ರಾಜಸ್ಥಾನದಲ್ಲೂ 100 ಯುನಿಟ್‌ ವಿದ್ಯುತ್‌ ಫ್ರೀ

By Anusha KbFirst Published Jun 1, 2023, 10:05 AM IST
Highlights

ಕರ್ನಾಟಕ ಚುನಾವಣೆಯಲ್ಲಿ ಜಯಗಳಿಸಿದ ಬೆನ್ನಲ್ಲೇ ರಾಜಸ್ಥಾನದಲ್ಲೂ ಉಚಿತ ವಿದ್ಯುತ್‌ ನೀಡುವುದಾಗಿ ಕಾಂಗ್ರೆಸ್‌ ಘೋಷಿಸಿದೆ. ಎಲ್ಲಾ ಮನೆಗಳಿಗೂ 100 ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡುವುದಾಗಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಘೋಷಣೆ ಮಾಡಿದ್ದಾರೆ. 

ಜೈಪುರ: ಕರ್ನಾಟಕ ಚುನಾವಣೆಯಲ್ಲಿ ಜಯಗಳಿಸಿದ ಬೆನ್ನಲ್ಲೇ ರಾಜಸ್ಥಾನದಲ್ಲೂ ಉಚಿತ ವಿದ್ಯುತ್‌ ನೀಡುವುದಾಗಿ ಕಾಂಗ್ರೆಸ್‌ ಘೋಷಿಸಿದೆ. ಎಲ್ಲಾ ಮನೆಗಳಿಗೂ 100 ಯುನಿಟ್‌ ವಿದ್ಯುತ್‌ ಉಚಿತವಾಗಿ ನೀಡುವುದಾಗಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಬುಧವಾರ ಘೋಷಣೆ ಮಾಡಿದ್ದಾರೆ. ತಿಂಗಳಿಗೆ 100 ಯೂನಿಟ್‌ಗೂ ಹೆಚ್ಚು ವಿದ್ಯುತ್‌ ಬಳಕೆ ಮಾಡುವ ಕುಟುಂಬಗಳಿಗೆ ಮೊದಲ 100 ಯುನಿಟ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ. ವಿದ್ಯುತ್‌ ಬಿಲ್‌ ಎಷ್ಟಾದರೂ ಬರಲಿ ಎಲ್ಲರೂ ಮೊದಲ 100 ಯುನಿಟ್‌ಗೆ ಯಾವುದೇ ಬಿಲ್‌ ಕಟ್ಟಬೇಕಾಗಿಲ್ಲ. ಅಲ್ಲದೇ 200 ಯುನಿಟ್‌ಗಳವರೆಗೆ ಬಳಕೆ ಮಾಡಿದರೆ ಯಾವುದೇ ಸ್ಥಿರ ಸರ್‌ಚಾರ್ಜ್‌ನ್ನು, ಇಂಧನ ಸರ್‌ಚಾರ್ಜ್‌ನ್ನು ಕಟ್ಟಬೇಕಾಗಿಲ್ಲ ಎಂದು ಸಹ ಘೋಷಿಸಿದ್ದಾರೆ.

100 ಯುನಿಟ್‌ನಿಂದ 200 ಯುನಿಟ್‌ವರೆಗೆ ವಿದ್ಯುತ್‌ (Power) ಬಳಕೆ ಮಾಡಿದರೆ ಅದಕ್ಕೆ ಕೇವಲ ವಿದ್ಯುತ್‌ ಬೆಲೆ ಪಾವತಿ ಮಾಡಿದರೆ ಸಾಕು. ಹಾಗೆಯೇ 100 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಕೆ ಮಾಡಿದರೆ ಬಿಲ್‌ನಲ್ಲಿ ‘ಶೂನ್ಯ’ ಎಂದು ನಮೂದಿಸಲಾಗುತ್ತದೆ. ಇದಕ್ಕೆ ಯಾವುದೇ ಬಿಲ್‌ ಕಟ್ಟಬೇಕಾಗಿಲ್ಲ ಎಂದು ಮೂಲಗಳು ತಿಳಿಸಿವೆ.

click me!