ಕಸಿದು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಸಂಚು ರೂಪಿಸಿದೆ ಎಂಬ ಬಿಜೆಪಿ ಆರೋಪಗಳ ನಡುವೆಯೇ, ಕಳೆದ 60 ವರ್ಷದಲ್ಲಿ ಭಾರತದಲ್ಲಿ ಹಿಂದೂಗಳ ಸಂಖ್ಯೆ ಕುಸಿತವಾಗಿದೆ ಎಂದು ವರದಿಯೊಂದು ಹೇಳಿದೆ. ಈ ವರದಿ ಬಿಜೆಪಿ ಮತ್ತು ವಿಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. ದೇಶದಲ್ಲಿ ಹಿಂದೂಗಳ ಸಂಖ್ಯೆ ಇಳಿಕೆಗೆ ಕಾಂಗ್ರೆಸ್‌ ಕಾರಣ ಎಂದು ಬಿಜೆಪಿ ಆರೋಪಿಸಿದ್ದರೆ, ಇಂಥ ವರದಿಗಳ ಮೂಲಕ ಸಮಾಜ ವಿಭಜನೆಗೆ ಬಿಜೆಪಿ ಯತ್ನಿಸುತ್ತಿದೆ ಎಂದು ವಿಪಕ್ಷಗಳು ಕಿಡಿಕಾರಿವೆ.

ಈ ನಡುವೆ ವಿವಿಧ ಹಿಂದೂ ಧಾರ್ಮಿಕ ನಾಯಕರು ಕೂಡಾ ಹಿಂದೂಗಳ ಸಂಖ್ಯೆ ಇಳಿಕೆಯಾಗುತ್ತಿ ರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜನಸಂಖ್ಯಾ ಅಸಮತೋಲನ ಭಾರತದ ಪಾಲಿಗೆ ಒಳ್ಳೆಯದಲ್ಲ ಎಂದು ಹಲವು ಹಿಂದೂ ನಾಯಕರು ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ ಹಿಂದೂ ಸಂಖ್ಯೆ ಕುಸಿತ, ಮುಸ್ಲಿಮರ ಜನಸಂಖ್ಯೆಯಲ್ಲಿ ಏರಿಕೆ, ವರದಿ ಬಹಿರಂಗ!

ಹಿಂದೂಗಳ ಸಂಖ್ಯೆ ಇಳಿಕೆ: 

ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾಮಂಡಳಿ ಯು 'ಧಾರ್ಮಿಕ ಅಲ್ಪಸಂಖ್ಯಾತರ ಪಾಲು: ಅಂತರದೇಶೀಯ ವಿಶ್ಲೇಷಣೆ' ಎಂಬ ವರದಿ ಸಿದ್ದಪಡಿಸಿದೆ. ಅದರಲ್ಲಿ ಭಾರತದಲ್ಲಿ 1950 ಹಾಗೂ 2015ರ ನಡುವಿನ 65 ವರ್ಷಗಳ ಅವಧಿಯಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಸಂಖ್ಯೆ ಶೇ.7.82ರಷ್ಟು ಕುಸಿತವಾಗಿದೆ.

ಮುಸ್ಲಿಮರ ಸಂಖ್ಯೆ ಶೇ.43.15ರಷ್ಟು ಏರಿಕೆಯಾಗಿದೆ ಎಂಬ ಅಚ್ಚರಿಯ ಅಂಶ ಬಹಿರಂಗಪಡಿಸಿದೆ. ಭಾರತದಲ್ಲಿ 65 ವರ್ಷಗಳ ಅವಧಿಯಲ್ಲಿ ಬಹು ಸಂಖ್ಯಾತ ಹಿಂದೂಗಳ ಸಂಖ್ಯೆ ಶೇ.7.82ರಷ್ಟು ಕುಸಿದಿದೆ (1950ರಲ್ಲಿ ಶೇ.84.68 ಇದ್ದುದು 2015ರಲ್ಲಿ ಶೇ.78. 06). ಜನಸಂಖ್ಯೆ ಯಲ್ಲಿ ಮುಸ್ಲಿಮರ ಪಾಲು 1950ರಲ್ಲಿ ಶೇ.9.84ರಷ್ಟು ಇದ್ದುದು 2015ರಲ್ಲಿ ಶೇ.14.09 ರಷ್ಟಾಗಿದೆ. ಏರಿಕೆಯ ಪ್ರಮಾಣ ಶೇ.43.15ರಷ್ಟಿದೆ ಎಂದು ವರದಿ ಹೇಳಿದೆ.

ಬೇರೆ ಬೇರೆ ಧರ್ಮಗಳ ಪಾಲು: 

ಕ್ರಿಶ್ಚಿಯನ್ನರ ಜನಸಂಖ್ಯೆಯ ಪಾಲು ಶೇ.2.24ರಿಂದ ಶೇ.2.36ಕ್ಕೆ ಏರಿಕೆಯಾಗಿದೆ. ಅಂದರೆ 65 ವರ್ಷಗಳ ಅವಧಿಯಲ್ಲಿ ಏರಿಕೆಯ ಪ್ರಮಾಣ ಶೇ.5.38 ರಷ್ಟಿದೆ.ಸಿಖ್ ಜನಸಂಖ್ಯೆ ಶೇ.1.24 ಇದ್ದುದು ಶೇ.1.85ಕ್ಕೆ ಏರಿಕೆಯಾಗಿದೆ. ಏರಿಕೆಯ ಪ್ರಮಾಣ ಶೇ.6.58ರಷ್ಟಿದೆ. ಪಾರ್ಸಿ ಜನಸಂಖ್ಯೆ ಶೇ.85ರಷ್ಟು ಕುಸಿತ ಕಂಡಿದೆ. ಅದು ಶೇ.0.03ರಿಂದ ಶೇ.0.004ಕ್ಕೆ ಕುಸಿತವಾಗಿದೆ. ಜೈನರ ಸಂಖ್ಯೆ ಶೇ.0.45 ಇದ್ದುದು ಶೇ.0.36ಕ್ಕೆ ಕುಸಿತವಾಗಿದೆ ಎಂದು ವರದಿ ತಿಳಿಸಿದೆ.

ಕಾಂಗ್ರೆಸ್ ಕಾರಣ: 

ವರದಿ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಸುಧಾನ್ನು ತ್ರಿವೇದಿ, 'ಹಿಂದೂಗಳ ಸಂಖ್ಯೆ ಕಡಿಮೆಯಾಗಿ ಮುಸ್ಲಿಮರ ಸಂಖ್ಯೆ ನೋಡಿದರೆ, ಇದು ಮುಂದಿನ ದಿನಗಳಲ್ಲಿ ಮೀಸಲು ವ್ಯವಸ್ಥೆಯ ಮೇಲೆ ಬೀರುವ ಪರಿಣಾಮಗಳ ಮೇಲೆ ಆತಂಕ ಸೃಷ್ಟಿಸುತ್ತಿದೆ. ಇದು ಎಸ್‌ಸಿ, ಎಸ್ಟಿ, ಒಬಿಸಿ ಮೀಸಲನ್ನು ಇನ್ನಷ್ಟು ಕಸಿಯುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ ಕಿಡಿಕಾರಿದ್ದಾರೆ.

News Hour: ಮುಸ್ಲಿಮರ ಸಂಖ್ಯೆ ಭಾರಿ ಏರಿಕೆ, ಹಿಂದುಗಳ ಜನಸಂಖ್ಯೆ ಇಳಿಕೆ!

ಇನ್ನೊಂದೆಡೆ ಕೇಂದ್ರ ಸಚಿವ ರಾಜೀವ್ ಚಂದ್ರ ಶೇಖರ್, ನಿರ್ದಿಷ್ಟ ಸಮುದಾಯವೊಂದು ಭಾರತದ ಜನಸಂಖ್ಯಾ ರಚನೆಯನ್ನೇ ಬದಲಿಸಿಸುವ ರೀತಿ ತನ್ನ ಜನಸಂಖ್ಯೆ ಹೆಚ್ಚಿಸುತ್ತಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಈ ಬೆಳವಣಿಗೆಯಲ್ಲಿ ಅಕ್ರಮ ವಲಸಿಗರಪಾಲೆಷ್ಟು? ಮತಾಂತರದ ಪಾಲೆಷ್ಟು? ಇದರ ಪರಿಣಾಮಗಳು ಏನೇನು ಎಂದು ಪ್ರಶ್ನಿಸಿದ್ದಾರೆ. ದೇಶ ವನ್ನು ಇಸ್ಲಾಮಿಕ್ ದೇಶ ಮಾಡುವ ಹುನ್ನಾರ ಎಂದು ಟೀಕಿಸಿದ್ದಾರೆ. ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಭೂತಾನ್ ಮತ್ತು ಅಫ್ಘಾನಿಸ್ತಾನದಲ್ಲಿ ಮುಸ್ಲಿಮರ ಸಂಖ್ಯೆಯೇ ಅಧಿಕವಾಗಿದೆ.

ವರ್ಷ: 1950 ಹಿಂದೂ ಶೇ.84.68, ಮುಸ್ಲಿಂ ಶೇ. 09.84
ವರ್ಷ: 2015 ಹಿಂದೂ ಶೇ.78.06, ಮುಸ್ಲಿಂ ಶೇ.14.09 

click me!