ಕನ್ಯಾವಿವಾಹ ಯೋಜನೆ ಕಿಟ್ಟಲ್ಲಿ ಕಾಂಡೋಮ್: ಕಾಂಗ್ರೆಸ್ ಟೀಕೆಗೆ ನೆಟ್ಟಿಗರು ಗರಂ!

Published : Jun 01, 2023, 11:08 AM ISTUpdated : Jun 01, 2023, 11:11 AM IST
ಕನ್ಯಾವಿವಾಹ ಯೋಜನೆ ಕಿಟ್ಟಲ್ಲಿ ಕಾಂಡೋಮ್: ಕಾಂಗ್ರೆಸ್ ಟೀಕೆಗೆ ನೆಟ್ಟಿಗರು ಗರಂ!

ಸಾರಾಂಶ

ಮದುವೆಯಾಗುವ ಬಡ ಹೆಣ್ಣು ಮಕ್ಕಳಿಗೆ ಅನುಕೂಕಲವಾಗುವಂತೆ ಕನ್ಯಾ ವಿವಾಹ್ ಯೋಜನೆ ಜಾರಿಗೊಳಿಸಿದ್ದು, ಮದುಮಗಳಿಗೆ ನೀಡುವ ಕಿಟ್‌ನಲ್ಲಿ ಗರ್ಭ ನಿರೋಧಕ ಗುಳಿಗೆ ಹಾಗೂ ಕಾಂಡೋಮ್ ಇರಿಸಿದ್ದನ್ನು ವಿಪಕ್ಷಗಳು ಟೀಕಿಸಿವೆ. 

ಭೂಪಾಲ್ (ಜೂ.1): ಬಡ ಯುವತಿಯರಿಗೆ ಅನುಕೂಲವಾಗುವ, ಮಧ್ಯಪ್ರದೇಶ ಬಿಜೆಪಿ ಸರಕಾರದ ಬಹು ನಿರೀಕ್ಷಿತ ಯೋಜನೆ ಕನ್ಯಾ ವಿವಾಹ್ ಹಲವರಿಗೆ ನೆರವಾಗುತ್ತಿದೆ. ಈ ಯೋಜನೆಯ ಫಲಾನುಭವಿಗಳಿಗೆ ನೀಡುವ ಕಿಟ್‌ನಲ್ಲಿ ಮಹಿಳೆಯರ ಅಲಂಕಾರಿಕ ವಸ್ತುಗಳ ಜೊತೆಗೆ ಗರ್ಭ ನಿರೋಧಕ ಮಾತ್ರೆಗಳು ಹಾಗೂ ಕಾಂಡೋಮ್ ಇಟ್ಟಿದ್ದಕೆ ವಿಪಕ್ಷ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ. ಎಲ್ಲಾ ಓಕೆ, ಈ ಕಾಂಡೋಮ್ ಏಕೆ ಎಂದು ಪ್ರಶ್ನಿಸುವ ಮೂಲಕ ಈ ಸರಕಾರಕ್ಕೆ ಮಾನ, ಮರ್ಯಾದೆ ಏನಾದರೂ ಉಳಿದಿದ್ಯಾ ಎಂದು ಪ್ರಶ್ನಿಸಿದೆ. 

ಈ ಸಂಬಂಧ ಕಿಟ್‌ನಲ್ಲಿ ಏನೇನಿವೆ ಎಂದು ತೋರಿಸಿ ಟ್ವೀಟ್ ಮಾಡಿರುವ ಮಧ್ಯಪ್ರದೇಶ ಕಾಂಗ್ರೆಸ್‌ಗೆ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇದರಲ್ಲಿ ತಪ್ಪೇನಿದೆ? ಮದುವೆಯಾಗುವವ ಯುವಕರಿಗೆ ಗರ್ಭನಿರೋಧಕ ಪಾಠ ಮಾಡೋದು ಯಾವಾಗ? ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯಾ ಸ್ಫೋಟಕ್ಕೆ (Population Explosion) ದಾಂಪತಕ್ಯಕ್ಕೆ ಕಾಲಿಡುತ್ತಿರುವ ಜೋಡಿಗೆ ಅರಿವು ಮೂಡಿಸುವ ಮೂಲಕವೇ ಪಾಠ ಮಾಡ ಬೇಕಲ್ಲವೇ? ಭಾತರದಲ್ಲಿ ಗರ್ಭ ನಿರೋಧಕಗಳ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದ್ದು, ಇಂಥ ಟ್ವೀಟ್ ಮಾಡುವ ಮೂಲಕ ಯುವಕರನ್ನು ಕಾಂಗ್ರೆಸ್ ತಪ್ಪು ದಾರಿಗೆ ಎಳೆಯುತ್ತಿದೆ. ದಯವಿಟ್ಟು ಈ ಟ್ವೀಟ್ ಡಿಲೀಟ್ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ. 

ಭಾರತದ ಈ 7 ರಾಜ್ಯಗಳ ಹೆಸರಿನ ಹಿಂದಿನ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ!

ಅಷ್ಟೇ ಅಲ್ಲ ಮದ್ಯ ಪ್ರದೇಶ ಕಾಂಗ್ರೆಸ್ ಟ್ವೀಟರ್ (Twitter) ಅನ್ನು ಯಾರು ಹ್ಯಾಂಡಲ್ ಮಾಡುತ್ತಿದ್ದಾರೆಂದೂ ಪ್ರಶ್ನಿಸಿರುವ ನೆಟ್ಟಿಗರು ಇದ್ರಲ್ಲಿ ತಪ್ಪೇನಿದೆ ಎಂದೂ ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ ಸರಕಾರದ ಈ ಕಾರ್ಯದಲ್ಲಿ ನಾಚಿಕೆಯಾಗುವಂಥದ್ದೂ ಏನೂ ಇಲ್ಲ. ಸರಕಾರ ಯುವಕರಿಗೆ Population Control ಮತ್ತು ಗರ್ಭ ನಿರೋಧಕ (Contraceptives) ಬಳಕೆ ಬಗ್ಗೆ ಈ ರೀತಿ ಅರಿವು ಮೂಡಿಸುತ್ತಿರುವುದು ಹೆಮ್ಮೆಯಾಗುತ್ತಿದೆ ಎಂದೂ ನೆಟ್ಟಿಗರು ಕಾಂಗ್ರೆಸ್ ಟ್ವೀಟಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇನ್ನೂ ಕೆಲವು ನೆಟ್ಟಿಗರ ಪ್ರತಿಕ್ರಿಯೆ ಓದಿದರೆ ನಗು ಬರೋದು ಗ್ಯಾರಂಟಿ (Guarantee). ಇನ್ನೊಂದು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಭಾರತದಲ್ಲಿ ಹುಟ್ಟೋದು ಬೇಡ ಅನ್ನೋ ಕಾರಣಕ್ಕೆ ಸರಕಾರ ಇಂಥ ಕ್ರಮಕ್ಕೆ ಮುಂದಾಗಿದೆ ಎಂದೂ ಹೇಳಿದ್ದಾರೆ. ಸರಕಾರ ಇಂಥದ್ದೊಂದು ಕಾರ್ಯಕ್ಕೆ ಮುಂದಾಗಿದ್ದು ಅತ್ಯುತ್ತಮ ಕಾರ್ಯಗಳಲ್ಲಿ ಒಂದು. ಅದನ್ನು ಶ್ಲಾಘಿಸೋ ಬದಲು ಈ ರೀತಿ ಟ್ವೀಟ್ ಮಾಡಿ ದಾರಿ ತಪ್ಪಿಸೋದ ತಪ್ಪೆಂದು ಹೇಳುತ್ತಿದ್ದಾರೆ. 

ಭಾರತದಲ್ಲಿ ಹಿಂದೂಗಳಿಗೆ ಮಕ್ಕಳೇ ಹುಟ್ಟುತ್ತಿಲ್ಲ ಎಂದು ಸಂಸದೆ ಪ್ರಗ್ಯಾ ಸಿಂಗ್ ಹಿಂದೆ ಹೇಳಿದ ಹೇಳಿಕೆಯನ್ನು ಉಲ್ಲೇಖಿಸಿದ ನೆಟ್ಟಿಗರೊಬ್ಬರು, ಈ ರೀತಿ ಗರ್ಭ ನಿರೋಧಕ ಸಲಹೆ ನೀಡಿದರೆ ಮಕ್ಕಳು ಹೇಗೆ ಹುಟ್ಟುತ್ತಾರೆಂದೂ ಕೇಳಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಟ್ವೀಟಿಗೆ ನೆಟ್ಟಿಗರು ಸೂಕ್ತವಾಗಿಯೇ ವಿರೋಧ ವ್ಯಕ್ತಪಡಿಸಿದ್ದು, ಜನರಲ್ಲಿ ಈ ಬಗ್ಗೆಯೊಂದು ಸೂಕ್ತ ಜಾಗೃತಿ ಮೂಡಿಸಬೇಕೆಂದು ಒಲವು ತೋರುತ್ತಿರುವುದು ಪಾಸಿಟಿವ್ ಬೆಳವಣಿಗೆಯೇ ಸರಿ. 

ಕರ್ನಾಟಕ ಗೆಲುವಿನ ಬಳಿಕ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್‌ ಪಂಚ ಗ್ಯಾರಂಟಿ ಪಾಲಿಟಿಕ್ಸ್‌!

ನವೆಂಬರ್‌ ಒಳಗೆ ವಿಧಾನಸಭೆ ಚುನಾವಣೆ :
ಬಿಜೆಪಿ ನೇತೃತ್ವ ಇರುವ ಮಧ್ಯ ಪ್ರದೇಶದಲ್ಲಿ ಈ ವರ್ಷದ ನವೆಂಬರ್ ಒಳಗೆ 230 ಸದಸ್ಯ ಬಲ ಇರುವ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಮತ್ತೆ ಅಧಿಕಾರಕ್ಕೆ ಬರಲು ಕೇಸರಿ ಪಕ್ಷ ಹವಣಿಸುತ್ತಿದೆ. ಅಲ್ಲದೇ ಕರ್ನಾಟಕದಲ್ಲಿ ಭರ್ಜರಿ ಬಹುಮತ ಪಡೆದು ಬೀಗುತ್ತಿರುವ ಕಾಂಗ್ರೆಸ್ ಇಲ್ಲಿ ಹಾಗೂ ರಾಜಸ್ಥಾನದಲ್ಲಿಯೂ ಮತ್ತೆ ಗೆಲ್ಲುವ ವಿಶ್ವಾಸದಲ್ಲಿದ್ದು, ರಾಜ್ಯದಂತೆಯೂ ಅಲ್ಲಿಯೂ ಐದು ಗ್ಯಾರಂಟಿಗಳನ್ನು ಘೋಷಿಸಲು ನಿರ್ಧರಿಸಿದೆ. 

 

ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ  ಪ್ರಮುಖ ಕಾರಣವಾಗಿರುವ ಸುನೀಲ್ ಕುನುಗೋಲು ಅವರನ್ನೇ ಈ ರಾಜ್ಯಗಳ ಚುನಾವಣೆಗೂ ತಾಂತ್ರಿಕ ಸಲಹೆಗಾರನಾಗಿ (Strategist) ನೇಮಿಸಿಕೊಂಡಿದ್ದು, ಕೇಂದ್ರದಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ ರಣ್‌ವೀರ್‌ ಸಿಂಗ್‌ ಸಿನಿಮಾ!
ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ