ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ, ಇವಿಎಂಗಳನ್ನ ನದಿಗೆ ಎಸೆಯುತ್ತೇವೆ ಎಂದ ಇಂಡಿಯಾ ಮೈತ್ರಿಯ ಫಾರುಖ್‌ ಅಬ್ದುಲ್ಲಾ!

By Santosh NaikFirst Published May 9, 2024, 10:34 PM IST
Highlights

ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಇವಿಎಂಗಳನ್ನು ನದಿಗೆ ಎಸೆಯುತ್ತೇವೆ ಎಂದು ಮೈತ್ರಿಕೂಟದ ಭಾಗವಾಗಿರುವ ನ್ಯಾಷನಲ್‌ ಕಾನ್ಫರೆನ್ಸ್‌ನ ಅಧ್ಯಕ್ಷ ಫಾರೂಖ್‌ ಅಬ್ದುಲ್ಲಾ ಹೇಳಿದ್ದಾರೆ.

ಗಂದರ್ಬಲ್ (ಮೇ.9): ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋತರೆ, ಹೊಸ ಸರ್ಕಾರವು ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಳಕೆಯನ್ನು ಖಂಡಿತವಾಗಿ ತಿರಸ್ಕಾರ ಮಾಡಲಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಗುರುವಾರ ಹೇಳಿದ್ದಾರೆ. ಇವಿಎಂಗಳನ್ನು ಜಗತ್ತಿನ ಬೇರೆ ಯಾವ ದೇಶಗಳು ಕೂಡ ಬಳಸುತ್ತಿಲ್ಲ, ಆದರೆ ಇಲ್ಲಿ ನಮ್ಮ ಮೇಲೆ ಬಲವಂತವಾಗಿ ಬಳಸುವಂತೆ ಮಾಡಲಾಗುತ್ತಿದೆ ಎಂದು ಅಬ್ದುಲ್ಲಾ ಸಮಾವೇಶದಲ್ಲಿ ಹೇಳಿದ್ದಾರೆ.  "ದೇವರ ಇಚ್ಛೆ ಇದ್ದಲ್ಲಿ, ದೆಹಲಿಯಲ್ಲಿ ಹೊಸ ಸರ್ಕಾರ ಬಂದರೆ, ಆಗ ಈ ಇವಿಎಂ ಯಂತ್ರಗಳನ್ನು ನದಿಗೆ ಎಸೆಯಲಾಗುತ್ತದೆ" ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ತಿಳಿಸಿದ್ದಾರೆ.

"ಈ ಯಂತ್ರ ಕಳ್ಳತನದ ಯಂತ್ರ, ನೀವು ಮತದಾನ ಮಾಡುವಾಗ, ನೀವು ಮತ ​​ಚಲಾಯಿಸುವಾಗ ಧ್ವನಿ ಮತ್ತು ಬೆಳಕು ಇದೆಯೇ ಎಂದು ಖಚಿತಪಡಿಸಿಕೊಳ್ಳಿ, ನಿಮಗೆ ಬೆಳಕು ಕಾಣಿಸದಿದ್ದರೆ, ನಂತರ ಅಲ್ಲಿರುವ ಅಧಿಕಾರಿಗಳನ್ನು ಕೇಳಿ, ನಂತರ ಭಯಪಡಬೇಡಿ. ಹಾಗೆಯೇ ವಿವಿಪ್ಯಾಟ್‌ಅನ್ನು ಪರಿಶೀಲಿಸಿ. ನಿಮ್ಮ ಮತವನ್ನು ಎನ್‌ಸಿ ಚಿಹ್ನೆಯ ಮೇಲೆ ಹಾಕಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ" ಎಂದು ಅಬ್ದುಲ್ಲಾ ಕೇಂದ್ರ ಕಾಶ್ಮೀರ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಹೇಳಿದ್ದಾರೆ.

ಎನ್‌ಸಿ ಅಧ್ಯಕ್ಷ ಶ್ರೀನಗರ ಲೋಕಸಭಾ ಕ್ಷೇತ್ರದ ತಮ್ಮ ಪಕ್ಷದ ಅಭ್ಯರ್ಥಿ ಆಗಾ ಸೈಯದ್ ರುಹುಲ್ಲಾ ಮೆಹದಿ ಪರ ಪ್ರಚಾರ ನಡೆಸುತ್ತಿದ್ದಾರೆ. ಶ್ರೀನಗರ ಕ್ಷೇತ್ರದ ಹಾಲಿ ಸಂಸದರಾಗಿರುವ ಅಬ್ದುಲ್ಲಾ ಅವರು ತಮ್ಮ ಆರೋಗ್ಯದ ಕಾರಣದಿಂದ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಎನ್‌ಸಿ ನಾಯಕ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷವು ದೇಶದಲ್ಲಿ ದ್ವೇಷವನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಮತದಾನದ ನಂತರ ಮತಪೆಟ್ಟಿಗೆಗಳ ಸಾಗಿಸುತ್ತಿದ್ದ ಬಸ್‌ಗೆ ಮಧ್ಯಪ್ರದೇಶದಲ್ಲಿ ಬೆಂಕಿ

2014ರಲ್ಲಿ ತನ್ನನ್ನು ಉನ್ನತ ಹುದ್ದೆಗೆ ಏರಿಸಿದ ವಿಚಾರಗಳನ್ನು ಮೋದಿ ಮರೆತಿದ್ದಾರೆ ಎಂದು ಅವರು ಹೇಳಿದರು. "ಅವರು ಈಗ ಬೆಲೆ ಏರಿಕೆ, ಹಣದುಬ್ಬರ ಇತ್ಯಾದಿಗಳ ಬಗ್ಗೆ ಮಾತನಾಡುವುದಿಲ್ಲ" ಎಂದು ಅಬ್ದುಲ್ಲಾ ಹೇಳಿದರು.

ಚಾಮರಾಜನಗರ ಇವಿಎಂ ಧ್ವಂಸ ಪ್ರಕರಣ: ಪೊಲೀಸರಿಗೆ ಹೆದರಿ ಊರು ಬಿಟ್ಟ ಗ್ರಾಮಸ್ಥರು, ಆಹಾರವಿಲ್ಲದೆ ಪ್ರಾಣಬಿಟ್ಟ ಮೂಕಪ್ರಾಣಿಗಳು..!

click me!