ಬಿಜೆಪಿ ಟಿಕೆಟ್ ಮಿಸ್ ಆದ ಬೆನ್ನಲ್ಲೇ ವರುಣ್ ಗಾಂಧಿಗೆ ಕಾಂಗ್ರೆಸ್‌ ಭರ್ಜರಿ ಆಫರ್!

By Suvarna NewsFirst Published Mar 26, 2024, 3:30 PM IST
Highlights

ವರುಣ್ ಗಾಂಧಿಗೆ ಈ ಬಾರಿ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ವರುಣ್ ತಾಯಿ ಮನೇಕಾ ಗಾಂಧಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಫಿಲ್ಬಿಟ್ ಕ್ಷೇತ್ರದ ಹಾಲಿ ಸಂಸದ ವರುಣ್ ಗಾಂಧಿಗೆ ಕಾಂಗ್ರೆಸ್ ಭರ್ಜರಿ ಆಫರ್ ನೀಡಿದೆ.

ನವದೆಹಲಿ(ಮಾ.26) ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ 5ನೇ ಅಭ್ಯರ್ಥಿಗಳ ಪಟ್ಟಿ ಭಾರಿ ಚರ್ಚೆಯಾಗುತ್ತಿದೆ. ಈ ಪಟ್ಟಿಯಲ್ಲಿ ಕೆಲ ಅಚ್ಚರಿ ಮುಖಗಳಿಗೆ ಬಿಜೆಪಿ ಟಿಕೆಟ್ ನೀಡಿದ್ದರೆ, ಹಲವು ಹಾಲಿ ಸಂಸದರಿಗೆ ಟಿಕೆಟ್ ನಿರಕರಿಸಿದೆ. ಈ ಪೈಕಿ ಫಿಲ್ಬಿತ್ ಕ್ಷೇತ್ರದ ಹಾಲಿ ಸಂಸದ ವರುಣ್ ಗಾಂಧಿಗೂ ಟಿಕೆಟ್ ನಿರಾಕರಿಸಲಾಗಿದೆ. ಗಾಂಧಿ ಕುಟುಂಬದ ಕುಡಿ ವರುಣ್ ಗಾಂಧಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡು ಹಲವು ದಿನಗಳಾಗಿವೆ. ಬಿಜೆಪಿ ವಿರುದ್ಧ ಹೇಳಿಕೆ ನೀಡುತ್ತಿದ್ದ ವರುಣ್ ಗಾಂಧಿಗೆ ಟಿಕೆಟ್ ನಿರಾಕರಿಸಲಾಗಿದೆ. ಇದರ ಬೆನಲ್ಲೇ ವರುಣ್ ಗಾಂಧಿಗೆ ಕಾಂಗ್ರೆಸ್ ಆಫರ್ ನೀಡಿದೆ. ಕಾಂಗ್ರೆಸ್ ಪಕ್ಷ ಸೇರಿಕೊಳ್ಳುವಂತೆ ಬಹಿರಂಗ ಆಹ್ವಾನ ನೀಡಿದೆ.

ವರುಣ್ ಗಾಂಧಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಗಾಂಧಿ ಕುಟುಂಬದ ಕುಡಿ ಅನ್ನೋ ಕಾರಣಕ್ಕೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ವರುಣ್ ಗಾಂಧಿ ಸುಶಿಕ್ಷಿತ ನಾಯಕ. ಜೊತೆಗೆ ರಾಜಕೀಯಲ್ಲಿ ಕ್ಲೀನ್ ಇಮೇಜ್ ಇಟ್ಟುಕೊಂಡಿದ್ದಾರೆ. ಹೀಗಾಗಿ ವರುಣ್ ಗಾಂಧಿ ಕಾಂಗ್ರೆಸ್ ಸೇರಿಕೊಂಡರೆ ನಮ್ಮ ಸಂತೋಷ ಇಮ್ಮಡಿಯಾಗಲಿದೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.

ಬಿಜೆಪಿ ಟಿಕೆಟ್ ಉಳಿಸಿಕೊಂಡ ಗಾಂಧಿ ಕುಟುಂಬದ ಸೊಸೆ ಮನೇಕಾ ಗಾಂಧಿ, ವರುಣ್‌ಗೆ ಮಿಸ್ ಆಗಿದ್ದೇಕೆ?

ವರುಣ್ ಗಾಂಧಿಗೆ ಕಾಂಗ್ರೆಸ್ ಬಹಿರಂಗ ಆಹ್ವಾನ ನೀಡಿದೆ. ಇತ್ತ ಕಳೆದ ಕೆಲ ವರ್ಷಗಳಿಂದ ವರುಣ್ ಗಾಂಧಿ ಹೇಳಿಕೆಗಳ ಬಿಜಿಪಿ ಮುಜುಗರ ತಂದಿದೆ. ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ವರುಣ್ ಗಾಂಧಿಗೆ ಟಿಕೆಟ್ ನಿರಾಕರಿಸಿದ ಬೆನ್ನಲ್ಲೇ ಭಾರಿ ಚರ್ಚೆಗಳು ನಡೆಯುತ್ತಿದೆ. ವರುಣ್ ಗಾಂಧಿ ಕಾಂಗ್ರೆಸ್ ಸೇರಿಕೊಳ್ಳಲಿದ್ದಾರೆ, ಪಕ್ಷೇತರವಾಗಿ ಸ್ಪರ್ಧಿಸಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಅಧೀರ್ ರಂಜನ್ ಚೌಧರಿ ಬಹಿರಂಗ ಆಹ್ವಾನ ಭಾರಿ ಕುತೂಹಲ ಕೆರಳಿಸಿದೆ.

ಬಿಜೆಪಿ 111 ಅಭ್ಯರ್ಥಿಗಳ 5ನೇ ಪಟ್ಟಿಯಲ್ಲಿ ವರುಣ್ ಗಾಂಧಿಗೆ ಟಿಕೆಟ್ ಮಿಸ್ ಆಗಿತ್ತು. 2021ರಲ್ಲಿ ಬಿಜೆಪಿ ಸೇರಿಕೊಂಡ ಜಿತಿನ್ ಪ್ರಸಾದ್‌ಗೆ ಫಿಲ್ಬಿಟ್ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಆದರೆ ಸುಲ್ತಾನಪುರದಿಂದ ಮನೇಕಾ ಗಾಂಧಿಗೆ ಟಿಕೆಟ್ ನೀಡಲಾಗಿದೆ. ಫಿಲ್ಬಿಟ್ ಹಾಗೂ ಸುಲ್ತಾನಪುರ ಕ್ಷೇತ್ರದಿಂದ ಮನೇಕಾ ಗಾಂಧಿ ಹಾಗೂ ವರುಣ್ ಗಾಂಧಿ ಕಳೆದ ಎರಡು ದಶಕಗಳಿಂದ ಸ್ಪರ್ಧಿಸಿ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ.

Loksabha Eection 2024: ಬಿಜೆಪಿ 5ನೇ ಲಿಸ್ಟ್‌ನಲ್ಲಿ ನಟಿ ಕಂಗನಾಗೆ ಟಿಕೆಟ್‌: ಉತ್ತರ ಪ್ರದೇಶ ಅಖಾಡದಿಂದ ಗಾಂಧಿ ಪರಿವಾರ ದೂರ..!

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನಿ ಮೋದಿ ವಿರುದ್ಧ ಅಸಮಧಾನ ಹೊಂದಿರು ವರುಣ್ ಗಾಂಧಿ ಹಲವು ಬಾರಿ ಹೇಳಿಕೆಯನ್ನು ನೀಡಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಸ್ಥಾನದ ಮೇಲೂ ಕಣ್ಣಿಟ್ಟಿರುವ ವರುಣ್ ಗಾಂಧಿಗೆ ಇದೀಗ ಬಿಜೆಪಿ ಟಿಕೆಟ್ ಮಿಸ್ ಆಗಿದೆ. ಇದೀಗ ವರುಣ್ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
 

click me!