ಮುಸ್ಲಿಂ ಲೀಗ್‌ ವೋಟ್‌ ಬೇಕು, ಧ್ವಜ ಬೇಡ್ವಾ? ಕಾಂಗ್ರೆಸ್‌ಗೆ ಪ್ರಶ್ನೆ ಮಾಡಿದ ಕೇರಳ ಸಿಎಂ ಪಿಣರಾಯಿ ವಿಜಯನ್‌!

Published : Apr 04, 2024, 04:48 PM IST
ಮುಸ್ಲಿಂ ಲೀಗ್‌ ವೋಟ್‌ ಬೇಕು, ಧ್ವಜ ಬೇಡ್ವಾ? ಕಾಂಗ್ರೆಸ್‌ಗೆ ಪ್ರಶ್ನೆ ಮಾಡಿದ ಕೇರಳ ಸಿಎಂ ಪಿಣರಾಯಿ ವಿಜಯನ್‌!

ಸಾರಾಂಶ

ವಯನಾಡ್‌ನಲ್ಲಿ ರಾಹುಲ್‌ ಗಾಂಧಿ ರೋಡ್‌ಶೋ ವೇಳೆ ಎಲ್‌ಡಿಎಫ್‌ ಹಾಗೂ ಐಯುಎಂಎಲ್‌ ಧ್ವಜಗಳು ಇಲ್ಲದೇ ಇರುವುದಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  

ತಿರುವನಂತಪುರಂ (ಏ.4): ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತೊಮ್ಮೆ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ. ಬುಧವಾರ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಹಾಗೂ ವಯನಾಡ್‌ನ ಹಾಲಿ ಸಂಸದ ರಾಹುಲ್‌ ಗಾಂಧಿ 2024ರ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಿದ್ದರು. ಈ ವೇಳೆ ನಡೆದ ರೋಡ್‌ಶೋ ವೇಳೆ ಕಾಂಗ್ರೆಸ್‌ ಪಕ್ಷದ ಧ್ವಜಗಳು ಮಾತ್ರವೇ ರಾರಾಜಿಸಿದ್ದವು.  ಇದಕ್ಕೆ ಕಿಡಿಕಾರಿರುವ ಕೇರಳ ಸಿಎಂ ಪಿಣರಾಯಿ ವಿಜಯನ್‌, ಕಾಂಗ್ರೆಸ್‌ಗೆ ಈಗಲೂ ಬಿಜೆಪಿ ಕುರಿತಾಗಿ ಭಯ ಇರುವಂತೆ ಕಾಣುತ್ತಿದೆ. ಅದಕ್ಕಾಗಿ ರೋಡ್‌ ಶೋ ವೇಳೆ ಇಂಡಿಯನ್‌ ಮುಸ್ಲಿಂ ಲೀಗ್‌ ಧ್ವಜಗಳು ಕಾಣಿಸಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ತನ್ನ ಧ್ವಜವನ್ನು ಪ್ರದರ್ಶಿಸಲು ಹೆದರುವ ಸ್ಥಿತಿಗೆ ಕುಸಿದಿದೆಯೇ? ಕಾಂಗ್ರೆಸ್ ತ್ರಿವರ್ಣ ಧ್ವಜವನ್ನು ತ್ಯಜಿಸಬೇಕು ಎಂಬ ಸಂಘಪರಿವಾರದ ಬೇಡಿಕೆಗೆ ಅವರು ಮನ್ನಣೆ ನೀಡುತ್ತಿದ್ದಾರೆಯೇ? ಎಂದು 2024 ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ತಮ್ಮ ಚುನಾವಣಾ ಪ್ರಚಾರದ ಭಾಗವಾಗಿ ಕೊಚ್ಚಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಿಣರಾಯಿ ವಿಜಯನ್ ಪ್ರಶ್ನೆ ಮಾಡಿದ್ದಾರೆ. 2019ರ ಲೋಕಸಭಾ ಚುನಾವಣೆಯ ವೇಳೆ ವಯನಾಡ್‌ನಲ್ಲಿ ನಡೆದ ಅಭಿಯಾನದ ವೇಳೆ ಹಸಿರು ಬಾವುಟಗಳು ರಾರಾಜಿಸಿದ್ದವು. ರಾಹುಲ್‌ ಗಾಂಧಿ ಪ್ರಚಾರದಲ್ಲಿ ಪಾಕಿಸ್ತಾನದ ಧ್ವಜಗಳು ರಾರಾಜಿಸಿವೆ ಎನ್ನುವ ಬಿಜೆಪಿಯ ಟೀಕೆಯ ಕಾರಣಕ್ಕಾಗಿ ಈ ಬಾರಿ ಕಾಂಗ್ರೆಸ್‌ ಐಯುಎಂಎಲ್‌ನ ಧ್ವಜವನ್ನು ಕೈಬಿಡುವ ನಿರ್ಧಾರ ಮಾಡಿರಬಹುದು ಎಂದು ಪ್ರಶ್ನೆ ಮಾಡಿದ್ದಾರೆ.

“ರೋಡ್‌ಶೋನಲ್ಲಿ ಐಯುಎಂಎಲ್ ಧ್ವಜವನ್ನು ಪ್ರದರ್ಶಿಸದ ಕಾಂಗ್ರೆಸ್ ಪಕ್ಷದ್ದು ಹೇಡಿತನವಲ್ಲವೇ? ಕಾಂಗ್ರೆಸ್‌ಗೆ ಐಯುಎಂಎಲ್‌ನ ಮತಗಳು ಬೇಕು, ಆದರೆ ಅದರ ಧ್ವಜವಲ್ಲ ಎಂದು ಹೇಳಿದ್ದಾರೆ. ತ್ರಿವರ್ಣವನ್ನು ಎತ್ತಿ ಹಿಡಿಯಲು ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹುತಾತ್ಮರ "ಪ್ರಸಿದ್ಧ ಇತಿಹಾಸ"ವನ್ನು ಕಾಂಗ್ರೆಸ್ ನಾಯಕರು ಮರೆತಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು, ಆದರೆ, ಈ ಧ್ವಜ ಇಲ್ಲಿ "ಜನರ ಧ್ವನಿಯನ್ನು" ಪ್ರತಿನಿಧಿಸುತ್ತದೆ ಎಂದಿದ್ದಾರೆ.

ಬಹುಕೋಟಿ ಕರುವನ್ನೂರ್ ಸಹಕಾರಿ ಬ್ಯಾಂಕ್ ಹಗರಣದಲ್ಲಿ ಹೆಚ್ಚಿನ ಪಕ್ಷದ [ಸಿಪಿಐ(ಎಂ)] ನಾಯಕರನ್ನು ಸಿಲುಕಿಸಲು ಜಾರಿ ನಿರ್ದೇಶನಾಲಯ (ಇಡಿ) ಯೋಜಿಸಿದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ  ವಿಜಯನ್, ಸಂಸ್ಥೆಯು ಆರೋಪಿಸಿದಂತೆ ಪಕ್ಷವು ಬ್ಯಾಂಕ್‌ನಲ್ಲಿ ಯಾವುದೇ ರಹಸ್ಯ ಖಾತೆಯನ್ನು ಹೊಂದಿಲ್ಲ ಎಂದು ಹೇಳಿದರು.   ''ಪಕ್ಷಕ್ಕೆ ಕಪ್ಪುಹಣ ಬಂದಿಲ್ಲವಾದ್ದರಿಂದ ನಮಗೆ ಯಾವುದೇ ರಹಸ್ಯ ಖಾತೆಯ ಅಗತ್ಯವಿಲ್ಲ. ಪಕ್ಷವು ಜನರಿಂದ ಪಡೆದ ದೇಣಿಗೆಯನ್ನು ಲೆಕ್ಕಪರಿಶೋಧನೆ ಮಾಡಿ ಆದಾಯ ತೆರಿಗೆ ಇಲಾಖೆಗೆ ಸರಿಯಾಗಿ ಸಲ್ಲಿಸುತ್ತದೆ ”ಎಂದು ಅವರು ಹೇಳಿದರು.

ದೇವರ ನಾಡು ಕೇರಳದಲ್ಲಿ ಸಾಲದ ಸರ್ಕಾರ, ಕರ್ನಾಟಕದ ಪರಿಸ್ಥಿತಿ ಹೇಗೆ?

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿರುವುದನ್ನು ಉಲ್ಲೇಖಿಸಿದ ವಿಜಯನ್, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರವು ಕೇಂದ್ರೀಯ ಸಂಸ್ಥೆಯನ್ನು ಆಪ್ ವಿರುದ್ಧ ಬಳಸುತ್ತಿದೆ ಎಂದು ಆರೋಪಿಸಿದರು. "ಕಾಂಗ್ರೆಸ್ ತನ್ನ ನಾಯಕರು ಏಜೆನ್ಸಿಯ ಸ್ಕ್ಯಾನರ್‌ನಲ್ಲಿರುವಾಗ ಇಡಿ ವಿರುದ್ಧ ಮಾತನಾಡುತ್ತಾರೆ ಮತ್ತು ಇತರರ ವಿರುದ್ಧ ತನಿಖೆಯನ್ನು ಪ್ರಾರಂಭಿಸಿದಾಗ ಇಡಿಯನ್ನು  ಬೆಂಬಲಿಸುತ್ತಾರೆ" ಎಂದು ಆರೋಪಿಸಿದರು. ಲೋಕಸಭಾ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್‌ಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ನೀಡಿದ ಬೆಂಬಲವು "ಎರಡು ಪಕ್ಷಗಳ ನಡುವಿನ ಒಪ್ಪಂದದ" ಭಾಗವಾಗಿದೆ ಎಂದು ವಿಜಯನ್ ಆರೋಪಿಸಿದ್ದಾರೆ.

News Hour: ದುಡ್ಡಿಲ್ಲದೆ ದೇವರ ನಾಡು ಕೇರಳ ದಿವಾಳಿ, ಸುಪ್ರೀಂ ಕೋರ್ಟ್‌ ಛೀಮಾರಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಮಿಳು ಚಿತ್ರದಲ್ಲಿ ಕನ್ನಡ ಹಾಡು ಬಳಸಿದ್ದಕ್ಕೆ ದಂಡ, ಒಟಿಟಿ ರಿಲೀಸ್‌ಗೂ ಮುನ್ನ 30 ಲಕ್ಷ ಠೇವಣಿ ಇಡಿ ಎಂದ ಕೋರ್ಟ್‌!
ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ